ಮನೆಗಳ ಒಳಗಿನ ವಿನ್ಯಾಸಗಳು, ವಿವಿಧ ದಿಕ್ಕುಗಳನ್ನು ನಿರ್ದಿಷ್ಟ ಕ್ರಮದಲ್ಲಿಯೇ ಬಳಸಿಕೊಳ್ಳುವುದು ಹೇಗೆ ಒಳಿತೋ, ಅಪೇಕ್ಷಣೀಯವೋ ಹಾಗೇ, ಮನೆ/ ಫ್ಲ್ಯಾಟ್ ಆಯ್ಕೆಯ ಸಂದರ್ಭದಲ್ಲಿ ಸ್ಥಳದ ಆಕೃತಿಗಳು ಕೂಡಾ ನಿರ್ದಿಷ್ಟ ಯುಕ್ತಾಯುಕ್ತತೆಗಳನ್ನು ಅನುಸರಿಸಿಕೊಂಡಿರುವುದು ಅವಶ್ಯವಾಗಿದೆ. ಒಂದು ಫ್ಲ್ಯಾಟ್ ಮನೆಯ ಸಂಬಂಧವಾದದ್ದು ಈಶಾನ್ಯದ ಕಡೆಗೆ ವಿಸ್ತರಿಸಿಕೊಂಡಿದ್ದರೆ ಇದು ಒಳಿತುಗಳಿಗೆ ಕಾರಣವಾಗುತ್ತದೆಂಬುದು ಗಮನಾರ್ಹವಾಗಿದೆ.
ವಾಸ್ತುಪುರುಷನ ಶಿರೋಭಾಗವು ಈಶಾನ್ಯದತ್ತಲೇ ಪ್ರಬಲವಾದ ಚಿತ್ತವನ್ನು ಫಲವಂತಿಕೆಯಿಂದ ಹರಿಸುತ್ತದೆಯಾದ್ದರಿಂದ, ಇದು ಬಹುರೀತಿಯಲ್ಲಿ ಸಂಪನ್ನವೆನಿಸುತ್ತದೆ. ಸರ್ವಾಭಿಷ್ಟಕರನಾದ ಶಿವನು ಈಶಾನ್ಯದತ್ತ ತನ್ನ ಉಪಸ್ಥಿತಿ ಪಡೆದವನಾದ್ದರಿಂದ ತ್ರಿಶೂಲಿಯೂ, ತ್ರಯಂಬಕನೂ, ತ್ರಿಕಾಲಶುದ್ಧನೂ ಆಗಿ ಕ್ಷೇಮಕ್ಕೆ ಕಾರಣನಾಗುವ ಶಕ್ತಿ ಅನುಗ್ರಹಿಸುತ್ತಾನೆ.
ಹೀಗಾಗಿ ಈಶಾನ್ಯವು ಛೇದಿಸಲ್ಪಟ್ಟ, ಈಶಾನ್ಯದತ್ತ ಅಸಮರ್ಪಕವಾಗಿ ಮೊಂಡಾದ ನಿವೇಶನಗಳು ಗ್ರಾಹ್ಯವಲ್ಲ. ಉತ್ತರದ ಕಡೆಯಲ್ಲಿ ಕೊಂಚ ಛೇದನ ಒದಗಿದಲ್ಲಿ ತೊಂದರೆ ಇಲ್ಲ. ನಿವೇಶನವು ಚಚ್ಚೌಕವಾಗಿದ್ದಲ್ಲಿ ಒಳಿತು. ಒಂದು, ಎರಡು ಅನುಪಾತವನ್ನು ಭರಿಸಿದ್ದರೂ ಕ್ಷೇಮ. ತ್ರಿಕೋನಾಕೃತಿಯು ಕ್ಷೇಮವಲ್ಲ. ವಾಸ್ತುಪುರುಷನು ಸಿದ್ದಿಸುವ ಶಕ್ತಿಗೆ ಇಲ್ಲಿ ಒಟ್ಟಂದದ ಧಾರಣಬಲ ದೊರಕದೆ, ಮನೆಯ ಒಳವಲಯಗಳಲ್ಲಿ ಹಿತವಾದ ಸ್ಪಂದನಗಳು ದೊರಕಲಾರದು. ಜಾnನ, ಧನ, ಆರೋಗ್ಯ, ಲವಲವಿಕೆಗಳು ಬಸವಳಿದು ಹೋಗುತ್ತವೆ. ಒಂದೊಂದು ದಿಕ್ಕನ್ನೂ ಪರಿಪಾಲಿಸುವ ಅಷ್ಟದಿಕಾ³ಲಕರ ಧಾತು ನಿಕ್ಷೇಪಗಳಿಗೆ ಕೊರತೆ ತೋರುತ್ತದೆ. ದಿಗಂತದ ಜೊತೆಗಿನ ಅನೂಹ್ಯದೊಡನೆ ಬೆಸೆದುಕೊಳ್ಳಬೇಕಾದ ಅಲೌಕಿಕ ಸಂಬಂಧ ಕಡಿತಗೊಳ್ಳುತ್ತದೆ. ಅದೃಷ್ಟದ ಗೆರೆಗೆ ಸ್ಪಷ್ಟತೆ ದೊರಕಲಾರದು. ಬ್ರಹ್ಮ ವಲಯವೇ ಅಸ್ಥಿರಗೊಳ್ಳುವ ಸ್ಥಿತಿ ಉಂಟಾಗುತ್ತದೆ. ಹೀಗೆಯೇ ಪಂಚಕೋನ, ಷಟ್ಕೊàನ, ಅಷ್ಟಕೋನಗಳ ನಿವೇಶನಗಳೂ ಗ್ರಾಹ್ಯವಲ್ಲ. ತೀರಾ ಆಕೃತಿ ಕೆಟ್ಟ ನಿವೇಶನಗಳನ್ನಂತೂ ಆಯ್ಕೆ ಮಾಡಿಕೊಳ್ಳಲೇ ಬಾರದು. ಆಕಾರಕ್ಕೆ ಯುಕ್ತವಾಗಿ ದಕ್ಕದ ನಿವೇಶನಗಳನ್ನು ಚಚ್ಚೌಕವೋ, ಆಯತಾಕಾರಕ್ಕೋ ರೂಪಿಸಿಕೊಂಡು ವಿಷಮಭಾಗವನ್ನು ಅನ್ಯರೀತಿಯಲ್ಲಿ ನಿವಾರಿಸಿಕೊಳ್ಳಬೇಕು.
ಸಮ್ಮತವಾದ ಕಾಂಪೌಂಡ್ ಗೋಡೆಗೆ ಅದು ಹೊರದಬ್ಬಲ್ಪಡುವ ರೀತಿಯಲ್ಲಿ ಅನಾವರಣಗೊಳ್ಳಬೇಕು. ಇದನ್ನು ಅವಶ್ಯವಾಗಿ ತಿಳಿದು ನಿವೇಶನ ಆಯ್ಕೆಗೆ ಮುಂದಾಗಿ. ರಾಕ್ಷಸ, ಯಮಾದಿ ನಿತ್ಯ ಪೀಡೆಗಳಿಗೆ ಇದರಿಂದ ಮುಕ್ತಿ ಸಾಧ್ಯ.
ವಾಸಕ್ಕಾಗಿನ ನಿವೇಶನವು ಮುಖ್ಯವಾಗಿ ರಸ್ತೆಯ ಕಡೆ ಕಿರಿದಾಗಿಸುವ ರೀತಿಯಲ್ಲಿದ್ದರೆ ಕ್ಷೇಮಕರ. ಇದನ್ನು ಕ್ಷೀರಸಿದ್ಧಿ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ವಿರುದ್ಧವಾದುದು ಮೃಗಛಾಯಾ ಸ್ಥಳವೆಂದು ಹೆಸರಿಸಲ್ಪಡುತ್ತದೆ. ಅಂದರೆ ರಸ್ತೆಗೆ ಎದುರಾಗುವ ಭಾಗ ಅಗಲವನ್ನು ಹೆಚ್ಚಾಗಿ ಪಡೆದಿರುತ್ತದೆ. ವಾಣಿಜ್ಯ ಮಳಿಗೆಗಳಿಗೆ ಈ ರೀತಿಯ ಆಯಾಮ ಆವರಣಗಳು ಕ್ಷೇಮಕರ. ಒಟ್ಟಿನಲ್ಲಿ ಮನೆ ಕಟ್ಟುವುದು ಎಷ್ಟು ಮುಖ್ಯವೋ, ನಿವೇಶನಗಳ ಆಯ್ಕೆಯ ವಿಚಾರದಲ್ಲೂ ತುಂಬಾ ಮಹತ್ವವಿದೆ. ಪಂಚಭೂತಗಳು ಆಕೃತಿಯಲ್ಲಿ ಪ್ರತಿಯೊಂದು ನಾಶಕ್ಕೆ ಕಾರಣವಾಗುವ ಸರಕುಗಳೇ. ಆಕೃತಿಯಾದಾಗ ಸಂಪನ್ನತೆಯ ಭಾಗಗಳು ಮನುಷ್ಯನನ್ನು ಒಂದು ದಿವ್ಯಕ್ಕೆ ಕರೆದೊಯ್ಯಲು ಸಶಕ್ತವಾಗುತ್ತದೆ. ಹೀಗಾಗಿ ನಾಶವಾಗಲೀ, ಸೃಷ್ಟಿಯಾಗಲೀ ಒಂದೇ ಮೂಲದ ಭಿನ್ನ ದೃವಗಳು. ಅಪಾಯವನ್ನು ಯುಕ್ತವಾದ ಉಪಾಯಗಳ ಮೂಲಕ ನಿಯಂತ್ರಿಸಬೇಕು.
– ಅನಂತಶಾಸ್ತ್ರಿ