Advertisement

ಅಂಬೇಡ್ಕರ್‌ ತತ್ವಾದರ್ಶ ಅಳವಡಿಸಿಕೊಳ್ಳೋಣ

02:52 PM Apr 15, 2021 | Team Udayavani |

ಹಾಸನ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ತತ್ವ,ಆದರ್ಶ, ಸಿದ್ಧಾಂತಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಜೆಡಿಎಸ್‌ರಾಜ್ಯಾಧ್ಯಕ್ಷ, ಶಾಸಕ ಎಚ್‌.ಕೆ.ಕುಮಾರಸ್ವಾಮಿಹೇಳಿದರು.ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ 130ನೇ ಜಯಂತಿ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರು.ಅಂಬೇಡ್ಕರ್‌ ನೀಡಿದ ಸಂವಿಧಾನ ದೇಶದಆಡಳಿತಕ್ಕೆ ಕನ್ನಡಿಯಾಗಿದೆ.

Advertisement

ಜೊತೆಗೆ ಶೋಷಿತರಿಗೆಧ್ವನಿ ಕೊಡುವ ನಿಟ್ಟಿನಲ್ಲಿ ಆರ್ಥಿಕ, ರಾಜಕೀಯ,ಸಾಮಾಜಿಕ ನ್ಯಾಯವನ್ನು ಸಮಾಜಕ್ಕೆ ದೊರಕಿಸಿಕೊಟ್ಟಿದೆ ಎಂದರು.ಒಂದು ದೇಶ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕಾದರೆ ಸಾಮಾಜಿಕ ಸಮಾನತೆ ಬಹುಮುಖ್ಯಪಾತ್ರವಹಿಸುತ್ತದೆ.

ದೇಶದಲ್ಲಿ ಮೂಲ ಸಮಸ್ಯೆಗಳಾದ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಹೋಗಲಾಡಿಸಿಸಹಬಾಳ್ವೆ, ಸಹೋದರತೆಯಿಂದಿರಬೇಕೆಂಬುದನು ಡಾ.ಅಂಬೇಡ್ಕರ್‌ ಪ್ರತಿಪಾದನೆ ಮಾಡಿದ್ದಾರೆಎಂದು ತಿಳಿಸಿದರು.ಜಿಪಂ ಅಧ್ಯಕ್ಷೆ ಬಿ.ಎಸ್‌.ಶ್ವೇತಾ ಮಾತನಾಡಿ,ಅಂಬೇಡ್ಕರ್‌ ನೀಡಿರುವ ಸಂವಿಧಾನ ಕೇವಲಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ.

ಎಲ್ಲಸಮುದಾಯಗಳ ಹಾಗೂ ಜನಸಾಮಾನ್ಯರಶಕ್ತಿಯಾಗಿದೆ. ಅಸ್ಪೃಶ್ಯತೆ ಎಂಬುದು ಸಮಾಜದಒಂದು ದೊಡ್ಡ ಪಿಡುಗಾಗಿದ್ದು ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಆಡಳಿತ ವರ್ಗವು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಅಂಬೇಡ್ಕರ್‌ ಅವರು ತನ್ನ ಜೀವನದಲ್ಲಿಅನುಭವಿಸಿದ ಯಾತನೆಗಳನ್ನು ಮುಂದಿನ ಪೀಳಿಗೆಅನುಭವಿಸದಂತೆ ಸಂವಿಧಾನ ರೂಪಿಸುವುದರಜೊತೆಗೆ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಹೆಚ್ಚಿನಸ್ಥಾನಮಾನ ದೊರೆಯುವಂತೆ ಅವಕಾಶಗಳನ್ನುಕಲ್ಪಿಸಿದ್ದಾರೆ. ಸಮಾಜದಲ್ಲಿ ಸಾಮಾಜಿಕ ಸಮಾನತೆಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯ ಹಾಗಾಗಿಶೋಷಿತ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನಮಹತ್ವ ನೀಡಬೇಕು ಎಂದು ತಿಳಿಸಿದರು.

Advertisement

ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾತನಾಡಿ,ಅಂಬೇಡ್ಕರ್‌ ಅವರ ಪ್ರಗತಿಪರ ಚಿಂತನೆಗಳನ್ನುಅಳವಡಿಸಿ ಕೊಳ್ಳುವುದರಿಂದ ಸಮಾಜದಲ್ಲಿ ಉನ್ನತಮಟ್ಟಕ್ಕೆ ಬೆಳವಣಿಗೆಯಾಗಬಹುದು. ಅಂಬೇಡ್ಕರಅವರ ಆಶಯ ದಂತೆ ವ್ಯಕ್ತಿ ಸಮಾಜದ ಶಕ್ತಿಯಾದರೆ ಒಂದು ಕುಟುಂಬ ಮುಂದುವರೆಯುವಜೊತೆಗೆ ಸಮಾಜವು ಮುಂದುವರೆಯುತ್ತದೆಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆಹಾಗೂ ಬಸವಣ್ಣ, ಅಂಬೇಡ್ಕರ್‌ ಅವರ ಚಿಂತನೆಗಳನ್ನು ಅಳವಡಿಸಿ ಕೊಂಡು ಬೆಂಗಳೂರಿನಿಂದತಮ್ಮ ಸೈಕಲ್‌ ಮೂಲಕ ಪ್ರಚಾರ ಮಾಡಿಕೊಂಡುಹಾಸನ ತಲುಪಿದ ಪ್ರೀತಂರನ್ನುಸನ್ಮಾನಿಸಲಾಯಿತು.ಸಾಗರದ ಇಂದಿರಾ ಗಾಂಧಿ ಪ್ರಥಮ ದರ್ಜೆಕಾಲೇಜಿನ ಪ್ರೊಫೆಸರ್‌ ಬಿ.ಎಲ್‌.ರಾಜು ವಿಶೇಷಉಪನ್ಯಾಸ ನೀಡಿದರು.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ, ಜಿಪಂ ಸಿಇಒ ಬಿ.ಎ. ಪರಮೇಶ್‌, ತಾಪಂಅಧ್ಯಕ್ಷೆ ರಂಜಿನಿ, ತಹಶೀಲ್ದಾರ್‌ ಶಿವಶಂಕರಪ್ಪ,ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಮಂಜುನಾಥ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದಅಧ್ಯಕ್ಷ ಈ.ಕೃಷ್ಣೇಗೌಡ, ದಲಿತ ಸಂಘಟನೆಗಳಮುಖಂಡ ಎಚ್‌.ಕೆ.ಸಂದೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next