Advertisement
ಹಲವು ಜೀವಜಾಲಗಳನ್ನು ಒಳಗೊಂಡಿರುವ ಗ್ರಹ ಭೂಮಿ. ಇಲ್ಲಿ ಕಂಡುಬರುವಷ್ಟು ಜೀವವೈವಿಧ್ಯ ಬೇರೆಡೆ ಕಂಡು ಬರಲು ಸಾಧ್ಯವಿಲ್ಲ. ಹೀಗಾಗಿ ಜೀವ ವೈವಿಧ್ಯವನ್ನು ಇನ್ನಷ್ಟು ಆಳವಾಗಿ ಅಧ್ಯಯನ ನಡೆಸಲು ಮತ್ತು ಮಹತ್ವವನ್ನು ಸಾರುವ ಉದ್ದೇಶದಿಂದ ವಿಶ್ವಸಂಸ್ಥೆ ಮೇ 22ರಂದು ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಪ್ರತಿ ವರ್ಷ ಒಂದೊಂದು ಧ್ಯೇಯ ಇರಿಸಿಕೊಂಡು ದಿನಾಚರಣೆ ನಡೆಸಲಾಗುತ್ತದೆ.
“ನಮ್ಮ ಜೀವ ವೈವಿಧ್ಯ, ನಮ್ಮ ಆಹಾರ, ನಮ್ಮ ಆರೋಗ್ಯ’ ಈ ವರ್ಷದ ಧ್ಯೇಯ. ಜೀವ ವೈವಿಧ್ಯತೆ ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆ ಮೇಲೆ ನಮ್ಮ ಆಹಾರ, ಪೌಷ್ಟಿಕಾಂಶ ಮತ್ತು ಆರೋಗ್ಯ ಹೇಗೆ ಅವಲಂಬಿತವಾಗಿದೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಈ ಬಾರಿಯ ಧ್ಯೇಯ ಹೊಂದಿದೆ. ಅಲ್ಲದೆ ಮಾನವನ ಅಸ್ತಿತ್ವಕ್ಕೆ ಮತ್ತು ಆತನ ಒಳಿತಿಗೆ ಜೀವ ವೈವಿಧ್ಯ ಹೇಗೆ ಕಾರಣವಾಗಿದೆ ಎನ್ನುವುದರ ಕುರಿತೂ ಮಾಹಿತಿ ನೀಡಲು ಉದ್ದೇಶಿಸಲಾಗಿದೆ. ಮೇ 22 ಯಾಕೆ ?
ವಿಶ್ವಸಂಸ್ಥೆಯ ಎರಡನೇ ಕಮಿಟಿ 1993ರಿಂದ 2000ರವರೆಗೆ ಡಿಸೆಂಬರ್ 29ರಂದು ಜೀವವೈವಿಧ್ಯತೆ ಸಮಾವೇಶ ನಡೆಸುತ್ತಿತ್ತು. ಅನಂತರ ಡಿಸೆಂಬರ್ ರಜಾ ಅವ ಧಿಯಾಗಿದ್ದರಿಂದ ದಿನಾಂಕವನ್ನು ಬದಲಾಯಿಸಿ ಮೇ 22ರಂದು ನಡೆ ಸ ಲು ನಿಶ್ಚಯಿಸಲಾಯಿತು.
Related Articles
– ಹವಾಮಾನ ಬದಲಾವಣೆಯಿಂದಾಗಿ ಜಗತ್ತಿನಲ್ಲಿ ಗಂಟೆಗೆ ಅಂದಾಜು 3 ಜೀವ ವೈವಿಧ್ಯ ಕಣ್ಮರೆಯಾಗುತ್ತಿದೆ.
– ಪ್ರತಿದಿನ ನಾಶವಾಗುವ ಜೀವ ವೈವಿಧ್ಯದ ಸಂಖ್ಯೆ ಸುಮಾರು 100ರಿಂದ 150.
– ಕಳೆದ 30 ವರ್ಷಗಳಲ್ಲಿ ಕೆನಡಾದಲ್ಲಿರುವ ಹಿಮ ಕರಡಿಗಳ ಸಂಖ್ಯೆ ಶೇ. 22ರಷ್ಟು ಕುಸಿತವಾಗಿದೆ. ಇದಕ್ಕೆ ಕಾರಣ ಹವಾಮಾನದಲ್ಲಾದ ಬದಲಾವಣೆ
– ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈಗಾಗಲೇ ಮಳೆ ಕಾಡುಗಳ ಸುಮಾರು 74 ಜಾತಿಯ ಕಪ್ಪೆಗಳು ನಾಶವಾಗಿವೆ.
– 20 ವರ್ಷದ ಹಿಂದೆ ಆಂಟಾರ್ಟಿಕಾದಲ್ಲಿದ್ದ 320 ಜತೆ ಅಡೆಲಿ ಪೆಂಗ್ವಿನ್ ಪೈಕಿ ಈಗ ಉಳಿದಿರುವುದು 54 ಜೋಡಿ ಮಾತ್ರ. ಕಳೆದ 5 ದಶಕದಲ್ಲಿ ಉಷ್ಣತೆ 5.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದ್ದೇ ಇದಕ್ಕೆ ಕಾರಣ.
Advertisement
ಇದು ಕೆಲವು ಉದಾಹರಣೆಗಳಷ್ಟೇ. ಮಾನವನ ಅತಿಯಾದ ಚಟುವಟಿಕೆ, ಪ್ರಕೃತಿ ಮೇಲಿನ ನಿರಂತರ ದೌರ್ಜನ್ಯಗಳಿಂದ ಜೀವ ವೈವಿಧ್ಯ ಅಪಾಯದಂಚಿನಲ್ಲಿದೆ. ಈ ಎಲ್ಲ ಕಾರಣಗಳಿಂದ ದಿನಾಚರಣೆ ಮಹತ್ವ ಪಡೆದುಕೊಂಡಿದೆ.
ಏನೆಲ್ಲ ಚಟುವಟಿಕೆಗಳು?ದಿನಾಚರಣೆ ಪ್ರಯುಕ್ತ ವಿಶ್ವದಾದ್ಯಂತ ಕೈಗೊಳ್ಳುವ ಚಟುವಟಿಕೆಗಳು ಇಂತಿವೆ:
– ಪುಸ್ತಕ, ಅಧ್ಯಯನ ಪೂರಕ ವಿಷಯಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದ.
– ಜೀವ ವೈವಿಧ್ಯತೆಯ ಮಾಹಿತಿಗಳನ್ನು ಶಾಲೆ, ಕಾಲೇಜು ಮುಂತಾದ ಶಿಕ್ಷಣ ಸಂಸ್ಥೆ, ಸಮೂಹ ಮಾಧ್ಯಮಗಳಾದ ದಿನ ಪತ್ರಿಕೆ, ರೇಡಿಯೋ, ಚಾನಲ್‌ಗಳಿಗೆ ಹಂಚಿಕೆ.
– ವಸ್ತು ಪ್ರದರ್ಶನ, ವಿಚಾರಗೋಷ್ಠಿ ಆಯೋಜಿಸಿ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಸಾರ್ವಜನಿ ಕರಿಗೆ ಮಾಹಿತಿ ಹಂಚಿಕೆ.
– ಅಳಿವಿನಂಚಿನಲ್ಲಿರುವ ಜೀವಜಾಲಗಳ ಬಗ್ಗೆ ಮಾಹಿತಿ.
– ಗಿಡಗಳನ್ನು ನೆಡಲು ಯೋಜನೆಗಳ ತಯಾರಿ. - ರಮೇಶ್ ಬಳ್ಳಮೂಲೆ