ನಿನಗೆ ಮು¨ªಾಗಿ ಗೌರಮ್ಮ ಅಂತಿ¨ªೆ ನೆನಪಿದೆಯಾ? ನನಗಂತೂ ಮತ್ತೆ ಮತ್ತೆ ನಿನ್ನ ನೆನಪಾಗುತ್ತಿದೆ, ನೀ ಓದಲೆಂದೇ ಈ ಓಲೆಯನ್ನು ಬರೆಯುತ್ತಿದ್ದೇನೆ. ತಪ್ಪದೇ ಓದು.
Advertisement
ನಮ್ಮಿಬ್ಬರ ನಿಷ್ಕಲ್ಮಶ ಪ್ರೀತಿಗೆ ಕೊನೆಗೂ ಬೆಲೆ ಸಿಗಲೇ ಇಲ್ಲ. ನಮ್ಮ ಪ್ರೀತಿ, ಪರಿಸ್ಥಿತಿ ಎಂಬ ಪ್ರವಾಹದಲ್ಲಿ ಕೊಚ್ಚಿ ಹೋಯಿತು. ನಮ್ಮಿಬ್ಬರ ಕನಸು ಕನಸಾಗಿಯೇ ಉಳಿಯಿತು. ನಿಜವಾದ ಪ್ರೀತಿಗೆ ಈ ಸಮಾಜದಲ್ಲಿ ಬೆಲೆ ಸಿಗಲ್ಲ ಎಂಬ ಮಾತು ಮತ್ತೂಮ್ಮೆ ನಿಜವಾಯಿತು, ಅಲ್ವಾ ಗೌರಮ್ಮ.
ನಿನ್ನ ಮದುವೆ ದಿನ ಸಮೀಪಿಸುತ್ತಿದ್ದಂತೆ, ನಾನು ನಿನ್ನಿಂದ ದೂರ ಆಗೋಕೆ ಪ್ರಯತ್ನಿಸುತ್ತಿ¨ªೆ. ಸ್ವಲ್ಪ ದಿನದ ನಂತರ ಸಂಪೂರ್ಣವಾಗಿ ದೂರಾನೇ ಆಗಿºಟ್ಟೆ. ನಂತರದ ದಿನಗಳಲ್ಲಿ ನಿನ್ನ ಮದುವೆ ಆಗಲಿಲ್ಲ, ಅದಕ್ಕೆ ಕಾರಣ ನಾನೇ ಅಂತ ಗೊತ್ತಾಗಿ ನನ್ನ ಹೃದಯ ಒಡೆದು ಛಿದ್ರ ಛಿದ್ರವಾಯಿತು. ನಿನ್ನ ಮದುವೆ ನಿÇÉೋಕೆ ನಾನೇ ಕಾರಣನಾ? ನಾನು ಮಾಡಿದ್ದು ತಪ್ಪಾ? ನಾನು ಮಾಡಿರೋ ತಪ್ಪನ್ನು ನಾನೇ ಸರಿ ಮಾಡ್ತೀನಿ, ಒಂದು ಅವಕಾಶ ಕೊಡು. ಹೇಳು ನನ್ನ ಮುದ್ದು ಗೌರಮ್ಮ. ನೀನು ಎಲ್ಲಿದ್ದೀ? ಹೇಗಿದ್ದೀ? ಏನ್ಮಾಡ್ತಾ ಇದ್ದೀ? ನಾನು, ತುಂಬ ಪ್ರೀತಿಯಿಂದ ಕೇಳಿಕೊಳ್ತಾ ಇದೀನಿ. ಸರಿದು ಹೋಗದ ಹಾಗೆ ಮತ್ತೆ ಬರುವೆಯಾ ನನ್ನ ಹೃದಯದೊಳಗೆ. ನೀನಾಗಿರುವೆ ನನ್ನ ಜೀವದ ಚೈತನ್ಯ, ಹೀಗೂ ಮುಡಿಪಿಟ್ಟಿರುವೆ ನಿನಗೆ ನನ್ನ ಹೃದಯವ… ಹೊತ್ತುರಿದು ಬಿಡುವ ರಾತ್ರಿಗಳ ವಿರಹಕ್ಕೆ ಅದೆಷ್ಟು ಕ್ಷಣಗಳನ್ನು, ಸಾವಿನ ಬಳಿ ಜೀತಕ್ಕಿಡಲಿ? ನೀನು ನನ್ನ ಜೀವನಕೆ ಓಡೋಡಿ ಬಂದುಬಿಡು, ಮೊದಲಿನಂತೆ ಪ್ರೀತ್ಸೋಣ.
Related Articles
– ಎಸ್.ಕೆ.ಪತ್ತಾರ, ಲಿಂಗಸ್ಗೂರು
Advertisement