Advertisement
ವೃದ್ಧರನ್ನೇ ಕಾಡುತ್ತಿರುವುದು ಹೆಚ್ಚು ಇದುವರೆಗಿನ ಅಂಕಿ-ಅಂಶಗಳ ಪ್ರಕಾರಕೊರೊನಾ, ವಿಶ್ವಾದ್ಯಂತ ವೃದ್ಧರಿಗೆ ಹೆಚ್ಚು ಮಾರಣಾಂತಿಕವಾಗಿ ಪರಿಣಮಿಸುತ್ತಿದೆ. ಚೀನ, ಅಮೆರಿಕ, ಇಟಲಿ,ಇರಾನ್, ಜರ್ಮನಿ, ಭಾರತ ಮತ್ತು ಬ್ರಿಟನ್‌ನಲ್ಲಿ ಈ ರೋಗಕ್ಕೆ ತುತ್ತಾದವರನ್ನು ನೋಡಿದಾಗ ಈ ಸಂಗತಿ ಸ್ಪಷ್ಟವಾಗುತ್ತದೆ.
ಚೀನದ ಅಂಕಿ-ಅಂಶಗಳ ಜೊತೆ ಸಾಮ್ಯತೆ ಹೊಂದಿವೆ. ಅದರಲ್ಲೂ, ವೃದ್ಧರಲ್ಲಿ ಹೃದಯ ಸಂಬಂಧಿ ರೋಗಗಳಿಂದ ಬಳಲುತ್ತಿರುವವರಿಗೆ ಅಪಾಯ ಅಧಿಕ. ಮಧುಮೇಹ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. 55ಕ್ಕೂ ಅಧಿಕ ವಯೋಮಾನದವರಿಗೆ ಕೊರೊನಾ ಅಪಾಯ ಅಧಿಕ ಎನ್ನುತ್ತವೆ ಅಂಕಿ-ಅಂಶಗಳು. ಭಾರತದಲ್ಲಿ ಮೃತಪಟ್ಟವರ ವಯೋಮಾನವೂ ಇದಕ್ಕೆ ಸಾಕ್ಷಿ.
Related Articles
Advertisement
● ವೃದ್ಧರಲ್ಲಿ ಕೋವಿಡ್ 19 ಸೋಂಕು ತಗಲುವುದಕ್ಕೂಮೊದಲು, ಗಂಭೀರ ಆರೋಗ್ಯ ಸಂಬಂಧಿಸಮಸ್ಯೆಗಳಿದ್ದರೆ ಅವರಿಗೆ ಕೋವಿಡ್ 19 ವೈರಸ್ ಮಾರಣಾಂತಿಕವಾಗುವುದು ವಿಶ್ವಾದ್ಯಂತ ಸಾಬೀತಾಗಿದೆ. ಹಾಗೆಂದು, ಯುವಕರಿಗೆ,ಮಧ್ಯವಯಸ್ಕರಿಗೆ ಈ ಅಪಾಯವಿಲ್ಲ ಎಂದು ಭಾವಿಸುವುದು ಖಂಡಿತ ತಪ್ಪು.
● ಅಮೆರಿಕದ ರಾಷ್ಟ್ರೀಯ ರೋಗ ನಿಯಂತ್ರಣ ಹಾಗೂ ತಡೆ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, ಕೋವಿಡ್ 19 ಸೋಂಕಿತ ಅಮೆರಿಕನ್ ವೃದ್ಧರ ಪೈಕಿ, ಶೇ.80ರಷ್ಟು ರೋಗಿಗಳು ಮೃತಪಟ್ಟರೆ, ಶೇ.53ರಷ್ಟು ರೋಗಿಗಳು ತುರ್ತು ಚಿಕಿತ್ಸಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಶೇ.45ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದಕ್ಕೆ ವ್ಯತಿರಿಕ್ತವಾಗಿ 20 ಅಥವಾ ಅದಕ್ಕಿಂತ ಕಡಿಮೆ ವಯಸ್ಕರಲ್ಲಿನ ಕೋವಿಡ್ 19 ಸೋಂಕಿತರ ಪೈಕಿ, ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದವರ ಬಗ್ಗೆ ವರದಿಯಾಗಿಲ್ಲ.
