ಕೋಲಾರ: ಸಂಘಟನೆಗಳ ವಾರ್ಷಿಕ ಸಮಾವೇಶದಲ್ಲಿ ಹಿಂದಿನ ಹೋರಾಟಗಳ ಪರಾಮರ್ಶೆ ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಬೇಕೆಂದು ಹಿರಿಯ ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಹೇಳಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಬಹುಜನ ಸಂಘದ 4ನೇ ಜಿಲ್ಲಾ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಡಳಿತ ವ್ಯವಸ್ಥೆ ವೈಫಲ್ಯಗಳಿಂದಾಗಿ ಹೋರಾಟಗಳ ಮೂಲಕ ಸವಲತ್ತು ಸೌಲಭ್ಯ ಪಡೆದುಕೊಳ್ಳುವಂತಾಗಿದ್ದು, ಹೋರಾಟಗಳನ್ನು ವ್ಯವಸ್ಥಿತವಾದ ಪೂರ್ವಸಿದ್ಧತೆ ಮೂಲಕ ಹಮ್ಮಿಕೊಂಡು ಅಗತ್ಯವಿರುವರೆಗೆ ಸವಲತ್ತು ಕೊಡಿಸುವ ಕೆಲಸವಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಬೇಡಿಕೆಗಳು: ಕರ್ನಾಟಕ ಬಹುಜನ ಸಂಘದ ಸಮ್ಮೇಳನದ ನಿರ್ಣಯಗಳಾಗಿ ಭೂರಹಿತರಿಗೆ ತಲಾ 5 ಎಕರೆ ಭೂಮಿ ಮಂಜೂರು ಮಾಡಬೇಕು, ನಿವೇಶನ ಇದ್ದವರಿಗೆ ಮನೆ ಮಂಜೂರು, ಶೋಷಿತ ವರ್ಗದ ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ಹಾಗೂ ಬಡ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಬೇಕೆಂಬ ನಿರ್ಣಯ ತೆಗೆದುಕೊ ಳ್ಳಲಾಗುತ್ತಿದೆ ಎಂದು ಘೋಷಿಸಿದರು. ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ, ವ್ಯವಸ್ಥೆಯನ್ನು ಬದಲಿಸುವ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿ ಸುವುದು ಸಂಘಟನೆಗಳ ಗುರಿಯಾಗಬೇಕೆಂದರು.
ವಸತಿಗೆ ಕಾರ್ಯಾದೇಶ: ತಾಲೂಕಿನ 385 ಗ್ರಾಮಗಳಲ್ಲಿ 1250 ಮಂದಿ ನಿವೇಶನ ರಹಿತ ಫಲಾನುಭವಿಗಳ ಪಟ್ಟಿ ಮಾಡಿ ಸರ್ವೇ ನಂ ಇರುವ ಜಾಗ ಗುರುತಿಸಿ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಸತಿ ರಹಿತ 480 ಫಲಾನುಭವಿ ಗಳಿಗೆ ಮುಂದಿನ ತಿಂಗಳಿನಿಂದ ವಸತಿ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗುವುದು ಎಂದು ತಿಳಿಸಿದರು.
ಕೋಲಾರ ನಗರಸಭೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿಕೊಂಡು ನಿವೇಶನ ಖರೀದಿಸಿ ವಸತಿ ರಹಿತರಿಗೆ ನೀಡಬಹುದಾಗಿದ್ದರೂ ನಗರಸಭೆಯ ಆಸಕ್ತಿ ಬೇರೆಯದ್ದಾಗಿದೆ.ಅಸಂಘಟಿತ ಕಾರ್ಮಿಕರ ಪಟ್ಟಿ ನೀಡಿದರೆ ಕಾರ್ಮಿಕ ಇಲಖೆ ಅಧಿಕಾರಿಗಳನ್ನು ತಾಪಂ ಕಚೇರಿಗೆ ಕರೆಸಿ 15 ದಿನಗಳಲ್ಲಿ ಗುರುತಿನ ಚೀಟಿ ನೀಡುವ ವ್ಯವಸ್ಥೆ ಮಾಡುತ್ತೇನೆಂದರು.
ದಲಿತ ಮುಖಂಡ ವಕ್ಕಲೇರಿ ರಾಜಪ್ಪ, ನಿವೇಶನ ರಹಿತರ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ, ಇವರಿಗೆ ಮಾನವೀಯ ಪ್ರಜ್ಞೆಯೇ ಇಲ್ಲವಾಗಿದೆ ಎಂದು ಟೀಕಿಸಿದರು. ಬಹುಜನ ಸಂಘದ ರಾಜ್ಯಾಧ್ಯಕ್ಷ ಹೂಹಳ್ಳಿ ನಾಗರಾಜ್, ಪ್ರತಿಯೊಬ್ಬ ಭೂ ರಹಿತರಿಗೆ 5 ಎಕರೆ ಜಮೀನು ನೀಡಬೇಕು, ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಮುಖಂಡರಾದ ವರದೇನಹಳ್ಳಿ ವೆಂಕಟೇಶ್,
ಟಿ.ವಿಜಯಕುಮಾರ್, ಎಸ್ಸಿ-ಎಸ್ಟಿ ನೌಕರರ ಸಂಘ ದ ಅಧ್ಯಕ್ಷೆ ವಿಜಯಮ್ಮ, ಸಮಾಜ ಸೇವಕ ಡಾ. ರಮೇಶ್‌ಬಾಬು, ರೈತ ಸಂಘದ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಕಾಂಗ್ರೆಸ್ ಮುಖಂಡ ಬೆಳಗಾನಹಳ್ಳಿ ಮುನಿ ವೆಂಕಟಪ್ಪ, ಬಹುಜನ ಮಹಿಳಾ ಸಂಘದ ರಾಜ್ಯಾ ಧ್ಯಕ್ಷೆ ಸುಜಾತಾ, ಮೈಸೂರಿನ ಮೀಡಿಯಾ ಸಂಪರ್ಕ ಕೇಂದ್ರದ ಸಿಇಒ ದಿವ್ಯಾ ರಂಗೇನಹಳ್ಳಿ, ಬಹುಜನ ಸಂಘದ ಕಾರ್ಯಾಧ್ಯಕ್ಷ ಆರೀಫ್ ಪಾಷಾ ಇದ್ದರು.