Advertisement

ಆರೋಗ್ಯ ಪಾಲನೆಗೆ ಇರಲಿ ಜನರ ಗಮನ: ಶಾಸಕ

12:05 PM Jan 30, 2017 | |

ಕೆಂಗೇರಿ: ವಾಯುಮಾಲಿನ್ಯ, ಜಲಮಾಲಿನ್ಯ ಹಾಗೂ ಶಬ್ಧಮಾಲಿನ್ಯದ ಪರಿಸರದ ಮೇಲಷ್ಟೇ ಅಲ್ಲದೆ, ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಉತ್ತಮ ಆರೋಗ್ಯಕ್ಕಾಗಿ ಯೋಗ, ಧ್ಯಾನ, ಪ್ರಾಣಯಾಮ ಹಾಗೂ ವ್ಯಾಯಾಮ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ಎಸ್‌ ಟಿ ಸೋಮಶೇಖರ್‌ ಮನವಿ ಮಾಡಿದ್ದಾರೆ. 

Advertisement

ಬಿಬಿಎಂಪಿ ಉಲ್ಲಾಳು ವಾರ್ಡ್‌ನ ಎಜಿಎಸ್‌ ಬಡಾವಣೆಯಲ್ಲಿ ನಿರ್ಮಿಸಿರುವ ಬಯಲು ಜಿಮ್‌ ಅನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು “ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಬಹುಮುಖ್ಯವಾದ್ದು. ಜನ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ ಸುಖೀ ಜೀವನ ನಡೆಸಬೇಕು,” ಎಂದು ಸಲಹೆ ನೀಡಿದರು. 

ಕೆಂಗೇರಿ ಪುರಸಭೆ ಮಾಜಿ ಉಪಾಧ್ಯಕ್ಷ ಜಿ.ಮುನಿರಾಜು ಮಾತನಾಡಿ ” ಜೀವನ ನಿರ್ವಹಣೆ, ಒತ್ತಡದ ಬದುಕಿನಿಂದಾಗಿ ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡದೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಉದ್ಯಾನದ ಅಭಿವೃದ್ಧಿ ಜೊತೆಯಲ್ಲೇ ಆರೋಗ್ಯ ಸುಧಾರಣೆಗಾಗಿ ವ್ಯಾಯಾಮ ಮಾಡಲು ಬಯಲು ಜಿಮ್‌ ನಿರ್ಮಿಸಿ ಅಗತ್ಯ ಉಪಕರಣಗಳನ್ನು ಅಳವಡಿಸಲಾಗಿದೆ,” ಎಂದರು. ಉಲ್ಲಾಳು ವಾರ್ಡ್‌ ಕಾರ್ಪೊರೇಟರ್‌ ಶಾರದ, ಅಭಿಯಂತರ ತಿಮ್ಮಪ್ಪ, ಹೇರೋಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅನಿಲ್‌ಕುಮಾರ್‌, ಉಲ್ಲಾಳು ವಾರ್ಡ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಕಾಶ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next