Advertisement

ಶೈಕ್ಷಣಿಕ ಅಭಿವೃದ್ದಿಗೆ ಕೈಜೋಡಿಸೋಣ: ಹುಸೇನ

04:01 PM Sep 25, 2022 | Team Udayavani |

ಭಾಲ್ಕಿ: ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಕರು ಮತ್ತು ಅಧಿಕಾರಿಗಳೆಲ್ಲರೂ ಕೈಜೋಡಿಸಿ, ವಿದ್ಯಾರ್ಥಿಗಳ ಏಳ್ಗೆಗಾಗಿ ಶ್ರಮಿಸೋಣ ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ್‌ ಹುಸೇನ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಶನಿವಾರ ಪ್ರೌಢಶಾಲೆ ಶಿಕ್ಷಕರ ಸಂಘಟನೆಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶಿಕ್ಷಕರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಶಿಕ್ಷಕರು ಕಾರ್ಯಾಲಯಕ್ಕೆ ಅಲಿಯದೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಕಾರ್ಯಾಲಯ ದಲ್ಲಿಯ ಶಿಕ್ಷಕರ ಎಲ್ಲ ಕೆಲಸಗಳು ವಿಳಂಬ ಮಾಡದೇ ಮಾಡಿಕೊಡಲಾಗುವುದು. ಶಿಕ್ಷಕರು ಮತ್ತು ಅಧಿಕಾರಿಗಳಿಬ್ಬರೂ ವಿದ್ಯಾರ್ಥಿಗಳ ಅಭಿವೃದ್ಧಿಗೋಸ್ಕರ ಕಾರ್ಯ ನಿರ್ವಹಿಸಬೇಕಾಗಿದೆ. ತಾಲೂಕಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಿದೆ ಎಂದರು.

ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತು ಕಾಟಕರ ಅಧ್ಯಕ್ಷತೆ ವಹಿಸಿ, ಅಧಿಕಾರಿಗಳು ಶಿಕ್ಷಕರ ಎಲ್ಲ ಕೆಲಸಗಳು ವಿಳಂಬ ಮಾಡದೇ ಮಾಡಿಕೊಡಬೇಕು. ಅಂದಾಗ ಮಾತ್ರ ಶಿಕ್ಷಕರು ತಮ್ಮ ಕಚೇರಿಗೆ ಅಲಿಯುವುದು ತಪ್ಪುತ್ತದೆ. ನಮ್ಮ ತಾಲೂಕಿನಲ್ಲಿ ಎಲ್ಲಾ ಶಿಕ್ಷಕರು ಶೈಕ್ಷಣಿಕವಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದೇವೆ. ಇದಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಹೇಳಿದರು.

ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕ ಶಿವಕುಮಾರ ಸನ್ಮಾನ ಸ್ವೀಕರಿಸಿದರು. ಇದೇ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ ಮತ್ತು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲಿನಾಥ ಸಜ್ಜನ್‌ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಸೂರ್ಯಕಾಂತ ಸುಂಟೆ, ರಾಜಕುಮಾರ ಜೊಳದಪಕೆ, ಅಶೋಕ ಕುಂಬಾರ, ಪಿ.ಎಸ್‌. ಬಿರಾದಾರ, ಶಿವಕುಮಾರ ಘಂಟೆ, ಮಾರುತಿ ಸಗರ, ದಿನೇಶ ಥಮಕೆ, ಸಾವಿತ್ರಿಬಾಯಿ ಫುಲೆ, ಶಿಕ್ಷಕಿಯರ ಸಂಘದ ಅಧ್ಯಕ್ಷೆ ಕೀರ್ತಿಲತಾ ಸೊನಾಳೆ, ಪ್ರೌಢಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಪುಸ್ಪಲತಾ ಚಕುರ್ತೆ, ಇಸಿಒ ಸಹದೇವ.ಜಿ, ಜಯರಾಮ ಬಿರಾದಾರ, ಅನಿಲ ಗಾಯಕವಾಡ, ಜಾಲಿಂದರ ಮೇತ್ರೆ, ಶಿವಕುಮಾರ ಮೇತ್ರೆ, ಆನಂದ ಹಳೆಂಬರೆ, ಮಹಮದ್‌ ಹನೀಫ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next