Advertisement
ದೇವರನ್ನು ಪ್ರೀತಿಸುವುದು ನಮ್ಮ ಪ್ರಮುಖ ಕೆಲಸವಾಗಿರಬೇಕೇ ಹೊರತು ನಮ್ಮ ಅಗತ್ಯಗಳನ್ನು ದೇವರ ಬಳಿ ಕೇಳುವುದಲ್ಲ.
Related Articles
Advertisement
ಸಿಕ್ಕಿದವರ ಬಳಿ ನನಗೆ ಕಷ್ಟವೇ ಮುಗಿಯುವುದಿಲ್ಲ. ಸುಖವೆಂಬುದು ನನ್ನ ಹಣೆಯಲ್ಲಿ ಬರೆದಿಲ್ಲವೇನೋ ಎನ್ನುವ ಬದಲು ಆಶಾವಾದಿಗಳಾಗಿ. ಬಹುಮುಖ ಆಲೋಚನೆಗಳು ಬಂದಾಗ ನಾವು ಧೃತಿಗೆಡುತ್ತೇವೆ. ಆದರೆ ಹಾಗಾಗಬಾರದು. ನಮ್ಮ ಶಕ್ತಿ ಕುಂದದ ಹಾಗೆ ಛಲತೊಟ್ಟು ನಿಲ್ಲಬೇಕು. ಬರುವುದೆಲ್ಲದಕ್ಕೂ ನಾನು ಸಿದ್ಧ ಎನ್ನುವ ರೀತಿಯಲ್ಲಿ ನಮ್ಮನ್ನು ನಾವು ರೂಪಿಸಿಕೊಳ್ಳಬೇಕು. ಆಗ ಖಂಡಿತವಾಗಿ ನಾಳೆಯು ನಮ್ಮದಾಗಿರುತ್ತದೆ ಎನ್ನುವುದು ಸ್ವಾಮಿಗಳು ಸದಾ ಹೇಳುತ್ತಿದ್ದ ಮಾತು.
ಆಧ್ಯಾತ್ಮದತ್ತ ಪಯಣಕೋಲ್ಕತ್ತಾದ ಟಾಲಿಗುಂಜ್‌ನಲ್ಲಿ 1896ರ ಸೆಪ್ಟಂಬರ್ 1ರಂದು ಜನಿಸಿದ ಸ್ವಾಮಿಗಳ ಬಾಲ್ಯದ ಹೆಸರು ಅಭಯ್ ದೆ. ತಂದೆ ಗೌರ ಮೋಹನ ದೆ, ತಾಯಿ ರಜನಿ. ಚಿಕ್ಕಂದಿನಿಂದಲೇ ಕೃಷ್ಣನ ಭಕ್ತರಾಗಿದ್ದ ಸ್ವಾಮಿಗಳು, ತಂದೆಯಂತೆ ನಿತ್ಯವೂ ಕೃಷ್ಣನನ್ನು ಪೂಜಿಸುತ್ತಿದ್ದರು. ಬೆಳೆಯುತ್ತಾ ಅಧ್ಯಾತ್ಮಗಳತ್ತ ಹೆಚ್ಚಿನ ಒಲವು ಮೂಡಿ ಜಗನ್ನಾಥ ರಥಯಾತ್ರೆಗಳನ್ನು ಕೈಗೊಂಡರು. 1932ರ ನವೆಂಬರ್ 21ರಲ್ಲಿ ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತಿ ಠಾಕೂರ್‌ರಿಂದ ದೀಕ್ಷೆ ಪಡೆದು ಅವರ ಶಿಷ್ಯರಾದರು. ಅನಂತರ ಅವರನ್ನು ಅಭಯ ಚರಣ ದಾಸ ಎಂದು ಕರೆಯಲಾಯಿತು. ಗುರುಗಳ ದೇಹತ್ಯಾಗದ ಬಳಿಕ ಗೌಡಿಯ ಮಠದ ಬೆಳವಣಿಗೆಗೆ ಶ್ರಮಿಸುತ್ತಾ ಇಂಗ್ಲಿಷ್ ಭಾಷೆಯಲ್ಲೂ ಅಧ್ಯಾತ್ಮದ ಜ್ಞಾನ ಪ್ರಸಾರವನ್ನು ಕೈಗೊಂಡರು. 1977ರ ನವೆಂಬರ್ 14ರಂದು ಇವರು ವೃಂದಾವನದಲ್ಲಿ ದೈವಾಧೀನರಾದರು. ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಿ
ನಾವು ಇಂದು ಹೀಗೆ ಆಗಬೇಕು ಎಂದು ಅಂದುಕೊಂಡಿರುತ್ತೇವೆ. ಅದಕ್ಕಾಗಿ ಹಲವು ರೀತಿಯ ಸಿದ್ಧತೆಗಳನ್ನು ಮಾಡಿರುತ್ತೇವೆ. ಆದರೆ ಕ್ಷಣಾರ್ಧದಲ್ಲಿ ಎಲ್ಲವೂ ಬದಲಾಗಿ ಬಿಡುತ್ತವೆ. ಅದಕ್ಕೆ ವಿಚಲೀತರಾಗದೇ ಆ ಅನಿರೀಕ್ಷಿತ ಸಂದರ್ಭಗಳನ್ನು ಗಟ್ಟಿಯಾಗಿ ನಿಂತು ಎದುರಿಸಬೇಕು ಎಂದು ಪ್ರಭುಗಳು ಕಷ್ಟಗಳನ್ನು ಎದುರಿಸಲಾಗುವುದಿಲ್ಲ ಎನ್ನುವವರಿಗೆ ಹೇಳುತ್ತಿದ್ದ ಮಾತುಗಳು. ದೇವರನ್ನು ಪೂಜಿಸುವಾಗ ಶ್ರದ್ಧೆ ಇರಬೇಕು, ಭಕ್ತಿಯಿಂದ ಮಾಡುವ ಎಲ್ಲ ಕೆಲಸಗಳು ಕೃಷ್ಣನನ್ನು ಪೂಜಿಸಿದಂತೆಯೇ ಆಗುತ್ತವೆ. ಒಲ್ಲದ ಮನಸ್ಸಿನಿಂದ ಮಾಡುವ ಯಾವ ಕೆಲಸವೂ ಕೂಡ ಫಲಿತಾಂಶ ನೀಡುವುದಿಲ್ಲ. ಮನಸ್ಸು ಚಂಚಲವಾದಾಗ ದಿಕ್ಕೇ ತೋಚದಾಗ ಅಧ್ಯಾತ್ಮದ ಮೊರೆ ಹೋಗಿ. ಅದು ನಿಮ್ಮ ಮನಸ್ಸಿನ ಶಾಂತಿಗೆ ದಾರಿ ತೋರಿಸುತ್ತದೆ. ಕೃಷ್ಣನಾಮ ಜಪ ಹೊಸ ಚೈತನ್ಯ ತಂದು ಕೊಡುತ್ತದೆ. ಬೇರೆಯವರು ಹೇಳುವುದನ್ನು ನಂಬದಿದ್ದರೆ ನೀವು ಪ್ರಯತ್ನಿಸಿ ನೋಡಿ ಆಗ ನೈಜತೆಯ ಅನುಭವ ನಿಮ್ಮದಾಗುತ್ತದೆ. ಕೋಪಕ್ಕೆ ಬಲಿಯಾಗಬಾರದು
ಜೀವನದಲ್ಲಿ ಕೆಲವು ಸಂದರ್ಭಗಳಲ್ಲಿ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳುವ ಸಮಯ ಬಂದು ಬಿಡುತ್ತದೆ. ತಣ್ತ್ವೀ ಆದರ್ಶಗಳ ವಿರುದ್ಧ ಮಾತುಗಳು ಹುಟ್ಟಿಕೊಳ್ಳುತ್ತವೆ. ಆಗ ಕೋಪಕ್ಕೆ ಶರಣಾಗಿ ವರ್ತಿಸಿದಲ್ಲಿ ಅದು ನಿಮ್ಮನ್ನೇ ಬಲಿ ತೆಗೆದುಕೊಂಡು ಬಿಡುತ್ತದೆ. ಯಾವುದಕ್ಕಾದರೂ ಸಮಯ ಸಂದರ್ಭಗಳಿರುತ್ತವೆ. ಅದು ಬರುವವರೆಗೆ ತಾಳ್ಮೆಯಿಂದ ವರ್ತಿಸ ಬೇಕು. ಇಸ್ಕಾನ್ ಸ್ಥಾಪನೆ
ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭು ಇವರ ಇನ್ನೊಂದು ಹೆಸರು ಶ್ರೀಲ ಪ್ರಭು ಪಾದ. ಇವರು ಸನಾತನ ಧರ್ಮದ ದಿವ್ಯ ಸಂದೇಶಗಳನ್ನು ವಿಶ್ವಾದ್ಯಂತ ಪ್ರಚಾರ ಮಾಡಲು 1965ರಲ್ಲಿ ಅಮೆರಿಕಕ್ಕೆ ತೆರಳಿ ಒಂದು ವರ್ಷದ ಬಳಿಕ ಅಂದರೆ 1966ರಲ್ಲಿ ನ್ಯೂಯಾರ್ಕ್‌ನಲ್ಲಿ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ (ಇಸ್ಕಾನ್)ಯನ್ನು ಸ್ಥಾಪಿಸಿದರು. ಇಂದು ಅದು ಜಗತ್ ವಿಖ್ಯಾತಗೊಂಡಿದೆ. ಭಾರತದಲ್ಲಿ ತಮ್ಮ ಆಧ್ಯಾತ್ಮಿಕ ಪ್ರಚಾರಕ್ಕಾಗಿ 1953ರಲ್ಲಿ ಝಾನ್ಸಿಯಲ್ಲಿ ಲೀಗ್ ಆಫ್ ಡಿವೋಟಿಸ್ ಎಂಬ ಭಕ್ತ ಸಮೂಹವನ್ನು ಪ್ರಾರಂಭಿಸಿದರು. ಅನಂತರ ಪ್ರಭು ಪಾದರು ವಿಶ್ವಾದ್ಯಂತ ಪರ್ಯಟನೆ ಕೈಗೊಂಡು, 1966ರಿಂದ 1977ರವರೆಗೆ ಹನ್ನೆರಡು ಬಾರಿ ಸಂಚರಿಸಿ, ಸ್ಥಾಪಿಸಿದ ದೇವಾಲಯಗಳ ಸಂಖ್ಯೆ ಒಟ್ಟು 108, ರಚಿಸಿದ ಪುಸ್ತಕಗಳು 80ಕ್ಕೂ ಹೆಚ್ಚು. ಸಂದೇಶ ಪಾಲಿಸಿ ಕಾರ್ಯಗತ ಮಾಡಲು ಸಹಕರಿಸಿದ ಶಿಷ್ಯರ ಸಂಖ್ಯೆ 4,000. ಪ್ರೀತಿ ಭಟ್ ಗುಣವಂತೆ