ನಾಯಿ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಇನ್‌ಸ್ಟಾಗ್ರಾಂ, ಫೇಸುºಕ್, ವಾಟ್ಸಾಪ್‌ಗ್ಳಂತೂ ಈಗ ನಾಯಿ ಪ್ರಿಯರದ್ದೇ ರಾಯಭಾರ ಎಂದು ಹೇಳಬಹುದು. ಜರ್ಮನ್ ಶೆಪರ್ಡ್, ಗೋಲ್ಡನ್ ರಿಟ್ರೀವರ್, ಹಸ್ಕಿ , ಬೀಗಲ್ ಇಂತಹ ವಿವಿಧ ವಿದೇಶಿ ಬ್ರಿàಡ್ಸ್ ಗಳನ್ನು ಸಾಕುವುದೇ ಈಗಿನ ಟ್ರೆಂಡ್ ಆಗಿದೆ. ಆದರೆ ಇವುಗಳ ಮಧ್ಯೆ ಇಂಡಿಯನ್ ಪರಿಯಾ ಡಾಗ್‌ಗಳು (ಭಾರತೀಯ ಸ್ಥಳೀಯ ನಾಯಿಗಳು) ಬೀದಿ ನಾಯಿಗಳಾಗಿ ಮಾರ್ಪಟ್ಟಿವೆ.
ಹೌದು, ವೆಸ್ಟರ್ನೈಸೇಶನ್ ಪ್ರಭಾವದಿಂದ ನಾಯಿಗಳಲ್ಲೂ ಭೇದಭಾವ ಕಾಣುತ್ತಿದ್ದೇವೆ, ಇದರಿಂದಾಗಿ ದೇಸಿ ನಾಯಿಗಳಿಗೆ (ಬೀದಿನಾಯಿಗಳು) ತಮ್ಮ ಒಂದು ಹೊತ್ತಿನ ಊಟಕ್ಕೆ ಬೀದಿಗಳಲ್ಲಿ ಬೇಡುವ ಸ್ಥಿತಿ ಬಂದೊದಗಿದೆ. ಮನೆಯಲ್ಲಿ ವೆಸ್ಟರ್ನ್ ನಾಯಿಗಳಿಗೆ ಸಾವಿರಾರು ರೂಪಾಯಿಯ ತಿಂಡಿ ತಿನಿಸು ಹಾಕಿ ಸಾಕುವವರು ಬೀದಿ ನಾಯಿಗಳನ್ನು ಕಂಡಲ್ಲಿ ಕಲ್ಲು ಎಸೆಯುವುದು, ಹೊಡೆಯುವುದನ್ನು ಮಾಡುತ್ತಾರೆ. ಇದೆಷ್ಟು ಸರಿ.
ಇತ್ತೀಚೆಗೆ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ, ಚಿಕ್ಕ ಮಕ್ಕಳಿಗೆ, ದಾರಿ ಹೋಕರಿಗೆ ಸಿಕ್ಕಸಿಕ್ಕಲ್ಲಿ ಕಚ್ಚುತ್ತಿವೆ. ಅತೀ ಹೆಚ್ಚು ರೇಬಿಸ್ ಸಾವಿನ ಪ್ರಕರಣಗಳೊಂದಿಗೆ ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಬೀದಿನಾಯಿಗಳನ್ನು ಹೊಂದಿದ ದೇಶಗಳಲ್ಲಿ ಒಂದಾಗಿದೆ ಎನ್ನುವುದನ್ನು ನಾವು ಕೇಳಿಯೇ ಇರುತ್ತೇವೆ. ಸಾಕುನಾಯಿಗಳಿಗೆ ಸಮಯಕ್ಕೆ ಸರಿಯಾಗಿ ವ್ಯಾಕ್ಸೀನ್ ಮತ್ತಿತರ ಆರೋಗ್ಯ ಉಪಚಾರ ಮಾಡುವುದರಿಂದ ಇಂತಹ ತೊಂದರೆಗಳು ಕಾಣುವುದು ಕಡಿಮೆ. ಆದರೆ ಬೀದಿನಾಯಿಗಳಿಗೆ ಇಂತಹ ಯಾವುದೇ ಸೌಲಭ್ಯಗಳು ಇಲ್ಲದಿರುವುದರಿಂದ ಇಂತಹ ಪ್ರಕರಣಗಳು ಕಂಡುಬರುತ್ತಿದ ಎಂದರೆ ತಪ್ಪಾಗಲಾರದು. ಕಾನೂನು ಪ್ರಕಾರ ಬೀದಿನಾಯಿಯನ್ನು ಕೊಲ್ಲುವುದು ಅಥವಾ ಸ್ಥಳಾಂತರಿಸುವುದು ಅಪರಾಧವಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಬೀದಿನಾಯಿಗಳನ್ನು ದತ್ತು ಪಡೆದು ಸಾಕುವುದು, ಅವುಗಳಿಗೆ ವ್ಯಾಕ್ಸೀನ್ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಬೀದಿ ನಾಯಿ ರಕ್ಷಣಾ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಅವರ ಸಹಾನುಭೂತಿಯ ಪ್ರಯತ್ನಗಳು ಪ್ರಾಣಿಗಳಿಗೆ ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಲು ಕೊಡುಗೆ ನೀಡುತ್ತಿವೆ.
ವಿದೇಶಿ ಬ್ರಿàಡ್ ನಾಯಿಗಳ ಮೇಲಿನ ವ್ಯಾಮೋಹವನ್ನು ಬಿಟ್ಟು ನಮ್ಮ ಸ್ಥಳೀಯ ನಾಯಿಗಳನ್ನು ಸಾಕಿದರೆ ಅದೆಷ್ಟೋ ಬೀದಿನಾಯಿಗಳಿಗೆ ಆಶ್ರಯ ನೀಡಿದಂತಾಗುತ್ತದೆ. ಪಾಪ ತಮ್ಮ ಮುಗª ಮೊಗದಲ್ಲಿ ಮಂದಹಾಸ ಬೀರುತ್ತಾ ಯಾರಾದರೂ ಊಟ ಹಾಕಬಹುದೇ ಎಂಬ ಆಸೆಯ ಕಣ್ಣಲ್ಲಿ ಬಾಲ ಅಲ್ಲಾಡಿಸಿಕೊಂಡು ಹಿಂದೆ ಹಿಂದೆ ಬರುವ ಇವಕ್ಕೆ ಪ್ರೀತಿಯಿಂದ ಒಂದು ಬಿಸ್ಕೆಟ್ ಹಾಕಿದರೂ ಸಾಕು ಖುಷಿಯಿಂದ ತಿಂದು ಮತ್ತೆ ನಮ್ಮನ್ನೇ ಹಿಂಬಾಲಿಸುತ್ತದೆ. ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ ಅಲ್ಲವೇ.
-ಗೌತಮಿ ಶೆಟ್ಟಿ
ಕಾರ್ಕಳ