ಸಿದ್ರಾಮಪ್ಪಾ ಬಾಲಪ್ಪಗೋಳ ಸ್ಮರಣಾರ್ಥ ತಿಂಗಳ ಪರ್ಯಂತ ಹಮ್ಮಿಕೊಂಡಿರುವ ನಾಡ ಗುಡಿಗೆ ನುಡಿ ನೈವೇದ್ಯ ಎನ್ನುವ
ಚಿಂತನ-ಚೇತನ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭ್ರಷ್ಟಾಚಾರ, ಭಯೋತ್ಪಾದನೆ,
ಕೊಲೆ-ಸುಲಿಗೆ, ದರೋಡೆ, ಅತ್ಯಾಚಾರ, ಹಸಿವು, ಬಡತನ ಇವೆಲ್ಲವೂ ಸಮಾಜದ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿವೆ. ಇಂತಹ
ಹದಗೆಟ್ಟ, ಅಶುದ್ಧ ಸಮಾಜ ವ್ಯವಸ್ಥೆಗೆ ಸಕಲ ಜೀವಾತ್ಮರಿಗೆ ಲೇಸು ಬಯಸುವ ವಚನ ಸಾಹಿತ್ಯದ ಅಗತ್ಯತೆ ಬಹಳಷ್ಟಿದೆ ಎಂದು
ಪ್ರತಿಪಾದಿಸಿದರು. ಸಾನ್ನಿಧ್ಯ ವಹಿಸಿದ್ದ ಸವದತ್ತಿ-ಹರಳಕಟ್ಟಿಯ ಜ್ಞಾನ ದಾಸೋಹ ಮಹಾಮನೆಯ ಬಸವದೇವರು ಮಾತನಾಡಿ, ಕರ್ನಾಟಕದಲ್ಲಿ ನಡೆದ ಶರಣಕ್ರಾಂತಿ ಎಷ್ಟೊಂದು ಉದಾರತತ್ವ ಉಳ್ಳದ್ದು ಮತ್ತು ಎಂಥ ಬಹು ದೊಡ್ಡ ಜೀವನ ವಿಧಾನವಾಗಿತ್ತೆಂದರೆ ಜಗತ್ತಿನಲ್ಲೇ ಅಂಥದ್ದು ಇನ್ನೊಂದು ಇರಲಾರದು ಎಂದು ಹೇಳಿದರು. ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಇಎಸ್‌ಐ
ಆಸ್ಪತ್ರೆ ಮುಖ್ಯಸ್ಥ ಡಾ| ರಾಜೇಶ ಸಂಗ್ರಾಮ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ| ಗೋಲಪ್ಪ ರಾಜಾಪುರ
ಅಧ್ಯಕ್ಷತೆ ವಹಿಸಿದ್ದರು. ಶಿವಶಾಂತರೆಡ್ಡಿ, ಅಕಾಡೆಮಿಯ ಕಾರ್ಯಾಧ್ಯಕ್ಷ ಶಿವರಾಜ ಅಂಡಗಿ, ಪರಮೇಶ್ವರ ಶಟಕಾರ, ಸತೀಶ
ಸಜ್ಜನ, ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ ಮತ್ತಿತರರು ಭಾಗವಹಿಸಿದ್ದರು.
Advertisement
ಕಾಯಕ ಮಾಡಿಯೇ ಬದುಕಿಪ್ರತಿಯೊಬ್ಬರೂ ಕಾಯಕ ಮಾಡಿಯೇ ಬದುಕಬೇಕು. ಯಾವುದೇ ಕಾಯಕ ಮಾಡಿದರೂ ಅದರಲ್ಲಿ ತಲ್ಲೀನರಾಗಿ ಮಾಡಬೇಕು. ಯಕದಿಂದ ಬಂದುದನ್ನು ದಾಸೋಹ ಭಾವನೆಯಿಂದ ಗುರು, ಲಿಂಗ, ಜಂಗಮಕ್ಕೆ ಅರ್ಪಿಸು. ಜೀವನದಲ್ಲಿ ಬರುವ ಸಾವು-ನೋವುಗಳಿಗೂ ದೇವರ ಮೊರೆ ಹೋಗಬೇಡ. ಆತನ ಹಂಗಿನಲ್ಲೂ ಕೂಡ ಬದುಕದೇ ಆತ್ಮಗೌರವದಿಂದ ಜೀವನ ನಡೆಸಬೇಕು. ನುಂಬುವ ಊಟವನ್ನು, ತನ್ನಾಶ್ರಯದ ರತಿ ಸುಖವನು ಬೇರೆ ಮತ್ತೂಬ್ಬರ ಕೈಯಲಿ ಮಾಡಿಸುವುದುಂಟೇ? ಎಂದು ಖಾರವಾಗಿ ಕೇಳುವ ಪುಣ್ಯಸ್ತ್ರಿ ಕಾಳವ್ವೆ ಕಾಯಕದ ಮಹತ್ವ ಹಾಗೂ ಕಾಯಕ ಮಂತ್ರವನ್ನು ಅತ್ಯಂತ ಸರಳವಾಗಿ ಹೇಳಿಕೊಟ್ಟಿದ್ದಾರೆ.
ಬಸವದೇವರು, ಜ್ಞಾನ ದಾಸೋಹ ಮಹಾಮನೆ.