Advertisement
ವಾರ್ಡ್‌ರೋಬ್ ಹೊಂದಿಸುವುದು ಸಾಮಾನ್ಯವಾಗಿ ಎರಡು ಅಡಿ ಅಗಲದ್ದು. ಮೂರು ಅಡಿ ಅಗಲವಾದರೂ ಇರುವ ಬಹು ಉಪಯೋಗಿ ಪರಿಕರ ಇಲ್ಲದ ಮನೆ ಕಡಿಮೆ ಎನ್ನಬಹುದು. ಈ ಹಿಂದೆ ಇದ್ದ ಸ್ಟೀಲ್ ಅಲ್‌ಮೆರಾವನ್ನು ಬಹುತೇಕ ಹಿಂದಿಕ್ಕಿ ಹೆಚ್ಚು ಜನಪ್ರಿಯವಾಗಿರುವ ಇದು, ಡಝನ್ ಗಟ್ಟಲೆ ಬಟ್ಟೆಬರೆಯನ್ನು ತನ್ನ ಒಡಲಾಳದಲ್ಲಿ ಹುದುಗಿಸಿಕೊಂಡು, ಹೊರಗೆ ಮಾಮೂಲಿಯಾಗಿ ಬಾಗಿಲಿನಂತೆ ಕಾಣುತ್ತದೆ. ಕೋಣೆಯನ್ನು ಕಿರಿದಾಗದಂತೆ ತಡೆಯಲು ಇರುವ ಮಾರ್ಗ -ಇದೇ ವಾರ್ಡ್‌ರೋಬ್ ಅನ್ನು ಗೋಡೆಯಲ್ಲಿ ಹುದುಗಿಸಿಯೋ ಇಲ್ಲ ಸ್ವಲ್ಪ ಹೊರಚಾಚಿದಂತೆಯೋ ಮಾಡಿ, ಕೋಣೆಯ ಒಳಗಿನ ಸ್ಥಳವನ್ನು ಉಳಿಸಿಕೊಳ್ಳುವುದು.
ಮನೆ ಚಿಕ್ಕದಿರುವಾಗ ಇರುವ ನಾಲ್ಕಾರು ಆಸನಗಳು ಹಬ್ಬ ಹರಿದಿನಗಳಲ್ಲಿ ಹೆಚ್ಚುಮಂದಿ ನೆಂಟರಿಷ್ಟರು ಬಂದರೆ ಸಾಲದಾಗಬಹುದು. ಆಗ ನಾವು ಅನಿವಾರ್ಯವಾಗಿ ಹೆಚ್ಚುವರಿ ಪೀಠೊಪಕರಣಗಳ ಬಗ್ಗೆ ಚಿಂತಿಸಲು ತೊಡಗುತ್ತೇವೆ. ಆದರೆ ಇರುವ ಜಾಗದಲ್ಲಿ ಹೆಚ್ಚು ಖುರ್ಚಿ ಮತ್ತೂಂದನ್ನು ಹಾಕಿದರೆ, ಅದು ಕಿಷ್ಕಿಂದೆಯಂತೆ ಕಾಣುತ್ತದೆ! ಆದುದರಿಂದ ನಾವು ಬಿಲ್ಟ್ ಇನ್ ಫರ್ನಿಚರ್ ಬಗ್ಗೆ ಯೋಚಿಸುವುದು ಉತ್ತಮ. ಕಿಟಕಿಗಳಿರುವೆಡೆ ದಪ್ಪ ಗೊಡೆಗಳಿಂದ ಆರರಿಂದ ಎಂಟು ಇಂಚಿ ಜಾಗ ಪಡೆದುಕೊಂಡು, ನಾಲ್ಕಾರು ಇಂಚಿನಷ್ಟು ಒಳಗೆ ಹೊರಚಾಚಿದಂತೆ ಲೆಡ್ಜ್ ನೀಡಬೇಕು. ಬೆಂಚ್ ಮಾದರಿಯ ಸ್ಥಳ ನಾಲ್ಕಾರು ಜನರನ್ನು ಕೂರಿಸಲು ಸಾಲುತ್ತದೆ. ಇನ್ನೂ ಹೆಚ್ಚುವರಿ ಅಗಲಬೇಕೆಂದರೆ, ಕಿಟಕಿಯನ್ನು ಮಾಮೂಲಿಯಾಗಿ ಗೋಡೆಯ ಒಳಗೆ ಕೂರಿಸದೆ, ಅದರ ಸುತ್ತಲೂ ಫಿನ್ ಮಾದರಿಯಲ್ಲಿ ಆರರಿಂದ ಒಂಬತ್ತು ಇಂಚಿನಷ್ಟು ಹೊರಚಾಚಿ, ಅಲ್ಲಿ ಕಿಟಕಿಯನ್ನು ಕೂರಿಸಿ, ಸುಲಭದಲ್ಲಿ ಒಂದೂವರೆ ಇಂದ ಎರಡು ಅಡಿಗಳ ಅಗಲದ ಶಾಲ ಸ್ಥಳವನ್ನು ನಿರಾಯಾಸವಾಗಿ ಪಡೆಯಬಹುದು!
