Advertisement

ಕಲಿಕೆಯಿಂದ ಬೌದ್ಧಿಕ ಸಾಮರ್ಥ್ಯ ವಿಸ್ತರಿಸಲಿ

01:28 PM Mar 03, 2021 | Team Udayavani |

ದೊಡ್ಡಬಳ್ಳಾಪುರ: ಭಾಷೆಗೂ ಜ್ಞಾನಕ್ಕೂ ಸಂಬಂಧವಿಲ್ಲ. ಭಾಷೆ ಕಲಿಕೆ ವಿವಿಧ ಸ್ತರಗಳಿಗೆ ವ್ಯಾಪಿಸಬೇಕು. ಇಂಗ್ಲಿಷ್‌ ಸೇರಿದಂತೆ ಯಾವುದೇ ಭಾಷೆ ಕಲಿಕೆಯಿಂದ ನಮ್ಮ ಬೌದ್ಧಿಕ ಸಾಮರ್ಥ್ಯ ವಿಸ್ತರಿಸಬೇಕು ಎಂದು ಉಪನ್ಯಾಸಕ ಕೆ.ವೆಂಕಟೇಶ್‌ ತಿಳಿಸಿದರು.

Advertisement

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸಂಚಲನದ ಸಹಯೋಗದಲ್ಲಿ ಮಹಿಳಾ ಸಮಾಜದಲ್ಲಿ ನಡೆದ ಉಚಿತ ಒಂದು ತಿಂಗಳ ಕಾಲ ನ್ಪೋಕನ್‌ ಇಂಗ್ಲಿಷ್‌, ಕಂಪ್ಯೂಟರ್‌ ಕೌಶಲ್ಯತರಬೇತಿ ತರಗತಿಗಳ ಸಮಾರೋಪದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿಮಾತನಾಡಿದರು.

ಹಲವು ಚರ್ಚೆ: ತೋರ್ಪಡಿಕೆಗಾಗಿ ಭಾಷೆ ಕಲಿಯಬಾರದು. ಇಂಗ್ಲಿಷ್‌ ಭಾಷೆ ಕಲಿತಿದ್ದೇವೆಎಂದರೆ ನಾವು ಬುದ್ಧಿವಂತರಾದಂತಲ್ಲ. ಇಂಗ್ಲಿಷ್‌ ಕಲಿಯುವ ನಾವು ಷೇಕ್ಸ್‌ಪಿಯರ್‌ ವರ್ಡ್ಸ್‌ವರ್ಥ್ ಅಂತಹವರ ಸಾಹಿತ್ಯ ಓದಬೇಕು. ಆ ಭಾಷೆಯಲ್ಲಿನವಿಚಾರ ಅರಿತು ನಮ್ಮ ಜ್ಞಾನ ವಿಸ್ತರಿಸಿಕೊಳ್ಳಬೇಕು.ಭಾಷೆ ಕಲಿಯುವ ಕುರಿತಾಗಿ ಇಂದು ಹಲವಾರುಅಧ್ಯಯನ ನಡೆದಿದ್ದು, ಮಕ್ಕಳಿಗೆ ಭಾಷೆ ಕಲಿಗೆ ಬೇಗ ಆಗುತ್ತದೆ. ಆದರೆ ಅವರಿಗೆ ಪೂರ್ಣವಾಗಿ ಯಾವ ಭಾಷೆ ಕಲಿಸಬೇಕು. ಒಂದು ಭಾಷೆ ಕಲಿತ ಮೇಲೆ ಇನ್ನೊಂದು ಹೇಗೆ ಕಲಿಸಬೇಕು ಎನ್ನುವ ವಿಚಾರದಲ್ಲಿ ಇನ್ನೂ ಹಲವಾರು ಚರ್ಚೆ ನಡೆಯುತ್ತಿವೆ ಎಂದರು.

ಸಂವಹನ ಮುಖ್ಯ: ಇಂದು ಕಲಿಕೆಗೆ ಸಾಕಷ್ಟು ಅವಕಾಶಗಳಿದ್ದು ಮೊಬೈಲ್‌ ಅನ್ನು ಸಹ ನಮ್ಮ ಕಲಿಕೆಯ ಉತ್ತಮ ಸಾಧನವನ್ನಾಗಿಸಿಕೊಳ್ಳಬಹುದು.ಉದ್ಯೋಗಕ್ಕಾಗಿ ಇಂಗ್ಲಿಷ್‌ ಕಲಿಯಬೇಕು ಎನ್ನುವುದು ಸಾಮಾನ್ಯ ಮಾತಾಗಿದೆ. ಆದರೆ, ಭಾಷೆಗೂಉದ್ಯೋಗಕ್ಕೂ ಸಂಬಂಧವಿಲ್ಲ. ಇಂಗ್ಲಿಷ್‌ ಭಾಷೆಸ್ವಾಗತಕಾರರು, ಕಾಲ್‌ಸೆಂಟರ್‌ಗಳಲ್ಲಿ ಹೆಚ್ಚುಪ್ರಯೋಜನಕ್ಕೆ ಬರಬಹುದೇ ವಿನಃ ಉದ್ಯೋಗದ ಕೌಶಲ್ಯಕ್ಕೆ ನೆರವಾಗುವುದಿಲ್ಲ. ಕಪಿಲ್‌ ದೇವ್‌ ಅಂತಹಆಟಗಾರರು ಇಂಗ್ಲಿಷ್‌ ಕಲಿಯದೇ ಜಗತ್‌ಪ್ರಸಿದ್ಧಆಟಗಾರರಾದರು. ಭಾಷೆ ಕಲಿಯಲು ಸಂವಹನ ಮುಖ್ಯವಾಗಿದ್ದು, ಬಳಕೆಯಾಗದೇ ಭಾಷೆ ಬರದು ಎಂದರು.

ಸದ್ಬಳಕೆ ಆಗಲಿ: ಯುವ ಸಂಚಲನದ ಅಧ್ಯಕ್ಷ ಚಿದಾನಂದ ಮೂರ್ತಿ ಮಾತನಾಡಿ, ಉದ್ಯೋಗ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಅವಶ್ಯ.ಆದರೆ, ಶಿಬಿರದಲ್ಲಿ ಅಲ್ಪ ಕಾಲದಲ್ಲಿ ಕಲಿತದ್ದು ಮುಂದೆವಿಸ್ತಾರಗೊಳ್ಳುತ್ತಾ ಹೋಗಬೇಕು. ಸರ್ಕಾರದಿಂದಹಲವಾರು ಯುವ ಜನರಿಗಾಗಿ ಯೋಜನೆಗಳಿದ್ದು,ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದರು.

Advertisement

ಶಿಬಿರದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಗಳಾದ ಶಂಕರ್‌, ಪ್ರಿಯಾಂಕ, ಡಿ.ಶ್ರೀಕಾಂತ, ಯುವ ಸಂಚಲನದ ಪದಾಧಿಕಾರಿಗಳಾದ ಡಿ.ಎನ್‌. ದಿವಾಕರ್‌, ನವೀನ್‌ ಕುಮಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next