ಕಾರಡ್ಕ ಗ್ರಾ.ಪಂ.ಸದಸ್ಯೆ ರೇಣುಕಾ ದೇವಿ ಅವರು ಶುಚೀ ಕರಣ ಉದ್ಘಾಟಿಸಿದರು. ಸಮಾಜ ಮುಖೀಯಾಗಿ ಚಿಂತಿಸಿ, ಬಿಡುವಿನ ಸಮಯದಲ್ಲಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವ ವಿದ್ಯಾ ರ್ಥಿಗಳ ಸೇವೆ ಇತರರಿಗೆ ಮಾದರಿ ಯಾಗಿದೆ ಎಂದು ಹೇಳಿದರು.
Advertisement
ಮುಖ್ಯ ಅತಿಥಿಯಾಗಿದ್ದ ಯು.ಪಿ ವಿಭಾಗದ ಇಕೋ ಕೋರ್ಡಿನೇಟರ್ ಸಾವಿತ್ರಿ ಟೀಚರ್, ತಾವು ಶುಚಿಯಾಗಿ ದ್ದುಕೊಂಡು ಶಾಲಾ ಪರಿಸರ ಸ್ವತ್ಛ ವಾಗಿ ಇರಿಸಿಕೊಳ್ಳುತ್ತಾ ಇದೀಗ ಶಾಲಾ ಸಮೀಪದ ಕಾಲನಿಯನ್ನು ದತ್ತು ಗ್ರಾಮವನ್ನಾಗಿ ಪರಿಗಣಿಸಿ ಶುಚೀಕರಣ ಸೇವೆಗೈಯ್ಯುವ ಎನ್ನೆಸ್ಸೆಸ್ ಸ್ವಯಂ ಸೇವಕರ ಕಾರ್ಯ ಶ್ಲಾಘನೀಯವೆಂದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಚಂದ್ರಶೇಖರ ಏತಡ್ಕ ಅವರು ದತ್ತು ಗ್ರಾಮದಲ್ಲಿ ಎನ್ನೆಸ್ಸೆಸ್ ಘಟಕ ವಿದ್ಯಾರ್ಥಿಗಳ ಸಮಾಜ ಸೇವಾಯೋಜನೆಯ ಮಾಹಿತಿ ನೀಡಿ ಪ್ರಸ್ತುತ ದತ್ತು ಗ್ರಾಮದ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.