Advertisement
ಮಂಗಳವಾರ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ತಿಳಿಸಿದ್ದಾರೆ.
ಸದ್ಯದ ನಿಯಮ ಪ್ರಕಾರ, ಉದ್ಯೋಗ ತೊರೆದ 2 ತಿಂಗಳ ಬಳಿಕವೇ ಭವಿಷ್ಯ ನಿಧಿ ಮೊತ್ತವನ್ನು ವಿಥ್‌ಡ್ರಾ ಮಾಡಲು ಅವಕಾಶ ಇದೆ. ಹೊಸ ನಿಯಮದಂತೆ, ಖಾತೆದಾರರಿಗೆ ಭವಿಷ್ಯ ನಿಧಿ ಮಂಡಳಿಯಲ್ಲಿ ಖಾತೆ ಮುಂದುವರಿಸಲೂ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಹೊಸತಾಗಿ ಉದ್ಯೋಗ ಪಡೆದುಕೊಂಡ ಬಳಿಕ ಅದು ನೆರವಾಗಲಿದೆ.