Advertisement

ಕಾರ್ಮಿಕರ ಪೂರ್ವಾಪರ ತಿಳಿದು ಕೆಲಸ ನೀಡಲು ಎಸ್‌ಪಿ ಸಲಹೆ

01:12 AM Mar 06, 2023 | Team Udayavani |

ಮಡಿಕೇರಿ: ಕೃಷಿ ಚಟುವಟಿಕೆಗೆ ಕಾರ್ಮಿಕರನ್ನು ನೇಮಿಸಿ ಕೊಳ್ಳುವಾಗ ಅವರ ಪೂರ್ವಾಪರ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ತಿಳಿಸಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ನಡೆದ ಪ್ಲಾಂಟರ್ಸ್‌ ಅಸೋಸಿಯೇಶನ್‌ ಪದಾಧಿಕಾರಿಗಳ ಸಭೆಯಲ್ಲಿ ಅವರು ಅಪರಿಚಿತ ಕಾರ್ಮಿಕರ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು.

ಕಾರ್ಮಿಕರ ಪೂರ್ವಾಪರ, ಅಪ ರಾಧ ಹಿನ್ನೆಲೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದ ಜತೆಗೆ ಅವರ ಭಾವಚಿತ್ರ ಹೆಸರು, ವಿಳಾಸ, ಆಧಾರ್‌ ಕಾರ್ಡ್‌, ವಾಸಸ್ಥಳ ದೃಢೀ ಕರಣ ಪತ್ರ, ಮೊಬೈಲ್‌ ನಂಬರ್‌ ಗಳನ್ನು ಪರಿಶೀಲಿಸಿ ದಾಖ ಲಾತಿ ಪಡೆದುಕೊಳ್ಳಬೇಕು. ತೋಟದ ಮಾಲಕರು ಅಪರಾಧ ಚಟು ವಟಿಕೆಗಳು ನಡೆಯದಂತೆ ತಡೆಗಟ್ಟಲು ಮುಂಜಾಗ್ರತ ಕ್ರಮ ವಾಗಿ ತೋಟದ ಒಳಗೆ ಹಾಗೂ ತೋಟದ ರಸ್ತೆ ಬದಿಯಲ್ಲಿ ಸಿ.ಸಿ. ಕೆಮರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಕಾರ್ಮಿಕರು ಕಾನೂನುಬಾಹಿರ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಕೆ.ಎಸ್‌.ಪಿ. ತಂತ್ರಾಂಶವನ್ನು ಬಳಸಿ ತತ್‌ಕ್ಷಣವೇ ಪೊಲೀಸ್‌ ಅಧಿ ಕಾರಿಗಳಿಗೆ ಮಾಹಿತಿಯನ್ನು ನೀಡುವಂತೆ ಸೂಚಿಸಿದರು.

ಮರದ ಏಣಿ ಬಳಸಲು ಸೂಚನೆ
ಕಾರ್ಮಿಕರು ಕಾಳುಮೆಣಸು ಕೊಯ್ಯಲು ಹಾಗೂ ಮರ ಕಪಾತು ಮಾಡಲು ಅಲ್ಯುಮೀನಿಯಂ ಏಣಿ, ದೋಟಿಗಳನ್ನು ಬಳಸುತ್ತಿದ್ದು, ಅಜಾಗರೂಕತೆಯಿಂದ ವಿದ್ಯುತ್‌ ತಂತಿಗೆ ತಗುಲಿ ಕಾರ್ಮಿಕರು ಮೃತಪಟ್ಟ ಘಟನೆಗಳು ವರದಿಯಾಗುತ್ತಿವೆ. ಇದನ್ನು ತಡೆಗಟ್ಟಲು ಮರ, ಬಿದಿರಿನ ಏಣಿ ಅಥವಾ ಫೈಬರ್‌ (ಪ್ಲಾಸ್ಟಿಕ್‌) ಏಣಿಗಳನ್ನು ಬಳಸುವುದರಿಂದ ಪ್ರಾಣಾಪಾಯ ತಡೆಗಟ್ಟಬಹುದು. ಈ ಬಗ್ಗೆ ತೋಟದ ಮಾಲಕರು ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next