Advertisement

UV Fusion: ಆತ್ಮವಿಶ್ವಾಸದಿಂದ ಬಾಳೋಣ

02:47 PM Feb 09, 2024 | Team Udayavani |

ಆತ್ಮವಿಶ್ವಾಸವು ಪ್ರತಿಯೊಬ್ಬರಲ್ಲೂ ಇರಬೇಕಾದ ಅತೀ ಪ್ರಮುಖ ಗುಣ. ನಮ್ಮ ಮೇಲೆಯೇ ನಮಗೆ ನಂಬಿಕೆ ಹಾಗೂ ವಿಶ್ವಾಸವಿರದ ಮೇಲೆ, ನಾವು ಬೇರೆಯವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಅಥವಾ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಮಾಡುವ ಕೆಲಸ ಕಾರ್ಯ ಹಾಗೂ ನಮ್ಮ ನಡವಳಿಕೆಯ ಬಗ್ಗೆ ನಾವು ಎಂದಿಗೂ ಗಟ್ಟಿ ನಿಲುವು ಹೊಂದಿರಬೇಕು. ನಮ್ಮ ನಿರ್ಧಾರಗಳು ಯಾವತ್ತೂ ನೂರು ಪ್ರತಿಶತ ಬಿಗಿಯಾಗಿರಬೇಕು. ಹೀಗಿದ್ದರೆ ಮಾತ್ರ ಎಲ್ಲವನ್ನೂ ಸಮರ್ಥವಾಗಿ ಎದುರಿಸಲು ಸಾಧ್ಯ. ಒಬ್ಬರ ಸಾಮರ್ಥ್ಯ, ಗುಣ ಮತ್ತು ನಡವಳಿಕೆ, ಅವರು ಮಾತು ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ರೀತಿ ಎಂದು ಹೇಳಬಹುದು.

Advertisement

ನಮ್ಮ ಬಗ್ಗೆ ನಾವು ಹೊಂದಿರುವ ಅಭಿಪ್ರಾಯ, ಇತರರು ನಮ್ಮನ್ನು ಹೇಗೆ ನೋಡುತ್ತಾರೆ ಎಂಬ ರೀತಿ, ನಾವು ಕೆಲಸದ ಸ್ಥಳ ಅಥವಾ ಇತರ ಸ್ಥಳಗಳಲ್ಲಿ ಹೇಗಿರುತ್ತೇವೆ ಎಂಬುದು ಸೇರಿದಂತೆ ನಮ್ಮ ಜೀವನದ ಪ್ರತಿಯೊಂದು ಅಂಶಗಳ ಮೇಲೆ ಇದು ನಿಂತಿದೆ. ಕನ್ನಡಿ ಮುಂದೆ ನೀವು ನಿಂತುಕೊಂಡಾಗ, ನೀವು ನಿಮ್ಮ ಬಗ್ಗೆ ಖುಷಿ ಪಡಬೇಕೇ ಹೊರತು, ನಿಮ್ಮ ಬಗ್ಗೆ ನೀವು ಅಸಹ್ಯ ಅಥವಾ ಕೀಳು ಭಾವನೆ ಹೊಂದಬಾರದು. ನೀವು ಸುಂದರವಾಗಿಯೂ ಇರಬಹುದು, ಅಥವಾ ಬಾಹ್ಯ ರೂಪದಲ್ಲಿ ತುಸು ಕುರೂಪಿಗಳೇ ಆಗಿರಬಹುದು.

ಆದರೆ ನಿಮ್ಮನ್ನು ನೀವು ಯಾವತ್ತೂ ಕೀಳಾಗಿ ನೋಡಬಾರದು. ನಿಮ್ಮನ್ನು ನೀವು ಮೊದಲು ಪ್ರಶಂಸಿಸಿಕೊಳ್ಳಿ. ಹಾಗಂತ ಎಲ್ಲರೆದುರಲ್ಲ. ಕೆಲವೊಮ್ಮೆ ಸ್ವಯಂ ವಿಮರ್ಶೆಯು ನಿಮಗೆ ದುಃಖ ಅಥವಾ ಅವಮಾನವನ್ನುಂಟು ಮಾಡುತ್ತದೆ. ಆದರೆ, ಸಣ್ಣ ನ್ಯೂನತೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು, ನಿಮ್ಮಲ್ಲಿರುವ ಸಕಾರಾತ್ಮಕ ಗುಣಗಳನ್ನು ನೋಡಲು ಅದೇ ಶಕ್ತಿಯನ್ನು ಹಾಕಲು ಪ್ರಯತ್ನಿಸಿ.

ಆಗ ನೀವು ಮತ್ತಷ್ಟು ಬಲಿಷ್ಟರಾಗುತ್ತೀರಿ. ಯಾರ ಮೆಚ್ಚುಗೆಯನ್ನು ಪಡೆಯಲು ನೀವು ದುಡಿಯಬೇಡಿ ನಿಮ್ಮ ಕೆಲಸದ ಮೇಲೆ ಗೌರವವಿರಲಿ ಮತ್ತು ಆ ಕೆಲಸದಲ್ಲಿ ಶ್ರದ್ಧೆ ಮತ್ತು ನಿಷ್ಠೆಯಿದ್ದರೆ ಖಂಡಿತ ನಿಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ.ಯಾರಿಗೂ ನೋಯಿಸದೇ ನಮಗೆ ಕೆಡಕನ್ನು ಬಯಸುವ ಶತ್ರುಗಳಿಗೂ ಒಳಿತನ್ನೇ ಬಯಸೋಣ.

ಸದಾಶಿವ ಬಿ. ಎನ್‌.

Advertisement

ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next