Advertisement

Rajasthan: ವೈಮನಸ್ಸು ಮರೆತು ಒಂದಾಗುತ್ತೇವೆ- ಪೈಲಟ್‌

09:18 PM Jul 08, 2023 | Team Udayavani |

ನವದೆಹಲಿ: ಸಾಮೂಹಿಕ ನಾಯಕತ್ವ ಮಾತ್ರವೇ ರಾಜಸ್ಥಾನ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಇರುವ ಏಕೈಕ ಮಾರ್ಗ. ಸಿಎಂ ಅಶೋಕ್‌ ಗೆಹೊÉàಟ್‌ ಅವರ ಜತೆಗಿರುವ ವೈಮನಸ್ಸನ್ನು ನಾನು ಈಗಾಗಲೇ ಸಮಾಧಿ ಮಾಡಿದ್ದೇನೆ ಎಂದು ರಾಜಸ್ಥಾನ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವಾಗಿದ್ದ ರಾಜಸ್ಥಾನ ಕಾಂಗ್ರೆಸ್‌ ಒಳಗಿನ ಭಿನ್ನಮತದ ಕಾವು ತಣ್ಣಗಾದಂತಾಗಿದೆ.

Advertisement

ಸಂದರ್ಶನವೊಂದರಲ್ಲಿ ಮಾತನಾಡಿದ ಪೈಲಟ್‌, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷಮೆ ಹಾಗೂ ಕೆಲ ವಿಚಾರಗಳನ್ನು ಮರೆತುಬಿಡುವ ಬಗ್ಗೆ ಸಲಹೆ ನೀಡಿದರು. ನಾನು ರಾಜ್ಯ ಘಟಕದ ಅಧ್ಯಕ್ಷನಾಗಿದ್ದಾಗ ಎಲ್ಲರನ್ನೂ ಒಟ್ಟಿಗೆ ನಿಭಾಯಿಸುವ ಉದ್ದೇಶ ಹೊಂದಿದ್ದೆ. ಈಗ ಸಿಎಂ ಅಶೋಕ್‌ ಜಿ ಅವರೂ ಅದನ್ನೇ ಮಾಡುತ್ತಿದ್ದಾರೆ.

ಅವರ ಮೇಲೆ ಮತ್ತಷ್ಟು ಜವಾಬ್ದಾರಿಯೂ ಹೆಚ್ಚಿದೆ. ನನಗಿಂತ ಹಿರಿಯರೂ ಹೌದು, ಹೀಗಾಗಿ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷ ಹಾಗೂ ಜನ ಹಿತಾಸಕ್ತಿಗೆ ಬೆಲೆ ನೀಡಿ, ಒಟ್ಟಿಗೆ ಮುಂದುವರಿಯಲು ನಿಶ್ಚಯಿಸಿದ್ದೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next