Advertisement

ಹೊಸ ವರ್ಷ ಹರ್ಷದಾಯಕವಾಗಿರಲಿ

12:53 PM Jan 02, 2018 | Team Udayavani |

ಭಾಲ್ಕಿ: ಹಳೆಯ ನೆನಪುಗಳನ್ನು ಕಳೆದು ಹೊಸತನ ಹುಡುಕುವ ನಮಗೆ ಹೊಸ ವರ್ಷ ಹರ್ಷದಾಯಕವಾಗಿರಲಿ ಎಂದು ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು. 

Advertisement

ಪಟ್ಟಣದ ಚನ್ನಬಸವಾಶ್ರಮದ ಬಳಿಯ ಕುಂಬಾರ ಗುಂಡಯ್ನಾ ಕಲ್ಯಾಣ ಮಂಟಪದಲ್ಲಿ ಹಿರೇಮಠ ಸಂಸ್ಥಾನ ಮತ್ತು ಯುವಜನ ಒಕ್ಕೂಟದ ಸಂಯುಕ್ತಶ್ರಯದಲ್ಲಿ ಆಯೋಸಿದ್ದ “ಹೊಸ ವರ್ಷ ತರಲಿ ಹರ್ಷ’ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಹೊಸ ವರ್ಷವನ್ನು ಸ್ವಾಗತಿಸುವುದಕ್ಕಾಗಿ ಯುವಕರು ದುಶ್ಚಟಗಳ ದಾಸರಾಗಿ, ತಮ್ಮ ಪ್ರಾಣವನ್ನೂ ಕಳೆದುಕೊಳ್ಳುವ ಮಟ್ಟಿಗೆ ಹೋಗುತ್ತಾರೆ.ಆದರೆ ನಮ್ಮ ಯುವಕರು ಹೊಸ ವರ್ಷ ಸ್ವಾಗತಿಸುವ ನಿಟ್ಟಿನಲ್ಲಿ ನಗೆ ಹನಿ, ಅಧ್ಯಾತ್ಮಿಕ ಚಿಂತನೆ ಕಾರ್ಯಕ್ರಮ
ಆಯೋಜಿಸಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.

ಕಾರ್ಯಕ್ರಮ ಸಂಯೋಜಕ ಚನ್ನಬಸವ ಬಳತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಶುವೈದ್ಯಕೀಯ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಸ್ತೀರ್ಣ ನಿರ್ದೇಶಕ ಡಾ| ಶಿವಪ್ರಕಾಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೇವೇಳೆ ಅಂತಾರಾಷ್ಟ್ರೀಯ ಹಾಸ್ಯಕಲಾವಿದ ಮಹಾದೇವ ಸತ್ಯಗೇರಿ, ಮತ್ತು ಆಕಾಶವಾಣಿ, ದೂರದರ್ಶನ ಸಂಗೀತ ಕಲಾವಿದರಾದ ಶಿವರುದ್ರಯ್ನಾ ಗೌಡಗಾಂವ, ಲೋಕನಾಥ ಚಾಂಗಲೇರಾ ಅವರಿಂದ ಸಂಗೀತ ಕಾರ್ಯಕ್ರಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜಕುಮಾರ ಘೋಟಕರ ಅವರಿಂದ ಶಾಸ್ತ್ರೀಯ ಸಂಗೀತ ಮತ್ತು ವಿನಾಯಕ ಚೌಧರಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು.

ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ನಿರಂಜನ ಸ್ವಾಮಿಗಳು, ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು, ಸೃಷ್ಟಿ ಸಂಗೀತ ವಿದ್ಯಾಲಯದ ಪ್ರೊ| ಎಸ್‌.ಕೆ.ಪಾಟೀಲ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ ಕಾಂಬಳೆ, ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಕಾರಾಮುಂಗೆ, ಅಶೋಕ ರಾಜೋಳೆ ಇದ್ದರು. ಪುರಸಭೆ ಸದಸ್ಯ ಮಹಾದೇವ ಸ್ವಾಮಿ ಸ್ವಾಗತಿಸಿದರು. ಮದನ ಗಾಂವಕರ ನಿರೂಪಿಸಿದರು. ಸಂತೋಷ ಹಡಪದ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next