ನನಗೆ ಒಂದು ಕ್ಷಣ ಮೊಗದಲ್ಲಿ ಮಂದಹಾಸ ಬೀರಿತ್ತು. ಅದೇಕೆಂದರೆ ನನ್ನ ಮನಸಿನಲ್ಲಿ ನಡೆಯುತ್ತಿರುವ ಯೋಚನೆಗೂ, ಇಲ್ಲಿ ನಡೆಯುತ್ತಿರುವ ಸಂದರ್ಭಕ್ಕೂ ಸಾಮ್ಯತೆ ಇದೆ ಅಲ್ಲವೇ!ಎಂದು. ಹೀಗೆ ಯೋಚಿಸುತ್ತ ಹೋದರೇ, “ಎಷ್ಟೋ ಕನಸುಗಳಿಗೆ ಆಸರೆಗಳಿರುವುದಿಲ್ಲ.ಆದರೆ ಇನ್ನೆಷ್ಟೋ ಕನಸುಗಳಿಗೆ ಆಸರೆಗಳಿದ್ದರೂ, ಸಾಧಿಸುವ ಹುಮ್ಮಸ್ಸು ಇರುವುದಿಲ್ಲ.’ ಈ ಮನುಷ್ಯನಿಗೆ ಕನಸುಗಳು ಅತೀ ಆದರೆ, ದೇವರು ಕೂಡ ಒಮ್ಮೊಮ್ಮೆ ಶತ್ರುವಾಗಿ ಬಿಡುತ್ತಾನೆ. ಏಕೆಂದರೆ ಮನದಲ್ಲಿ ಸಾವಿರ ಚಿಂತೆ ಇದ್ದರೂ, ಇರುಳಲ್ಲಿ ಚಂದ್ರನನ್ನು ಮರೆತು ಹಗಲಲ್ಲಿ ನಕ್ಷತ್ರಗಳನ್ನು ಹುಡುಕುವ ಆಸೆ.
Advertisement
ಇನ್ನೂ ಕೆಲವೊಮ್ಮೆ ವಿಚಿತ್ರವಾಗಿ ಆಡುವುದನ್ನ ನೋಡಿದರೆ, ಹುಟ್ಟಿಸುವ ದೇವರಿಗೂ ಮಾನವನ ಬಗ್ಗೆ ತಿಳಿಯುವುದಿಲ್ಲ ಅಂತ ಅನಿಸುತ್ತದೆ.ಹೀಗೆ ಹುಟ್ಟಿದ ಮಗು ಅದರ ಪೋಷಕರ ಸ್ವಾಧೀನದಲ್ಲಿ ಬೆಳೆಯುತ್ತದೆ. ಹಾಗೆಯೇ ಪಾಲಕರ ಕನಸುಗಳು ಆ ಮಗುವಿನಲ್ಲಿ ಕಾಣುತ್ತಾರೆ. ಪಾಲಕರು ಮಕ್ಕಳಿಗೂ ಹೊಸ ಹೊಸ ಆಕಾಶದಂತೆ ವಿಶಾಲವಾದ ಕನಸುಗಳು ಕಾಣುವಂತೆ ಓಲೈಸುತ್ತಾರೆ. ಆ ಮಗು ಬೆಳೆಯುತ್ತ ಹೊಸ ಕನಸುಗಳನ್ನು ಕಾಣುತ್ತಾ, ಅದನ್ನು ಗುರಿ ತಲುಪಲು ಪ್ರಯತ್ನಿಸುತ್ತದೆ. ಆ ಪ್ರಯತ್ನ ಬೆಳೆಯುತ್ತ -ಬೆಳೆಯುತ್ತ ಕುಂಠಿತವಾಗುತ್ತದೆ. ಅದಕ್ಕೆ ಕಾರಣಗಳು ನೂರಾರು ಇರಬಹುದು.
ಎಂ.ಎಂ., ಮಹಾವಿದ್ಯಾಲಯ, ಶಿರಸಿ