Advertisement

ಇಲ್ಲಿದೆ 9ನೇ ಜ್ಞಾನಪೀಠಕ್ಕೆ ಅವಕಾಶ!

11:17 AM Nov 26, 2017 | Team Udayavani |

ಯಾರ ಹೆಸರನ್ನೇ ಆದರೂ ತಪ್ಪಾಗಿ ಕರೆದಾಗ ಅವರಿಗೆ ಬೇಸರವಾಗುವುದು ಸಹಜ. ಕೆಲವೊಮ್ಮೆ ಅದು ಹಾಗಲ್ಲ ಹೀಗೆ ಎಂದು ತಿದ್ದಿಕೊಡುವುದೂ ಉಂಟು. ಆದರೆ, ಅಂಥ ಯಾವ ಮಾರ್ಗಗಳೂ ಫ‌ಲ ನೀಡದೆ ಇಲ್ಲಿಯವರೆಗೂ ತಮ್ಮ ಹೆಸರನ್ನು ಕರೆವವರ ಬಾಯಲ್ಲಿ ತಪ್ಪುತಪ್ಪಾಗಿ ಕೇಳಿಸಿಕೊಂಡು ಸಹಿಸಿಕೊಂಡಿರುವ ವ್ಯಕ್ತಿಯೆಂದರೆ ಮಕ್ಕಳ ಸಾಹಿತಿ ಬೊಳುವಾರು ಮೊಹಮ್ಮದ್‌ ಕುಂಞ.

Advertisement

‘ನನ್ನ ಹೆಸರನ್ನು ಇಲ್ಲಿಯವರೆಗೆ ಯಾರೂ ಸರಿಯಾಗಿ ಉತ್ಛರಿಸಿಯೇ ಇಲ್ಲ. ನನ್ನ ಹೆಸರನ್ನು ಯಾರು 3 ಬಾರಿ ಸರಿಯಾಗಿ ಉತ್ಛರಿಸಿ, 3 ಬಾರಿ ತಪ್ಪಿಲ್ಲದಂತೆ ಬರೆಯುವರೋ ಅವರಿಗೆ ಜಾ°ನಪೀಠ ಕೊಡಬೇಕು’ ಎಂದು ನೋವಿನಿಂದಲೇ ಚಟಾಕಿ ಹಾರಿಸಿದರು.

ಕಾರ್ಯಕ್ರಮದ ಶುರುವಿನಲ್ಲಿ ಅವರ ಹೆಸರನ್ನು ತಪ್ಪಾಗಿ ಉತ್ಛರಿಸಿದ್ದ ನಿರೂಪಕರು ಬೊಳುವಾರು ಅವರ ಭಾಷಣ ಕೇಳಿದ ನಂತರವಾದರೂ ತಿದ್ದಿಕೊಳ್ಳುತ್ತಾರೋ ಎನ್ನುವ ಸಭಿಕರ ನಿರೀಕ್ಷೆ ಕೊನೆಗೂ ಹುಸಿಯಾಯಿತು!

Advertisement

Udayavani is now on Telegram. Click here to join our channel and stay updated with the latest news.

Next