Related Articles
ಇಂದಿನ ಫಾಸ್ಟ್ ಲೈಫ್ – ಬಿರುಸಿನ ದಿನಗಳಲ್ಲಿ ಊಟಕ್ಕೆ ಎಂದು ದಿನವೂ ಕೂರುವ ಅವಧಿ ಅತಿ ಕಡಿಮೆ. ಬೆಳಗಿನ ತಿಂಡಿ ಹತ್ತಾರು ನಿಮಿಷದಲ್ಲಿ ಮುಗಿಯುತ್ತದೆ! ಕೆಲಸಕ್ಕೆ ಹೋಗುವುದರಿಂದ ಭಾನುವಾರ ಹಾಗೂ ಇತರೆ ರಜೆದಿನಗಳಲ್ಲಿ ಮಾತ್ರ ಮಧ್ಯಾಹ್ನದ ಊಟ. ರಾತ್ರಿ ಹತ್ತು ನಿಮಿಷದಲ್ಲಿ ತಿಂದು ಮುಗಿಸಿ ಟಿವಿ ನೋಡುವ ತರಾತುರಿಯಲ್ಲಿ ಇರುತ್ತೇವೆ! ಹಾಗಾಗಿ ದಿನದಲ್ಲಿ ಸುಮಾರು ಒಂದು ಗಂಟೆಯಷ್ಟು ವ್ಯಯಿಸುವ ಸ್ಥಳಕ್ಕೆ ಪ್ರತ್ಯೇಕ ಕೋಣೆಯ ಅಗತ್ಯವಿರುವುದಿಲ್ಲ. ಹಾಗಾಗಿ ಬೇಕೆಂದಾಗ ದಿಢೀರನೇ ಪ್ರತ್ಯಕ್ಷ ಆಗುವ ಫೋಲ್ಡಬಲ್ ಡೈನಿಂಗ್ ಟೇಬಲ್ “ಮಡಿಚಿಡಬಹುದಾದ ಊಟದ ಮೇಜು’ ಇತ್ತೀಚೆಗೆ ಹೆಚ್ಚು ಕಂಡುಬರುತ್ತಿದೆ. ಇದನ್ನು ನಾವು ಬೇಕೆಂದಾಗ ಎಳೆದುಕೊಂಡು ಉಪಯೋಗಿಸಿ, ಮಿಕ್ಕ ಅವಧಿಯಲ್ಲಿ ಹೆಚ್ಚು ಜಾಗ ತೆಗೆದುಕೊಳ್ಳದಂತೆ ಮಡಚಿ ಇಟ್ಟುಬಿಡಬಹುದು.
Advertisement
ಈ ಮೇಜಿನ ಮೇಲೆ ಬಿಸಿಯಾದ ಹಾಗೂ ಭಾರವಾದ ಆಹಾರ ವಸ್ತುಗಳನ್ನು ಇಡಲು ಬಳಸುವ ಕಾರಣ ಸ್ವಲ್ಪ ಗಟ್ಟಿಮುಟ್ಟಾಗಿ ವಿನ್ಯಾಸ ಮಾಡುವುದು ಅಗತ್ಯ.
ಹೆಚ್ಚಿನ ಮಾತಿಗೆ ಫೋನ್ 98441 32826
ಆರ್ಕಿಟೆಕ್ಟ್ ಕೆ ಜಯರಾಮ್