Advertisement

ಸಿಎಂ ಎಚ್‌ಡಿಕೆ ಬಹಿರಂಗ ಕ್ಷಮೆ ಕೇಳಲಿ

11:26 AM May 26, 2018 | Team Udayavani |

ಹರಿಹರ: ಮಠಾಧಿಧೀಶರ ಕುರಿತು ಸಿಎಂ ಕುಮಾರಸ್ವಾಮಿ ಅತ್ಯಂತ ಲಘುವಾಗಿ ಮಾತನಾಡಿದ್ದು, ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ವೀರಶೈವ ಸಮಾಜ ಬಾಂಧವರು ಆಗ್ರಹಿಸಿದರು.

Advertisement

ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ನೀಡಿರುವ ಪ್ರತಿಕ್ರಿಯೆ ಕುರಿತು ನಗರದ
ನೀರಾವರಿ ಇಲಾಖೆ ಆವರಣದ ದೇವಸ್ಥಾನ ಮುಂಭಾಗ ಶುಕ್ರವಾರ ವೀರಶೈವ ಸಮಾಜದ ಮುಖಂಡರು
ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಮುಖಂಡರು, ಸಿಎಂ ಕುಮಾರಸ್ವಾಮಿ ಸ್ವಾಮೀಜಿಯವರಿಗೆ ರಾಜಕೀಯ
ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಸಂಕುಚಿತ ಮನೋಭಾವ ಬಿಡಬೇಕು. ಆಸಕ್ತಿ ಇದ್ದರೆ ರಾಜಕೀಯಕ್ಕೆ ಬನ್ನಿ ಎಂದು ಹೇಳುವ ಮೂಲಕ ನಾಡಿನ ಎಲ್ಲ ಪೂಜ್ಯರನ್ನು ಅವಮಾನಿಸಿದ್ದಾರೆ. ಕುಮಾರಸ್ವಾಮಿ ಕೂಡಲೆ ತಮ್ಮ ಹೇಳಿಕೆ ವಾಪಸ್‌ ಪಡೆದು ಕ್ಷಮೆ ಯಾಚಿಸಬೇಕು ಎಂದರು.

ಇಂದು ಪ್ರತಿಭಟನೆ: ಶನಿವಾರ ಬೆಳಗ್ಗೆ 10.30ಕ್ಕೆ ನಗರದ ಪಕ್ಕೀರಸ್ವಾಮಿ ಮಠದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟು ಗಾಂಧಿ ವೃತ್ತದಲ್ಲಿ ಸಿಎಂ ಪ್ರತಿಕೃತಿ ದಹಿಸಿ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಗುವುದು. ನಂತರ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್‌ಗೆ ಮನವಿ ನೀಡಲು ನಿರ್ಣಯಿಸಲಾಯಿತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮುಖಂಡರು ಕೋರಿದರು.

ಸಭೆಯಲ್ಲಿ ಹಲಸಬಾಳು ಶಿವಾನಂದಪ್ಪ, ನ್ಯಾಯವಾದಿ ಬಿ.ಹಾಲಪ್ಪ, ಹಾಲೇಶಪ್ಪ, ತಾಪಂ ಮಾಜಿ ಸದಸ್ಯ ಡಿ.ಕುಮಾರ್‌, ಮಂಜುನಾಥ್‌ ಬಿ., ಮಂಜುನಾಥ್‌ ಎಸ್‌., ಸಿದ್ದೇಶ್‌ ಬೆಳೆಕೆರೆ, ಹಳ್ಳದಕೇರಿ ಪ್ರಶಾಂತ್‌, ಬಿ.ಆನಂದ್‌, ಹರಗನಹಳ್ಳಿ ಮಂಜಪ್ಪ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next