Advertisement

ಅಟಲ್‌ ಬಿಹಾರಿ ವಾಜಪೇಯಿ ಕವನ ಉಲ್ಲೇಖಿಸಿ ; ಬನ್ನಿ ದೀಪ ಹಚ್ಚೋಣ ಎಂದು ಮೋದಿ ಟ್ವೀಟ್‌

05:49 PM Apr 05, 2020 | Hari Prasad |

ಮಾಜಿ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರು ವೇದಿಕೆಯೊಂದರಲ್ಲಿ ‘ಆವೋ ಫಿರ್‌ ಸೆ ದಿಯಾ ಜಲಾಯೆ’ (ಬನ್ನಿ ಮತ್ತೆ ದೀಪ ಹಚ್ಚೋಣ) ಎಂಬ ಕವನ ವಾಚಿಸಿದ ವಿಡಿಯೋ ಒಂದನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. ಆ ಮೂಲಕ ರವಿವಾರ ರಾತ್ರಿ 9 ಗಂಟೆಗೆ ದೀಪ ಹಚ್ಚಬೇಕು ಎಂಬುದನ್ನು ದೇಶದ ನಾಗರಿಕರಿಗೆ ನೆನಪಿಸಿದ್ದಾರೆ.

Advertisement

ಆವೊ ದಿಯಾ ಜಲಾಯೆ (ಬನ್ನಿ ದೀಪ ಹಚ್ಚೋಣ) ಎಂಬ ಶೀರ್ಷಿಕೆಯಡಿ ಮೋದಿ ವಿಡಿಯೋವನ್ನು ಟ್ವೀಟ್‌ ಮಾಡಿದ್ದು, ಅದರಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರು ತಾವೇ ಬರೆದ ಕವನವನ್ನು ನೂರಾರು ಸಭಿಕರೆದುರು ವಾಚನ ಮಾಡುತ್ತಿದ್ದಾರೆ..

ಕಂಪ್ಯೂಟರ್‌, ಎ.ಸಿ. ಫ್ಯಾನ್‌ ಆಫ್ ಮಾಡಬೇಕಿಲ್ಲ
ರವಿವಾರ ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್‌ ದೀಪಗಳನ್ನು ಮಾತ್ರ ಆರಿಸಿ. ಫ್ಯಾನ್‌, ಕಂಪ್ಯೂಟರ್‌, ಫ್ರಿಡ್ಜ್, ಕೂಲರ್‌, ಎಸಿ ರೀತಿಯ ಎಲೆಕ್ಟ್ರಿಕ್‌ ಉಪಕರಣಗಳನ್ನು ಆಫ್ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ. ಸಾರ್ವನಿಕವಾಗಿ ಲೈಟ್‌ ಆಫ್ ಮಾಡುವುದರಿಂದ ಹಾನಿ ಉಂಟಾಗುವುದಿಲ್ಲ ಮತ್ತು ಆಸ್ಪತ್ರೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್‌ ಬಳಕೆ ಇರಲಿದೆ ಎಂದು ಕೇಂದ್ರ ಇಂಧನ ಸಚಿವಾಲಯ ಹೇಳಿದೆ.

ವಿವಿಧ ರಾಜ್ಯ ಸರಕಾರಗಳು ಮತ್ತು ವಿದ್ಯುತ್‌ ವಿತರಣಾ ಕಂಪನಿಗಳು ದೇಶಾದ್ಯಂತ ಲೈಟ್‌ ಆಫ್ ಮಾಡಿದಾಗ ವಿದ್ಯುತ್‌ ಗ್ರಿಡ್‌ ಮೇಲೆ ಒತ್ತಡ ಹೆಚ್ಚಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದವು. ಈ ಅವಧಿಯಲ್ಲಿ ಗ್ರಿಡ್‌ ಸ್ಥಿರತೆಗೆ ಧಕ್ಕೆ ಆಗದಂತೆ ತಡೆಯಲು ಪವರ್‌ ಸಿಸ್ಟಮ್‌ ಆಪರೇಷನ್‌ ಕಾರ್ಪೊರೇಷನ್‌ (ಪಿಒಎಸ್‌ಒಸಿಒ) ಎಲ್ಲ ಕ್ರಮಗಳನ್ನು ಕೈಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next