Advertisement

ಮಂಗಳೂರು ನಗರಾಭಿವೃದ್ಧಿಗೆ ಬಡಾವಣೆಗಳೂ ನಿರ್ಮಾಣವಾಗಲಿ

06:15 AM Aug 13, 2017 | |

ಕಳೆದ ನಾಲ್ಕು ಜನಗಣತಿಯ ಅವಧಿಯಲ್ಲಿ ಅಂದರೆ 1971 ರಿಂದ 2011ರ ತನಕ ಬೆಂಗಳೂರು ನಗರದ ಜನಸಂಖ್ಯೆ ಸುಮಾರು 16.50 ಲಕ್ಷದಿಂದ ಸುಮಾರು 85 ಲಕ್ಷಕ್ಕೆ ಏರಿದ್ದು, ಅದೇ ಅವಧಿಯಲ್ಲಿ ಮಂಗಳೂರಿನ ಜನಸಂಖ್ಯೆಯು ಸುಮಾರು 1.65 ಲಕ್ಷದಿಂದ  ಸುಮಾರು 5 ಲಕ್ಷಕ್ಕೆ ಏರಿದೆ. ಅಂದರೆ ಮಂಗಳೂರು ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಸಾಕಷ್ಟು ಬೆಳೆದಿದೆ. ಆದರೆ ಇನ್ನೂ ಹೆಚ್ಚು ಬೆಳೆಯಬೇಕಿತ್ತು.

Advertisement

ಬೆಂಗಳೂರು ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಹೆಸರುವಾಸಿಯಾಗಿದೆ. ಆದ್ದರಿಂದ ಅದು ಬೆಳೆದಿರಬಹುದು. ಆದರೆ ಮಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಿರೀಕ್ಷೆಯಷ್ಟು ಪ್ರಗತಿಯಾಗಿಲ್ಲ. ಅಲ್ಲದೇ ಒಂದು ನಗರ ಉದ್ಯೋಗ, ಅವಕಾಶ ಮತ್ತು ಮೂಲ ಸೌಕರ್ಯಗಳನ್ನು ಪರಿಗಣಿಸಿ ಬೆಳೆಯುತ್ತದೆ. ನಗರ ಬೆಳೆದಂತೆ ಜನರ ಆವಶ್ಯಕತೆಗಳು ಹೆಚ್ಚಾಗತೊಡಗುತ್ತದೆ. ಹೀಗಾಗಿ ಈ ಬಗ್ಗೆಯೂ ಮುಂದಾಲೋಚನೆ ಅಗತ್ಯವಿದೆ. 

ನಮ್ಮ ನಗರದಲ್ಲಿ ಬಹುಮಹಡಿ ಮನೆಗಳು, ಕಟ್ಟಡಗಳು ಸಾಕಷ್ಟಿವೆ ಮತ್ತು ಹೊಸ ಕಟ್ಟಡಗಳು ಹುಟ್ಟುತ್ತಲೇ ಇವೆ. ಆದರೆ ಇದರಿಂದ ನಗರ ಹೆಚ್ಚು ಬೆಳೆಯುವುದಿಲ್ಲ. ಒಂದು ಸಣ್ಣ ಪ್ರದೇಶದಲ್ಲಿ ಅಧಿಕ ಜನರು ವಾಸಮಾಡುವುದರಿಂದ ಅಲ್ಲಿ ಒತ್ತಡ ಹೆಚ್ಚಾಗುತ್ತದೆ. ಇದಕ್ಕೆ ಪರಿಹಾರವೆಂದರೆ ನಗರದ ಹೊರವಲಯದಲ್ಲಿ ಅಥವಾ ನಗರದಿಂದ ಕೆಲವು ಕಿ.ಮೀ ದೂರದಲ್ಲಿ ಬಡಾವಣೆಗಳನ್ನು ನಿರ್ಮಿಸುವುದು. 

ದೊಡ್ಡದೊಡ್ಡ ಬಡಾವಣೆಗಳನ್ನು ನಿರ್ಮಿಸಿದರೆ ಅಲ್ಲಿ ಅಂಗಡಿಗಳು, ಶಾಲೆ, ಉದ್ಯಾನವನ ಮತ್ತು ಮೈದಾನಕ್ಕೆ ಅವಕಾಶರಬೇಕು. ಇದರಿಂದ ಒಂದು ಊರು ಸೃಷ್ಟಿಯಾಗುತ್ತದೆ ಮತ್ತು ಸುತ್ತಮುತ್ತಲಿನ ಪ್ರದೇಶ ಬೆಳೆಯಲಾರಂಭಿಸುತ್ತದೆ. ಅದರೊಂದಿಗೆ ಎಲ್ಲ ಜನರ ಆವಶ್ಯಕತೆಗೆ ಅನುಗುಣವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ. ಇದು ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಶಕಗಳಲ್ಲಿ ಆದ ಬೆಳವಣಿಗೆ.

ನಮ್ಮ ಮಂಗಳೂರು, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದೆ. ಉದ್ದಿಮೆ ಹಾಗೂ ಪ್ರವಾಸೋದ್ಯಮದಲ್ಲೂ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳು ಲಭಿಸಲಿದೆ. ಆದ್ದರಿಂದ ಮಂಗಳೂರಿನ ಹೊರವಲಯದಲ್ಲಿ ದೊಡ್ಡ ದೊಡ್ಡ ಬಡಾವಣೆಗಳನ್ನು ನಿರ್ಮಿಸಲು ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆ ಚಿಂತನೆ ನಡೆಸಬೇಕಿದೆ.

Advertisement

ವಿಶ್ವನಾಥ್‌ ಕೋಟೆಕಾರ್‌, ಕೋಡಿಕಲ್‌

Advertisement

Udayavani is now on Telegram. Click here to join our channel and stay updated with the latest news.

Next