ಲೋಕ ನೂರು ಹೇಳುತ್ತದೆ. ಎಲ್ಲ ವನ್ನೂ ಕೇಳಿಸಿಕೊಳ್ಳಬೇಕು. ಉಳಿಸ ಬೇಕಾದ್ದನ್ನು ಮಾತ್ರ ಉಳಿಸಿಕೊಳ್ಳಬೇಕು, ಬಾಕಿ ಉಳಿದ ಎಲ್ಲವನ್ನೂ ಇನ್ನೊಂದು ಕಿವಿ ಯಿಂದ ಆಚೆಗೆ ಬಿಟ್ಟು ಬಿಡಬೇಕು ಮತ್ತು ನಮ್ಮ ನಮ್ಮ ವಿವೇಚನೆಯ ಬೆಳಕಿನಲ್ಲಿ ಮುಂದುವರಿಯಬೇಕು. ಇದು ಸಕಾರಾತ್ಮಕ ಬದುಕಿನ ಅತ್ಯಂತ ದೊಡ್ಡ ತಣ್ತೀ , ಅತ್ಯಂತ ದೊಡ್ಡ ಸತ್ಯ.
ಅವರು ಹೇಳುವುದನ್ನು ಗಮನ ವಿಟ್ಟು ಕೇಳಬೇಕು. ನಿಜವಾಗಿಯೂ ಅದರಲ್ಲಿ ಹುರುಳಿದೆಯೇ ಎಂಬುದನ್ನು ವಿವೇಚನೆಯ ತಕ್ಕಡಿ ಯಲ್ಲಿ ತೂಗಬೇಕು. ಹೇಳುವವರು ನಿಜ ವಾಗಿ ನಮ್ಮ ಹಿತೈಷಿಗಳೇ ಆಗಿರಬಹುದು. ಅವರ ಸಲಹೆಯಲ್ಲಿ ತಥ್ಯವಿರ ಬಹುದು. ಅದನ್ನು ಮಾತ್ರ ಸ್ವೀಕರಿಸೋಣ. ಅದು ಬಿಟ್ಟು ಎಲ್ಲರೂ ಹೇಳಿದ ಎಲ್ಲವನ್ನೂ ಅನುಸರಿಸಿದರೆ ನಮ್ಮ ಬದುಕು ಮೂರಾಬಟ್ಟೆ ಯಾಗಬಲ್ಲುದು.
ಒಬ್ಟಾತ ಒಂದು ಹೊಸ ಅಂಗಡಿ ತೆರೆದ. ಅದು ಮೀನು ಮಾರಾಟ ಮಾಡುವ ಅಂಗಡಿ. ನಾಮ ಫಲಕದ ಕೆಳಗೆ “ಇಲ್ಲಿ ತಾಜಾ ಮೀನನ್ನು ಮಾರಾಟ ಮಾಡಲಾಗುತ್ತದೆ’ ಎಂದು ಬರೆದಿತ್ತು. ಅಂಗಡಿ ತೆರೆದ ಮರುದಿನ ಅಂಗಡಿ ಯಾತನ ಗೆಳೆಯನೊಬ್ಬ ಬಂದ. “ನಾಮಫಲಕದಲ್ಲಿ ಇದೆಂಥದ್ದು ಬರೆ ದದ್ದು ಮಾರಾಯಾ! ಇಲ್ಲಿ ಅಲ್ಲದೆ
ಅಲ್ಲಿ ಮೀನು ಮಾರಾಟ ಮಾಡುತ್ತೀಯಾ? ಇಲ್ಲಿ ಎಂಬುದು ಅಗತ್ಯವೇ ಇಲ್ಲ’ ಎಂದ. ಅಂಗಡಿಯಾತನಿಗೆ ಅದು ಸರಿ ಅನ್ನಿಸಿತು. “ಇಲ್ಲಿ’ ಎಂಬುದನ್ನು ಅಳಿಸಿದ. ಕೊಂಚ ಹೊತ್ತಿನ ಬಳಿಕ ಇನ್ನೊಬ್ಬ ಬಂದ. ಆತ, “ತಾಜಾ ಮೀನುಗಳನ್ನಲ್ಲದೆ ಹಳೆಯ ಮೀನು ಮಾರುತ್ತೀಯೇ ನಯ್ಯ! ತೆಗೆದು ಬಿಡು ಅದನ್ನು’ ಎಂದ. ಸರಿ, ಅದನ್ನೂ ಅಳಿಸಲಾಯಿತು.
