ಸಂಡೂರು: ಮೀಸಲಾತಿಯನ್ನು ಡಾ| ಬಿ.ಅರ್. ಅಂಬೇಡ್ಕರ್ ಅವರು ಜಾರಿಗೆ ತಂದ ಪರಿಣಾಮ ಇಂದು ನಾವು ನೀವು ಸಹ ರಾಜಕೀಯದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಹ ರಾಜಕೀಯ ಚುಕ್ಕಾಣಿ ಹಿಡಿದು ಸಮಾಜದ ಪ್ರಗತಿಗೆ ನಾಂದಿಯಾಗಬೇಕು ಎಂದು ಮಾಜಿ ಶಾಸಕ ಸಿರಾಜ್ ಶೇಖ್ ತಿಳಿಸಿದರು.
ಅವರು ಪಟ್ಟಣದ ಗುರುಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ| ಬಿ. ಕೃಷ್ಣಪ್ಪ ಸ್ಥಾಪಿತ ತಾಲೂಕು ಘಟಕ ಹಮ್ಮಿಕೊಂಡಿದ್ದ 2020-21ನೇ ಸಾಲಿನಲ್ಲಿ ತಾಲೂಕಿನಲ್ಲಿ ಆಯ್ಕೆಯಾದ ಚುನಾಯಿತ ಪ್ರತಿನಿಧಿ ಗಳ ಸನ್ಮಾನ, ಇಲ್ಲಿಯವರೆಗೆ ಸಮಾಜ ಸೇವೆ ಮಾಡಿದ ಸಂಚಾಲಕರ ಸನ್ಮಾನ ಹಾಗೂ ಕೂಡ್ಲಿಗಿ ಸಾಲುಮನೆ ಶಿವಣ್ಣ ಅವರ ಕುಟುಂಬಕ್ಕೆ ಸಹಾಯಧನ ನೀಡಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಜಾತಿವಾರು ಹಂಚಿಕೆ ಬಜೆಟ್ ಆಗಿದೆ.
ಯಾವುದೇ ದೂರದೃಷ್ಟಿಯಾಗಲಿ, ಸಮಾನತೆಯಾಗಲಿ ಇಲ್ಲವಾಗಿ ಬರೀ ಬಂಡವಾಳ ಹಿತಾಸಕ್ತಿ ಹೊಂದುವ ರೀತಿಯಲ್ಲಿ ಆಗಿದೆ. ನೂತನವಾಗಿ ಮೀಸಲಾತಿ ನೀಡಬೇಕಾದರೆ ಈಗ ನೀಡಿದ ಮೀಸಲಾತಿ ಕಸಿದುಕೊಂಡು ನೀಡಬೇಕಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ ಎಂದರು.
ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮೀಜಿ ಮಾತನಾಡಿ, ಸಮಾನತೆಯನ್ನು 12ನೇ ಶತಮಾನದಲ್ಲಿ ಬಸವಾದಿಶರಣರು ಅನುಷ್ಠಾನಕ್ಕೆ ತಂದರು. ಡಾ| ಬಿ.ಅರ್. ಅಂಬೇಡ್ಕರ್ ಸಂವಿಧಾನದ ಮೂಲಕ ನಮಗೆ ನೀಡಿದ್ದಾರೆ. ಆದ್ದರಿಂದ ಸಂವಿಧಾನವನ್ನು ಗೌರವಿಸುವ ಮೂಲಕ ಸಮಾನತೆ ಸಮಾಜ ಕಟ್ಟೋಣ ಎಂದರು. ಈ ಸಂದರ್ಭದಲ್ಲಿ ದಲಿತ ಮುಖಂಡ ಕೂಡ್ಲಿಗಿ ಸಾಲುಮನೆ ಶಿವಣ್ಣನವರ ಕುಟುಂಬಕ್ಕೆ 50 ಸಾವಿರ ಮೊತ್ತದ ಚೆಕ್ ವಿತರಿಸಲಾಯಿತು.
ಎಂ. ರಾಮಕೃಷ್ಣ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಎಸ್. ವಿN°àಶ್, ರಾಜ್ಯ ಸಂಚಾಲಕ ನಿಂಗಪ್ಪ ಐಹೊಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ. ದುರುಗೇಶ್, ತಾಯಪ್ಪ ಭುಜಂಗನಗರ, ದೌಲತ್‌ಪುರ ಹನುಂತಪ್ಪ.ಎ., ಚರಂತಯ್ಯ, ಪರಶುರಾಮ ಸಿ., ಪಾಂಡುರಂಗಪ್ಪ, ಎಲ್. ಎಚ್. ಶಿವಕುಮಾರ್, ವಸಂತಕುಮಾರ್, ಮರಿಸ್ವಾಮಿ, ಪ್ರತಾಪ್ ನೌಕರರ ಸಂಘದ ಅಧ್ಯಕ್ಷರು, ಕುಮಾರ್ ಯಶವಂತನಗರ, ಕವಿತರಾಜು, ಸುವರ್ಣ ಸಾಲುಮನಿ, ದುರುಗೇಶ್ ಯಶವಂತನಗರ, ಸಾಲಿಗಂಗಪ್ಪ, ದೇವೇಂದ್ರಪ್ಪ ಇದ್ದರು. ಬಸವರಾಜ ಬ್ರೂಸ್ಲಿ ಸ್ವಾಗತಿಸಿದರು. ಮಲ್ಲೇಶ ಕಮತೂರು ನಿರೂಪಿಸಿದರು