ಮಂಗಳೂರು: ಸೌಹಾರ್ದ, ಸಹಬಾಳ್ವೆಯಿಂದ ಭಾರತವನ್ನು ರಾಮರಾಜ್ಯವಾಗಿಸೋಣ ಎಂದು ಕುಂಟಾರು ರವೀಶ ತಂತ್ರಿ ಹೇಳಿದರು. ಕೈಕಂಬ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 34ನೇ ವರ್ಷದ ಗಣೇಶೋತ್ಸವ ಸಮಾರಂಭದಲ್ಲಿ ಮಾತ ನಾಡಿದ ಅವರು, ಸನಾತನ ಧರ್ಮ ನಮ್ಮ ಮೂಲ ಬೇರಾಗಬೇಕು. ಆಂತರಿಕ ಶಕ್ತಿಯನ್ನು ಉದ್ದೀಪನ ಗೊಳಿಸುವುದು ನಮ್ಮ ಪ್ರಥಮ ಆದ್ಯತೆ ಯಾಗಬೇಕು ಎಂದು ಹೇಳಿದರು.
ರವಿ ಭಟ್ ಕೌಡೂರು ಮಾತನಾಡಿ, ಧಾರ್ಮಿಕತೆ ನಮ್ಮ ದೇಶದ ಮೂಲಾಧಾರ ಎಂದು ತಿಳಿಸಿದರು.
ಧಾರ್ಮಿಕ ಸಭೆಯ ಅಧ್ಯಕ್ಷತೆ ಯನ್ನು ಶ್ರೀಪತಿ ಭಟ್ ಮೂಡಬಿದಿರೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಕಾಶ ಭುಜಂಗ ಭಂಡಾರಿ, ಮುಂಬಯಿ ಸತೀಶ್ಚಂದ್ರ ಸಾಲಿಯಾನ್, ಮಂಜುಳಾ ಅನಿಲ್ ರಾವ್ ಉಪಸ್ಥಿತ ರಿದ್ದರು.
ಸಮಿತಿಯ ಅಧ್ಯಕ್ಷ ವಿನೋದ್ ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಧರ ರಾವ್ ವಂದಿಸಿದರು. ಕಾರ್ಯದರ್ಶಿ ಮಹೇಶ್ ಶೆಟ್ಟಿ ನಿರ್ವಹಿಸಿದರು.