Advertisement

ಸಚಿವ ಸಂಪುಟ ವಿಸ್ತರಣೆ ಬದಲು ಪುನರ್ ರಚನೆಯಾಗಲಿ: ಮಾಲೀಕಯ್ಯ ಗುತ್ತೇದಾರ

12:26 PM Nov 13, 2020 | keerthan |

ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಬದಲು ಪುನಾರಚನೆ ಮಾಡುವುದು ಸೂಕ್ತವಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ವಿ‌ ಗುತ್ತೇದಾರ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ಪುನಾರಚನೆಯಾದರೆ ಎಲ್ಲರಿಗೂ ಅವಕಾಶ ದೊರೆಯುತ್ತದೆ. ಈಗಾಗಲೇ ಸಚಿವರಾದವರು ಹೊಸಬರಿಗೆ ಸಚಿವರಾಗಲು ಸಹಕರಿಸಬೇಕು ಎಂದರು.

ಸರ್ಕಾರ ರಚನೆಯಾಗುವಲ್ಲಿ ಹಲವರ ತ್ಯಾಗ, ಶ್ರಮ ಅಡಗಿದೆ. ಹೀಗಾಗಿ ಪಕ್ಷಕ್ಕೆ ಬಂದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕಿದೆ. ಜತೆಗೆ ಪಕ್ಷಕ್ಕಾಗಿ ದುಡಿದವರಿಗೂ ಗುರುತಿಸಬೇಕಿದೆ. ಹೀಗಾಗಿ ಸಂಪುಟ ವಿಸ್ತರಣೆ ಬದಲು ಪುನಾರಚನೆಯಾಗಬೇಕೆಂದರು.

ಒಬ್ಬೊಬ್ಬ ಸಚಿವ ರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ಇರುವುದರಿಂದ ಜೊತೆಗೆ ಕೋವಿಡ್ ದಂತಹ ಸಂಕಷ್ಟ ಸ್ಥಿತಿ ಇರುವುದರಿಂದ ಆಡಳಿತ ಇನ್ನಷ್ಟು ಚುರುಕುಗೊಳ್ಳಬೇಕಿದೆ. ಹೀಗಾಗಿ ಕಲಬುರಗಿ ಸೇರಿ ಇತರ ಜಿಲ್ಲೆಗಳಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ಹೊಂದಿರುವುದನ್ನು ಬಿಡುಗಡೆಗೊಳ್ಳುವುದು ಸಹ ಸೂಕ್ತವಾಗಿದೆ ಎಂದು ಇದೇ ಸಂದರ್ಭದಲ್ಲಿ ಗುತ್ತೇದಾರ ಹೇಳಿದರು.

ನನಗಂತತೂ ಮಂತ್ರಿಯಾಗುವ ಆಸೆಯಿಲ್ಲ. ಭಿಕ್ಷೆ ಬೇಡಲ್ಲ. ಕೊಟ್ಟಿದ್ದನ್ನು ಪಡೆಯುವೆ. ಪಕ್ಷದ ಕಾರ್ಯಕರ್ತರನ್ನು ಗುರುತಿಸುವ ಪಕ್ಷ ಬಿಜೆಪಿಯದ್ದಾಗಿದೆ ಎಂದರು.

Advertisement

ಕೋವಿಡ್ ದಾಳಿಯಿಂದ ಸಾವಿನ ಬಾಗಿಲಿಗೆ ಹೋಗಿ ಬರಲಾಗಿದೆ. ನಾಲ್ಕೈದು ದಿನ ಪುನರ್ಜನ್ಮದ ಅನುಭವವಾಯಿತು. ಈಗ ಸ್ವಲ್ಪ ಆರಾಮವಾಗಿದೆ ಎಂದು ಅನುಭವಗಳನ್ನು ಮಾಲೀಕಯ್ಯ ವಿ. ಗುತ್ತೇದಾರ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next