Advertisement
ಅನುಭವ ಮಂಟಪವೆಂಬ ಪಾರ್ಲಿಮೆಂಟ್ ಸ್ಥಾಪಿಸಿದ ಮಹಾನುಭಾವ ಬಸವಣ್ಣನವರ ಕ್ರಾಂತಿಯ ಫಲವಾಗಿ ನಮ್ಮಂಥವರು ಇಂದು ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಿದೆ. ಮಾನವನ ಜೀವನ ಕಲ್ಯಾಣವಾಗಲು ಪ್ರತಿಯೊಬ್ಬ ನಾಗರಿಕರು ಶರಣರ ವಚನಗಳ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತರಬೇಕು ಎಂದರು.
ಪ್ರಾಮಾಣಿಕ ಕೆಲಸ ಮಾಡಿ ಜನರ ಸೇವೆಗೆ ಅಣಿಯಾಗುತ್ತೇನೆ ಎಂದರು. ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, ಓರ್ವ ವ್ಯಕ್ತಿ ಪಡೆಯುವ ಪದವಿಗಳಿಗಿಂತ ಒಳ್ಳೆ ನಡತೆ ಮುಖ್ಯ. ಸಮಾಜ ಸುವ್ಯಸ್ಥಿತ, ಸುಭದ್ರವಾಗಿ ನಿರ್ಮಾಣವಾಗಲು, ಜೀವನ ಸಾರ್ಥಕವಾಗಲು ಮೊದಲು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸಹನೆ-ತಾಳ್ಮೆ ಮುಖ್ಯ. ಸುಖ-ದುಃಖ, ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ ಸಾಮರ್ಥ್ಯ ಇರಬೇಕು. ಸಹನೆ, ತಾಳ್ಮೆಯಿಲ್ಲದ ಜೀವನ ಪ್ರಯೋಜನವಿಲ್ಲ ಎಂದರು.
Related Articles
Advertisement
ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಸಾಧನೆಗೈದ ಜಿಲ್ಲೆಯ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಡಾ| ವಿಪಿನ ಗೋಯಲ್, ಡಾ| ಗಂಗಾಂಬಿಕೆ ಅಕ್ಕ, ಸಿ.ಎಸ್. ಪಾಟೀಲ, ಡಾ| ಸುಭಾಷ ಬಶೆಟ್ಟಿ, ಸಿ.ಎಸ್. ಗಣಾಚಾರಿ, ಗಂಗಪ್ಪ ಸಾವೆ, ಜಯರಾಜ ಖಂಡ್ರೆ, ರಮೇಶ ಮಠಪತಿ ಹಾಗೂ ಇತರರು ಇದ್ದರು.