Advertisement

ನಂಬಿಕೆಗಳ ಒಳಿತನ್ನು ಮುಂದಿನ ಪೀಳಿಗೆಗೆ ದಾಟಿಸೋಣ: ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ

11:22 PM Feb 12, 2024 | Team Udayavani |

ಮೂಡುಬಿದಿರೆ: ನಮ್ಮ ಹಿರಿಯರು ಅಗೋಚರ, ಅತೀಂದ್ರಿಯ ಶಕ್ತಿಗಳನ್ನು ಭಕ್ತಿ, ಶ್ರದ್ಧೆಯಿಂದ ನಂಬಿ ಆರಾಧಿಸಿಕೊಂಡಿರುವುದರಿಂದಲೇ ನಾವು ಸುಖವಾಗಿದ್ದೇವೆ. ದೇಹಕ್ಕೆ ಬರುವ ವ್ಯಾಧಿ, ಮನಸ್ಸಿಗೆ ಸಂಬಂಧಿಸಿದ ಆದಿಗಳೆಲ್ಲದರ ಕ್ಷೇಮಕ್ಕೂ ದೈವ, ದೇವರ ಮೇಲಿನ ನಂಬಿಕೆ, ಶ್ರದ್ಧೆ ಕಾರಣ ಎಂಬುದನ್ನು ನಾವು ಮುಂದಿನ ತಲೆಮಾರಿಗೆ ದಾಟಿಸುವ ಅನಿವಾರ್ಯ ಇದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.

Advertisement

ಮೂಡುಬಿದಿರೆಯ ಪುರಾತನ ಆದಿಶಕ್ತಿ ಮಹಾಕಾಳಿ ದೇವಸ್ಥಾನದಲ್ಲಿ ರವಿವಾರ ಸಾನಿಧ್ಯ ಬ್ರಹ್ಮಕಲಶಾಭಿಷೇಕ ದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನವಿತ್ತರು.

ಮಾಜಿ ಸಚಿವ ಕೆ. ಅಭಯಚಂದ್ರ ಅವರು ಮಾಜಿ ಸಚಿವ ದಿ| ಅಮರನಾಥ ಶೆಟ್ಟಿ ಅವರ ಹಿರಿತನದಲ್ಲಿ 14 ವರ್ಷಗಳ ಹಿಂದೆ ಸಂಪೂರ್ಣ ಜೀರ್ಣೋದ್ಧಾರ ಸಹಿತ ಬ್ರಹ್ಮಕಲಶ ನಡೆದಿರುವುದನ್ನು ಸ್ಮರಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ ಮಾತನಾಡಿ, ಪ್ರಪಂಚದಲ್ಲಿರುವ 104 ಶಕ್ತಿ ಪೀಠಗಳ ಪೈಕಿ 54 ಭಾರತದಲ್ಲೇ ಇದ್ದು ಇದುವರೆಗೆ 51 ಶಕ್ತಿ ಪೀಠಗಳನ್ನು ಗುರುತಿಸಲಾಗಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಶಾಸ್ತ್ರೀಯ ದೇವತಾ ರಾಧನೆ ಮತ್ತು ಜನಪದೀಯ ನೆಲೆಯ ದೈವ, ನಾಗ, ಹಸು, ತುಳಸಿ ಸಹಿತ ಪ್ರಕೃತಿಯ ಆರಾಧನೆ ಎರಡರಲ್ಲೂ ಶ್ರದ್ಧೆ, ನಂಬಿಕೆ, ಭಕ್ತಿ ಮುಖ್ಯ, ಜನ ಮರುಳ್ಳೋ ಜಾತ್ರೆ ಮರುಳ್ಳೋ ಎಂಬಂತಾಗಬಾರದು ಎಂದರು.

Advertisement

ಸಮ್ಮಾನ
ದೇವಸ್ಥಾನದಲ್ಲಿ ಈ ಹಿಂದಿನ ಜೀರ್ಣೋದ್ಧಾರ, ರಾಶಿಪೂಜಾದಿ ಗಳಲ್ಲಿ ಅಹರ್ನಿಶಿ ಸೇವೆ ಸಲ್ಲಿಸಿದ್ದ ದಿ| ಮೋಹನದಾಸ ಶೆಟ್ಟಿಯವರ ಪರವಾಗಿ ಪತ್ನಿ, ಯೋಗಗುರು ಪ್ರಫುಲ್ಲ ಎಂ. ಶೆಟ್ಟಿ ಹಾಗೂ ಮಾರಿಗುಡಿ ಫ್ರೆಂಡ್ಸ್‌ ತಂಡದವರನ್ನು ಮುಂಡ್ರುದೆಗುತ್ತು ಜಯಶ್ರೀ ಅಮರನಾಥ ಶೆಟ್ಟಿ ಹಾಗೂ ಡಾ| ಮೋಹನ ಆಳ್ವ ಗೌರವಿಸಿದರು.

ಪುತ್ತಿಗೆ ಸೋಮನಾಥೇಶ್ವರ ದೇಗುಲದ ಆಡಿಗಳ್‌ ಅನಂತಕೃಷ್ಣ ಭಟ್‌, ಮುಂಡ್ರುದೆಗುತ್ತು ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಕೆ. ಶ್ರೀಪತಿ ಭಟ್‌, ವೆಂಕಟರಮಣ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ ಪೈ, ಉದ್ಯಮಿಗಳಾದ ನಾರಾಯಣ ಪಿ.ಎಂ., ಮುನಿಯಾಲು ನಮಿತಾ ಉದಯಕುಮಾರ ಶೆಟ್ಟಿ, ಸುಹಾನ್‌ ಶೆಟ್ಟಿ, ಮೋಹನ ಶೆಟ್ಟಿ, ಪುರಸಭೆ ಸದಸ್ಯರಾದ ನಾಗರಾಜ ಪೂಜಾರಿ, ರಾಜೇಶ್‌ ನಾೖಕ್‌, ದಿವ್ಯಾ ಜಗದೀಶ, ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಎಸ್‌ಕೆಡಿಆರ್‌ಡಿಪಿಯ ಮಮತಾ, ದೇವಸ್ಥಾನದ ಆಡಳಿತ ಮೊಕ್ತೇಸರ ರಾಜ್‌ಮೋಹನ ಶೆಟ್ಟಿ, ವೆಂಕಟರಮಣ ಕಾರಂತ, ಪುತ್ತಿಗೆ ಬರ್ಕೆ ಸಹಿತ ವಿವಿಧ ಮನೆತನಗಳ ಪ್ರಮುಖರು ಉಪಸ್ಥಿತರಿದ್ದರು.

ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ತೋಡಾರು ದಿವಾಕರ ಶೆಟ್ಟಿ ಸ್ವಾಗತಿಸಿ, ವೇಣುಗೋಪಾಲ ಶೆಟ್ಟಿ ಸಭಾ ಕಲಾಪ, ಚೇತನಾ ಹೆಗ್ಡೆ ಸಾಂಸ್ಕೃತಿಕ ಕಲಾಪ ನಿರೂಪಿಸಿ, ಅನಿತಾ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next