Advertisement

‘ಪರಿಸರ ಸಂರಕ್ಷಣೆಗೆ ಸಂಘಟಿತರಾಗೋಣ’

02:50 PM Jun 25, 2018 | Team Udayavani |

ಹಳೆಯಂಗಡಿ: ಪರಿಸರ ಸಂರಕ್ಷಣೆಗೆ ಸಂಘ-ಸಂಸ್ಥೆಗಳು ಪರಸ್ಪರ ಸಂಘಟಿತರಾದರೆ ಸ್ವತ್ಛ ಪರಿಸರ ನಿರ್ಮಾಣ ಮಾಡಲು ಸಾಧ್ಯವಿದೆ. ಧಾರ್ಮಿಕ ಕ್ಷೇತ್ರಗಳ ಪರಿಸರವೂ ಸಹ ಮರ, ಗಿಡಗಳ ಮೂಲಕ ಕಂಗೊಳಿಸುವಂತಾಗಬೇಕು ಎಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಶಶೀಂದ್ರ ಕುಮಾರ್‌ ಹೇಳಿದರು.

Advertisement

ಹಳೆಯಂಗಡಿಯ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಬಳಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯೋಜನೆಯಲ್ಲಿ ಜೂ.24ರಂದು ನಡೆದ ಸಾಮೂಹಿಕ ವನಮಹೋತ್ಸವ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಚಿಕ್ಕಮಗಳೂರಿನ ವೇದ ಕೃಷಿಕ ಕೆ.ಎಸ್‌ .ನಿತ್ಯಾನಂದ ಅವರು ಆಶೀರ್ವಚನ ನೀಡಿದರು.

ಮಂಗಳೂರಿನ ನೆಹರೂ ಯುವ ಕೇಂದ್ರದ ಮಾರ್ಗದರ್ಶನದಲ್ಲಿ ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ರಜತ ಸೇವಾ ಟ್ರಸ್ಟ್‌, ಯುವತಿ ಮತ್ತು ಮಹಿಳಾ ಮಂಡಲ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಚಾರಿಟೆಬಲ್‌ ಟ್ರಸ್ಟ್‌, ಓಂ ಕ್ರಿಕೆಟರ್
ಪಾವಂಜೆ, ಸರ್ವ ಶಕ್ತಿ ವ್ಯಾಯಾಮ ಶಾಲೆ ಪಾವಂಜೆ, ಹಳೆಯಂಗಡಿ ಲಯನ್ಸ್‌ ಕ್ಲಬ್‌ನ ಜಂಟಿಯಾಗಿ ಕಾರ್ಯಕ್ರಮ ಸಂಯೋಜಿಸಲಾಗಿತ್ತು. 

ಜಿ.ಪಂ. ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್‌ ಪ್ರಕಾಶ್‌ ಕಾಮೆರೊಟ್ಟು, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸದಸ್ಯ ವಿನೋದ್‌ ಕುಮಾರ್‌ ಕೊಳುವೈಲು, ಪಡುಪಣಂಬೂರು ಗ್ರಾ.ಪಂ. ಸದಸ್ಯ ವಿನೋದ್‌ ಎಸ್‌. ಸಾಲ್ಯಾನ್‌ ಬೆಳ್ಳಾಯರು, ಪಿಸಿಎ ಬ್ಯಾಂಕ್‌ನ ಅಧ್ಯಕ್ಷ ಎಸ್‌.ಎಸ್‌. ಸತೀಶ್‌ ಭಟ್‌ ಕೊಳುವೈಲು, ನಿರ್ದೇಶಕಿ ರೋಹಿಣಿ ಶೆಟ್ಟಿ, ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ವಾಸು ನಾಯಕ್‌, ಜಾನಪದ ವಿದ್ವಾಂಸ ಡಾ| ಗಣೇಶ್‌ ಅಮೀನ್‌ ಸಂಕಮಾರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಸದಾನಂದ ಗಾಂಭೀರ್‌, ಮಹಾಬಲ ಅಂಚನ್‌, ವ್ಯಾಯಾಮ ಶಾಲೆಯ ಅಶೋಕ್‌ ಪಾವಂಜೆ, ನಾರಾಯಣ ರಾವ್‌ ರಾಮನಗರ, ಸುನಿಲ್‌ ಪಾವಂಜೆ, ಜೀವನ್‌ ಪಾವಂಜೆ, ರಜತ ಸೇವಾ ಟ್ರಸ್ಟ್ ನ ಸ್ಟಾನಿ ಡಿ’ಕೋಸ್ತ, ರವಿ, ಪಿತಾಂಬರ ಶೆಟ್ಟಿಗಾರ್‌, ಯುವಕ ಸಂಘದ ನಾಗೇಶ್‌ ಟಿ.ಜಿ. ಯತೀಶ್‌ ಕೋಟ್ಯಾನ್‌, ಮೋಹನ್‌ ಅಮೀನ್‌, ಯೋಗೀಶ್‌ ಪಾವಂಜೆ, ಜ್ಯೋತಿ ರಾಮಚಂದ್ರ ಉಪಸ್ಥಿತರಿದ್ದರು. 

ಯುವಕ ಮಂಡಲದ ಅಧ್ಯಕ್ಷ ಸುಧಾಕರ್‌ ಆರ್‌. ಅಮೀನ್‌ ಸ್ವಾಗತಿಸಿದರು. ಮಹಿಳಾ ಮಂಡಲದ ಅಧ್ಯಕ್ಷ ಸುಜಾತಾ ವಾಸುದೇವ ವಂದಿಸಿದರು. ಯುವತಿ ಮಂಡಲದ ಅಧ್ಯಕ್ಷೆ ದಿವ್ಯಶ್ರೀ ಕೋಟ್ಯಾನ್‌ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next