Advertisement

ಮಕ್ಕಳ ಹಕ್ಕುಗಳಿಗೆ ನ್ಯಾಯ ಒದಗಿಸೋಣ: ಡಾ|ನಿರಂಜನಾರಾಧ್ಯ

01:16 AM Mar 29, 2019 | Sriram |

ಉಡುಪಿ: ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 39.8 ಮಕ್ಕಳಿದ್ದಾರೆ. ಬಾಲಕಾರ್ಮಿಕರು, ದೌರ್ಜನ್ಯ, ಆರ್ಥಿಕ ಅಡೆತಡೆಗಳನ್ನು ಮೆಟ್ಟಿನಿಂತು ಮಕ್ಕಳ ಹಕ್ಕುಗಳಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು ಎಂದು ಬೆಂಗಳೂರು ರಾಷ್ಟ್ರೀಯ ಕಾನೂನು ಕಾಲೇಜಿನ ಫೆಲೋ ಡಾ| ನಿರಂಜನಾರಾಧ್ಯ ಹೇಳಿದರು.

Advertisement

ಪಡಿ ಮಂಗಳೂರು, ಸಮಾಜ ಕಾರ್ಯ ವಿಭಾಗ, ಪ್ರಸನ್ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ ಮಾಹೆ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ., ಉಡುಪಿ ಸಹಕಾರದೊಂದಿಗೆ ಗುರುವಾರ ಮಣಿಪಾಲ ಕೆಎಂಸಿಯ ಇಂಟರ್ಯಾಕ್ಟ್ ಕಟ್ಟಡದಲ್ಲಿ ಜರಗಿದ ಶಿಕ್ಷಣ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮಕ್ಕಳ ರಕ್ಷಣೆ ಅಗತ್ಯ
ಆರ್‌ಟಿಇ ಒಂದು ದಶಕ ಪೂರೈಸಿದೆ. ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು. ಅಪೌಷ್ಟಿಕತೆ, ದೌರ್ಜನ್ಯಗಳಿಂದ ರಕ್ಷಿಸಿ ಉತ್ತಮ ಶಿಕ್ಷಣ ನೀಡಬೇಕು ಎಂದರು.

ತಂತ್ರಜ್ಞಾನದ ತಿಳುವಳಿಕೆಯಿರಲಿ
ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳು ಕುಟುಂಬದ ಜತೆಗಿನ ನಂಟು ಕಳೆದುಕೊಳ್ಳುತ್ತಿದ್ದಾರೆ. ತಂತ್ರಜ್ಞಾನವನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ತಂತ್ರಜ್ಞಾನಗಳ ವ್ಯಾಮೋಹಕ್ಕೆ ಬೀಳದೆ ಸಾಂಸ್ಕೃತಿಕ, ಸಾಮಾಜಿಕವಾಗಿ ಅವರು ಪಕ್ವವಾಗಬೇಕು ಎಂದರು.
ಮಾಹೆಯ ಪ್ರಸನ್ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ| ಲೆನಾ ಅಶೋಕ್‌ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಡಿಎಂಸಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ, ಸರಕಾರಿ ಶಾಲೆಗಳ ಅಗತ್ಯವಿದ್ದರೂ ಕೆಲವರು ಮುಚ್ಚಲು ಪ್ರೇರೇಪಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ತಳಹದಿಯಲ್ಲಿ ನೀತಿ, ನಿಯಮಗಳನ್ನು ಕಾಣುತ್ತಿದ್ದೇವೆ. ಪ್ರಜಾಪ್ರಭುತ್ವದ ನೆಲೆಯಲ್ಲಿ ಎಸ್‌ಡಿಎಂಸಿ ಸಂಘಟನೆ ಕಟ್ಟಬೇಕು. ಇದು ಬಲಗೊಂಡಲ್ಲಿ ಶಿಕ್ಷಣ ವ್ಯವಸ್ಥೆ ಬಲಿಷ್ಟಗೊಳ್ಳಲಿದೆ ಎಂದರು.

Advertisement

ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿ’ಸೋಜಾ ಸ್ವಾಗತಿಸಿ, ಜಯಂತಿ ವಂದಿಸಿದರು. ಜಯವಂತ ರಾವ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next