Advertisement
ಪ್ರತಿ ವರ್ಷವೂ ಚಿತ್ರೋತ್ಸವಕ್ಕೆ ಏನಾದರೂ ಸೇರುತ್ತಲೇ ಇರುತ್ತದೆ. ಅದರಂತೆಯೇ ಈ ವರ್ಷವೂ ಒಂದಿಷ್ಟು ಹೊಸತಿದೆ. ಒಟ್ಟೂ 68 ದೇಶಗಳ 212 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ವರ್ಷ ಇಸ್ರೇಲ್ ದೇಶದ ಸಿನಿಮಾಗಳಿಗೆ ಕಂಟ್ರಿ ಫೋಕಸ್ ವಿಭಾಗದಡಿ ಮಹತ್ವ ನೀಡಲಾಗಿದೆ. ಹಾಗೆಯೇ ಜಾರ್ಖಂಡ್ ರಾಜ್ಯದ ಸಿನಿಮಾಗಳನ್ನು ವಿಶೇಷವಾಗಿ ಪರಿಗಣಿಸಲಾಗಿದೆ. ರೆಟ್ರಾಸ್ಪೆಕ್ಟಿವ್ (ಒಬ್ಬ ಚಲನಚಿತ್ರ ನಿರ್ದೇಶಕನ ಚಿತ್ರಗಳು ಮರುಓದು) ವಿಭಾಗದಡಿ ಖ್ಯಾತ ನಿರ್ದೇಶಕ ಇಂಗರ್ ಬರ್ಮನ್ ರ ಚಿತ್ರಗಳನ್ನು ಪರಿಗಣಿಸಲಾಗಿದೆ. ಅಂದ ಹಾಗೆ ಅವರ ಜನ್ಮಶತಮಾನೋತ್ಸವ ವರ್ಷವಿದು.
ಭಾರತೀಯ ಪನೋರಮಾ ವಿಭಾಗದಲ್ಲಿ ಆಯ್ಕೆಯಾದ ಚಿತ್ರಗಳಲ್ಲಿ ಈ ಬಾರಿ ಕನ್ನಡ ಚಲನಚಿತ್ರಕ್ಕೆ ಅವಕಾಶವಿಲ್ಲ, ಆದರೆ ಕರ್ನಾಟಕಕ್ಕಿದೆ. ಅಂದರೆ ತುಳು ಭಾಷೆಯ ಅಭಯ ಸಿಂಹ ನಿರ್ದೇಶನದ ಪಡ್ಡಾಯಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ. ಉಳಿದಂತೆ ಯಾವ ಕನ್ನಡ ಚಿತ್ರಗಳೂ ಈ ವಿಭಾಗದಡಿ ಆಯ್ಕೆಯಾಗಿಲ್ಲ| ಚಲನಚಿತ್ರಗಳ ಪ್ರದರ್ಶನದೊಂದಿಗೆ ಮಾಸ್ಟರ್ ಕ್ಲಾಸ್, ಸಂವಾದ, ಓಪನ್ ಫೋರಂ ಎಲ್ಲವೂ ಉತ್ಸವಕ್ಕೆ ಕಳೆ ತುಂಬಲಿವೆ. ಸಿನಿಮೋತ್ಸವ ಆರಂಭವಾಗುವುದು ದಿ ಎಸ್ಪರನ್ ಪೇಪರ್ ಎಂಬ ಚಿತ್ರದಿಂದ.