ಮಧ್ಯಾಹ್ನದ ಹೊತ್ತಿಗೆ ಬಂದ ಇನ್ನೊಬ್ಬ “ಅಂಗಡಿಯಲ್ಲಿ ಮಾರಾಟ ವನ್ನಲ್ಲದೆ ಇನ್ನೇನು ಮಾಡುತ್ತಾರೆ! ಆ ಪದ ಬೇಕಾಗಿಲ್ಲ’ ಎಂದ. ಅಂಗಡಿಯಾತ ಅದನ್ನೂ ತೆಗೆದ. ಉಳಿದದ್ದು “ಮೀನು’ ಮತ್ತು “ಮಾಡಲಾಗುತ್ತದೆ’ ಮಾತ್ರ. ಸಂಜೆಯ ಹೊತ್ತಿಗೆ ಬಂದ ಇನ್ನೊಬ್ಬ ಗೆಳೆಯ “ಮಾಡಲಾಗುತ್ತದೆ’ ಎಂಬು ದಕ್ಕೆ ಹಿಂದುಮುಂದಿಲ್ಲ ಎಂದುದು ಸರಿ ಎನ್ನಿಸಿ ಅದನ್ನೂ ತೆಗೆ ಯಲಾಯಿತು. . ಮತ್ತೂಬ್ಬ “ಹರದಾರಿ ದೂರದಿಂದ ಇದು ಮೀನಿನಂಗಡಿಯೇ . ಎಂಬುದು ಗೊತ್ತಾಗು ತ್ತದೆ’ ಎಂದ. ಅದನ್ನೂ ಅಳಿಸಿ ಖಾಲಿ ಫಲಕ ಮಾತ್ರ ಉಳಿಯಿತು. ರಾತ್ರಿ ಅಂಗಡಿ ಮುಚ್ಚುವಷ್ಟರಲ್ಲಿ ಮತ್ತೂಬ್ಬ ಹೇಳಿದಂತೆ ಖಾಲಿ ಫಲಕ ಇರುವುದು ಸರಿಯಲ್ಲ ಅನ್ನಿಸಿದ್ದರಿಂದ ಅದನ್ನೂ ಕೆಳಗಿಳಿಸಲಾಯಿತು.
ಮರುದಿನ ಬೆಳಗ್ಗೆ ಮೀನು ಖರೀದಿ ಸಲಿಕ್ಕಾಗಿ ಬಂದ ಒಬ್ಬರು, “ಸ್ವಾಮೀ ಇಷ್ಟು ದೊಡ್ಡ ಅಂಗಡಿ ತೆರೆದಿದ್ದೀರಿ, ಒಂದು ನಾಮಫಲಕ ಬೇಡವೇ’ ಎಂದು ಕೇಳಿದರು. “ಇಲ್ಲಿ ತಾಜಾ ಮೀನು ಮಾರಾಟ ಮಾಡಲಾಗುತ್ತದೆ’ ಎಂದು ಬರೆದ ಫಲಕ ಮತ್ತೆ ಮೇಲೇರಿತು.
ಲೋಕದ ಮಾತುಗಳನ್ನು ಅನುಸರಿಸಿ ನಡೆದರೆ ನಮ್ಮ ಬದುಕು ಕೂಡ ಹೀಗೆಯೇ ಆಗಬಹುದು. ಒಬ್ಬರು ಒಂದು ಹೇಳುತ್ತಾರೆ, ಇನ್ನೊಬ್ಬರು ಅದರ ತದ್ವಿರುದ್ಧ ಸಲಹೆ ನೀಡುತ್ತಾರೆ. ಕತ್ತೆಯ ಜತೆಗೆ ಪೇಟೆಗೆ ಹೊರಟ ರೈತನ ಕಥೆ ನಿಮಗೂ ಗೊತ್ತಿರಬಹುದು. ನಮ್ಮ ಜೀವನ ಅವರು -ಇವರು ಹೇಳಿದಂತೆ ರೂಪುಗೊಳ್ಳಬೇಕಾದದ್ದಲ್ಲ. ಸಲಹೆ, ಟೀಕೆ-ಟಪ್ಪಣಿಗಳಲ್ಲಿ ಯಾವುದು ಯುಕ್ತವೋ, ಯಾವುದು ಸಾಧುವೋ ಅದನ್ನು ಮಾತ್ರ ಸ್ವೀಕರಿಸಬೇಕು, ಅನುಸರಿಸಬೇಕು. ಲೋಕ ಇರುವುದು ನಿಂದೆಗಾಗಿಯೇ ಎಂಬ ಎಚ್ಚರವಿರಲಿ.
ನಮ್ಮೊಳಗಿನ ವಿವೇಚನೆಯ ಬೆಳ ಕನ್ನು ಅನುಸರಿಸಿ ನಡೆಯೋಣ.
(ಸಾರ ಸಂಗ್ರಹ)