Advertisement

ಮನೆಯಿಂದಲೇ ಯೋಗ ದಿನ ಯಶಸ್ವಿಗೊಳಿಸೋಣ

08:32 AM Jun 20, 2020 | Suhan S |

ದಾವಣಗೆರೆ: ಮನೆ ಮತ್ತು ಮನದಿಂದಲೇ ಯೋಗ ಪ್ರಾರಂಭ ಮಾಡುವ ಮುಖೇನ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನವನ್ನು ಯಶಸ್ವಿಗೊಳಿಸೋಣ ಎಂದು ದಾವಣಗೆರೆಯ ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮೆಡಿಕಲ್‌ ಡೈರಕ್ಟರ್‌ ಡಾ| ವಿಂಧ್ಯ ಗಂಗಾಧರ ವರ್ಮ ಮನವಿ ಮಾಡಿದ್ದಾರೆ.

Advertisement

ಯೋಗ ನಮ್ಮ ಪುರಾತನ ತತ್ವಶಾಸ್ತ್ರ. ಒಂದು ಜೀವನ ಶೈಲಿ ಹಾಗೂ ಕಲೆ. ಒಬ್ಬ ಮನುಷ್ಯನ ಸರ್ವೋನ್ನತ ಏಳಿಗೆಗೆ ತುಂಬಾ ಸಹಕಾರಿ. ಯೋಗ ಇಂದು ವಿಶ್ವಮಾನ್ಯವಾಗಿ ಜಾತಿ, ಮತ, ಧರ್ಮಗಳನ್ನು ಮೀರಿ ಬೆಳೆಯುತ್ತಿದೆ. ಎಲ್ಲಾ ಪಂಥದ ಜನರೂ ಒಂದಲ್ಲ ಒಂದು ಕಾರಣಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯೋಗ ವಿಶ್ವದಾದ್ಯಂತ ಜನಪ್ರಿಯವಾಗುತ್ತಿರುವುದೇನೋ ನಿಜ. ಆದರೆ ಮೂಲ ಉದ್ದೇಶವೂ ಮರೆಯಾಗುವಂತಿದೆ. ಯೋಗದಿಂದ ಆಕರ್ಷಕ ಮೈಕಟ್ಟನ್ನು ಪಡೆಯುವ ಹಂಬಲ ಕೆಲವರಿಗಾದರೆ, ಕೆಲವರಿಗೆ ಮುಪ್ಪಿನಲ್ಲೂ ಯುವಕರಂತೆ ಕಾಣಿಸಿಕೊಳ್ಳುವ ಬಯಕೆ. ಇದೆಲ್ಲವೂ ಯೋಗದಿಂದ ಸಾಧ್ಯ. ಭಾರತೀಯ ಪುರಾತನ ವೈದ್ಯಪದ್ಧತಿಗಳ ಪ್ರಕಾರ ಯೋಗದ ಅಭ್ಯಾಸ ಮನುಷ್ಯನ ಆತ್ಮವನ್ನು ಪರಮಾತ್ಮನೊಂದಿಗೆ ಸೇರಿಸುವ ಪ್ರಕ್ರಿಯೆ ಎಂದು ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

ಯೋಗದ ಎಲ್ಲ ಎಂಟು ಅಂಗಗಳು (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರಥ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾ ) ಮನುಷ್ಯನ ಆರೋಗ್ಯ ಮತ್ತು ಜೀವನಕ್ರಮದ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತದೆ. ಈ ಅಭ್ಯಾಸಗಳು ಕೇವಲ ದೇಹವನ್ನು ಮಾತ್ರವಲ್ಲದೆ ಮನಸ್ಸನ್ನೂ ನಿಯಂತ್ರಣಕ್ಕೆ ತಂದುಕೊಳ್ಳುತ್ತದೆ. ಎಲ್ಲರಿಗೂ ತಿಳಿದಂತೆ ಯೋಗವು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಮತೋಲನದ ಸ್ಥಿತಿಗೆ ತರುವಂತದ್ದಾಗಿದೆ. ಹಾಗಾಗಿ ಇಂದು ವಿಶ್ವಮಾನ್ಯವಾಗಿ ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಯೋಗದ ಅಭ್ಯಾಸಗಳಾದ ಆಸನ, ಕ್ರಿಯೆ, ಪ್ರಾಣಾಯಾಮ, ಧಾರಣ, ಧ್ಯಾನವು ವೈಜ್ಞಾನಿಕವಾಗಿ ಹೆಚ್ಚು ಪ್ರಚಲಿತದಲ್ಲಿದ್ದು ದೈಹಿಕ, ಉಸಿರಾಟ, ಮನೋದೈಹಿಕ ತೊಂದರೆ ತಡೆಯುವಲ್ಲಿ ಮತ್ತು ನಿವಾರಿಸುವಲ್ಲಿ, ಜೀವನಕ್ರಮದ ಬದಲಾವಣೆಯಿಂದ ಕಾಣಿಸುವ ತೊಂದರೆ, ಮೆಟಬಾಲಿಕ್‌, ನರಗಳು, ದೀರ್ಘ‌ಕಾಲಿಕ ತೊಂದರೆ ಯಶಸ್ವಿಯಾಗಿ ಸರಿಪಡಿಸುವುದರಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳಿಂದ ದೃಢಪಡಿಸಲಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಯೋಗದ ಅಳವಡಿಕ ನಮ್ಮನ್ನು ಪರಿಪೂರ್ಣ ವ್ಯಕ್ತಿಯನ್ನಾಗಿಸಿ ಯಾವಾಗಲೂ ಸಂತೋಷದಿಂದಿರಲು ಮತ್ತು ಆರೋಗ್ಯವಂತರಾಗಿರಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಜೂ. 21 ರಂದು ಬೆಳಗ್ಗೆ ಸಾರ್ವಜನಿಕರು, ಯೋಗಬಂಧುಗಳು ತಮ್ಮ ಕುಟುಂಬ ದೊಂದಿಗೆ ಆಚರಿಸಿ ಮನೆಯಲ್ಲಿ ಯೋಗ – ಕುಟುಂಬದೊಂದಿಗೆ ಯೋಗ… ಧ್ಯೇಯ ವಾಕ್ಯದೊಂದಿಗೆ ಯಶಸ್ವಿಗೊಳಿಸ ಬೇಕು ಎಂದು ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next