ವೃದ್ಧರೇ ಏಕೆ?ಕೋವಿಡ್ 19 ಇರಲಿ ಅಥವಾ ಮತ್ತಾವುದೇ ರೋಗವಿರಲಿ, ವೃದ್ಧರೇ ರೋಗಕ್ಕೆ ಬೇಗ ತುತ್ತಾಗುತ್ತಾರೆ.ವಯಸ್ಸಾಗುತ್ತಿದ್ದಂತೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದು ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಆರೋಗ್ಯ ತಜ್ಞರು.
ವಯಸ್ಸಾಗುತ್ತಿದ್ದಂತೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ
ಕುಂಠಿತವಾಗುತ್ತದೆ. ಹೊರಗಿನಿಂದ ಬಂದು ನಮ್ಮ ದೇಹವನ್ನು ಬಾಧಿಸುವ ರೋಗ ಜಂತುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕುಗ್ಗುತ್ತಾ ಹೋಗುತ್ತದೆ. ಹೀಗಾಗಿ,
ವಯಸ್ಸಾಗುತ್ತಿದ್ದಂತೆ ವ್ಯಕ್ತಿ ರೋಗಕ್ಕೆ ತುತ್ತಾಗುವ ಸಂಭವ ಹೆಚ್ಚುತ್ತಾ ಹೋಗುತ್ತದೆ. ಇದು ಕೊವಿಡ್-19ಗೂ ಅನ್ವಯ. ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಹೇಗೆ ಕುಗ್ಗುತ್ತಾ ಸಾಗುತ್ತದೆ ಎಂಬುದರ ವಿಶ್ಲೇಷಣೆ ಇಲ್ಲಿದೆ ನಮ್ಮ ದೇಹವನ್ನು ಪ್ರವೇಶಿಸುವ ವ್ಯಾಧಿಕಾರಕ ಕ್ರಿಮಿಗಳನ್ನು ಪತ್ತೆ ಹಚ್ಚಿ, ಅವುಗಳ ವಿರುದ್ಧ ಹೋರಾಟ ನಡೆಸುವ ಕೆಲಸವನ್ನು ಬಿಳಿ ರಕ್ತಕಣಗಳು ಮಾಡುತ್ತವೆ. ವಯಸ್ಸಾಗುತ್ತಿದ್ದಂತೆ ನಮ್ಮ ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪಾದನೆಯ ಪ್ರಮಾಣ ಕುಂಟುತ್ತಾ ಸಾಗುತ್ತದೆ. ಜೊತೆಗೆ, ಇರುವ ಬಿಳಿ ರಕ್ತಕಣಗಳಲ್ಲಿನ ಹೋರಾಟದ ಸಾಮರ್ಥ್ಯ ಕೂಡ ಕಡಿಮೆಯಾಗುತ್ತದೆ. ಹೀಗಾಗಿ, ವೃದ್ಧರಿಗೆ ಕೋವಿಡ್ 19 ಸೋಂಕು ತಗುಲಿದಾಗ ಸೋಂಕಿಗೆ ಕಾರಣವಾದ ವೈರಸ್‌ನ್ನು ಪತ್ತೆ ಹಚ್ಚುವ ಹಾಗೂ ಅವುಗಳ ವಿರುದ್ಧ ಹೋರಾಡಿ, ಅವುಗಳನ್ನು ದೇಹದಿಂದ ಹೊರದಬ್ಬುವ ಸಾಮರ್ಥ್ಯ ಕಡಿಮೆಯಾಗುತ್ತದೆ. ● ಇದರಿಂದಾಗಿ, ಕೋವಿಡ್ 19 ವೈರಸ್, ವೃದ್ಧರ ದೇಹ ಪ್ರವೇಶಿಸಿದಾಗ ಕಡಿಮೆ ಸಾಮರ್ಥ್ಯದ, ಕಡಿಮೆ ಸಂಖ್ಯೆಯಲ್ಲಿರುವ ಈ ಬಿಳಿ ರಕ್ತಕಣಗಳ ವಿರುದ್ಧ ಹೋರಾಡಿ
