Advertisement

ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ

10:56 PM Oct 16, 2021 | Team Udayavani |

ದೇವನಹಳ್ಳಿ: ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದು ಅಲ್ಪಸಂಖ್ಯಾತರ ಮತಗಳು ನಿರ್ಣಯವಾಗಿರುವುದರಿಂದ, ಅಲ್ಪಸಂಖ್ಯಾತರ ಬಗ್ಗೆ ಮೃದುಧೋರಣೆ ತೋರಿಸುತ್ತಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದರು.

Advertisement

ತಾಲೂಕಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, 2004 ರಿಂದ ರಾಜಕೀಯಕ್ಕೆ ಬಂದ ಎಚ್.ಡಿ.ಕುಮಾರಸ್ವಾಮಿ ಅವರು  ಮುಸಲ್ಮಾನರಿಗೆ ಏನು ಮಾಡಿದ್ದಾರೆ. ಅಲ್ಪ ಸಂಖ್ಯಾತರಿಗೆ ಸಿದ್ದರಾಮಯ್ಯ ಮಾಡಿದಷ್ಟು ಯಾರು ಮಾಡಲಿಲ್ಲ.

ಜಾಫರ್ ಷರೀಫ್ ಅವರ ಮೊಮ್ಮಗನ ಮೇಲೆ ಅಷ್ಟೊಂದು ಪ್ರೀತಿ ಇದ್ರೆ,  ಮಂಡ್ಯದಲ್ಲಿ ಮಗನ ಬದಲಾಗಿ ಜಾಫರ್ ಷರೀಫ್ ಅವರ ಮೊಮ್ಮಗನಿಗೆ  ಟಿಕೆಟ್ ಕೊಡಬೇಕಿತ್ತು.  ದೇವೆಗೌಡರಿಗೆ ಈಗಲೂ ಅಲ್ಪ ಅಸಂಖ್ಯಾತರ ಬಗ್ಗೆ ಕಾಳಜಿಯಿದೆ, ಆದ್ರೆ ಅದರಲ್ಲಿ ಒಂದು ಪರ್ಸೆಂಟ್ ಸಹ ಕುಮಾರಸ್ವಾಮಿಗೆ ಇಲ್ಲ.

ಪಾರೂಕ್ ಅವರು ಕುಮಾರಸ್ವಾಮಿ ಬಳಿ ಕೇಳಿಕೊಂಡ್ರು ಒಂದು ದಿನ ಆದ್ರು ಸಚಿವರನ್ನ ಮಾಡಿ ಅಂತ ಆದ್ರೆ ಮಾಡಲಿಲ್ಲ ಯಾರು ಮುಸಲ್ಮಾನರ ವಿರೋಧಿ? ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಏನು ಮಾಡಿದ್ದಾರೆ, ಕುಮಾರಸ್ವಾಮಿ ಏನು ಮಾಡಿದ್ದಾರೆ ಎನ್ನುವ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬರಲಿ, ಆಗ ಕುಮಾರಸ್ವಾಮಿ ಬಂಡವಾಳ ಗೊತ್ತಾಗುತ್ತೆ.

ಇದನ್ನೂ ಓದಿ:ಅಯೋಧ್ಯೆ ಯಾತ್ರೆಗೆ 5,000 ರೂ. ನೆರವು: ಗುಜರಾತ್‌ ಸರ್ಕಾರ

Advertisement

ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡ್ತಾರಾ?  ಅಲ್ಪ ಸಂಖ್ಯಾಂತರನ್ನು ಸಿಎಂ ಮಾಡ್ತೀವಿ ಎಂದು ಹೇಳಲಿ, ಆಗ ನಮ್ಮ ಸಮುದಾಯದವರು ಜೆಡಿಎಸ್ ಬಗ್ಗೆಯೋಚನೆ ಮಾಡ್ತೀವಿ.  ರಾಮನಗರದಲ್ಲಿ ಅಲ್ಪ ಸಂಖ್ಯಾತರು ಗೆಲ್ಲುವ ಅವಕಾಶವಿತ್ತು ಯಾಕೆ ಟಿಕೆಟ್ ಕೊಡಲಿಲ್ಲ, ಈಗಲೂ ಯಾಕೆ ಕೊಡ್ತಿಲ್ಲ ಕುಮಾರಸ್ವಾಮಿ ಅವರು,  ಒಂದು ಬಾರಿಯಾದರೂ ಹಜ್ ಕಾರ್ಯಕ್ರಮ ಉದ್ಘಾಟನೆಗೆ ಬಂದಿದ್ದಾರಾ?  ಅವರೇ ಉತ್ತರ ಹೇಳಲಿ, ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಅವರೆಲ್ಲರೂ ಬಂದಿದ್ದಾರೆ. ಕುಮಾರಸ್ವಾಮಿ ಒಂದು ಬಾರಿಯೂ ಬಂದಿಲ್ಲ.‌

ನನ್ನ ರಾಜಕೀಯ ಗುರುಗಳು ಇಬ್ಬರು ಒಬ್ಬರು  ದೇವೇಗೌಡರು ಮತ್ತೊಬ್ಬರು ಸಿದ್ದರಾಮಯ್ಯ ಅವರು ಅಷ್ಟೆ ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಎಷ್ಟು ಪ್ರೀತಿ ಇದೆ ಎನ್ನುವುದು ನನಗೆ ಗೊತ್ತಿದೆ ಎಂದರು.‌

Advertisement

Udayavani is now on Telegram. Click here to join our channel and stay updated with the latest news.

Next