ಮೇಲುಗೈ ಸಾಧಿಸುತ್ತದೆ. ತನ್ಮೂಲಕ, ದೇಹದ ಒಳಭಾಗಕ್ಕೆ ಮತ್ತಷ್ಟು ಆಕ್ರಮಣಕಾರಿಯಾಗಿ ನುಗ್ಗುತ್ತದೆ. ಇದರಿಂದಾಗಿ ಸೋಂಕಿನ ಪ್ರಮಾಣ ವೃದ್ಧಿಸುತ್ತದೆ. ● ಜಾನ್ ಹಾಪ್‌ಕಿನ್ಸ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ಸ್ ನಡೆಸಿದ ಅಧ್ಯಯನ ವರದಿ ಪ್ರಕಾರ, ಬಹುತೇಕ ವೃದ್ಧರಲ್ಲಿ 60 ಅಥವಾ 70ರ ವಯಸ್ಸಿನಲ್ಲಿ ರೋಗ ನಿರೋಧಕ ಶಕ್ತಿ ಸ್ವಲ್ಪ ಮಟ್ಟಿಗೆ ಸಮಾಧಾನಕರವಾಗಿರುತ್ತದೆ. 75 ಅಥವಾ 80
ವರ್ಷವಾಗುತ್ತಿದ್ದಂತೆ ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಅತ್ಯಂತ ಶೀಘ್ರಗತಿಯಲ್ಲಿ ಕ್ಷೀಣಿಸುತ್ತದೆ. ● ವೃದ್ಧರಲ್ಲಿ ರೋಗಾಣುಗಳು ಪ್ರವೇಶಿಸುತ್ತಿದ್ದಂತೆ, ಅವುಗಳ ವಿರುದ್ಧ ಹೋರಾಡುವ ರೋಗ ನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುವ “ಸೈಟೊಕಿನ್’ ಪ್ರೋಟಿನ್‌ಗಳು ಅಧಿಕ ಪ್ರಮಾಣದಲ್ಲಿ ಸ್ರವಿಸುತ್ತವೆ. ಇದು ವ್ಯಕ್ತಿಯಲ್ಲಿ ಊತ, ಅಧಿಕ ಜ್ವರ ಹಾಗೂ ಅಂಗಾಗಗಳ ವೈಫಲ್ಯಕ್ಕೆ ಕಾರಣವಾಗುತ್ತದೆ. ಇದು ವೃದ್ಧರಲ್ಲಿ ವೈರಾಣುಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಸಾಮರ್ಥ್ಯವನ್ನು ಕುಗ್ಗಿಸುವ ಮೂಲಕ ಅವರ
ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು. ಇಲ್ಲವೇ, ವೈರಾಣುಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಪ್ರೋಟಿನ್ ಅತಿಯಾದ ಉತ್ಪಾದನೆ (ಅತಿಸ್ರಾವ) ಆ
ವ್ಯಕ್ತಿಯನ್ನೇ ಕೊಲ್ಲಬಹುದು. ● ವಯಸ್ಸಾಗುತ್ತಿದ್ದಂತೆ ವ್ಯಕ್ತಿಯಲ್ಲಿ ಜೀವಕೋಶಗಳ ಪ್ರತ್ಯುತ್ಪಾದನೆ ಕ್ರಿಯೆ ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚಿದ್ದು, ವ್ಯಕ್ತಿಯ ಅಂಗಾಂಗಗಳು ಸಹಜ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವಂತೆ ನಿಯಂತ್ರಿಸುವ ವ್ಯವಸ್ಥೆ ದುರ್ಬಲವಾಗುವ
ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ವೃದ್ಧರಲ್ಲಿ ಮಧುಮೇಹ, ಕ್ಯಾನ್ಸರ್‌ನಂತಹ ದೀರ್ಘಕಾಲಿಕ ರೋಗ ಬರುವ ಸಂಭವ ಹೆಚ್ಚು. ಇದು ವೃದ್ಧರಲ್ಲಿನ ರೋಗ ನಿರೋಧಕ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ.