Advertisement

ದೇಶದ ಅಭಿವೃದ್ಧಿಯಲ್ಲಿ ಯುವ ವಿಜ್ಞಾನಿಗಳು ಕೈ ಜೋಡಿಸಲಿ: ಜೋಷಿ

08:52 PM Jul 01, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಬಹಳಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಪ್ರಗತಿ ವಿಚಾರದಲ್ಲಿ ಯುವ ವಿಜ್ಞಾನಿಗಳು ಸರಕಾರದ ಜತೆಗೆ ಕೈ ಜೋಡಿಸಬೇಕು ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್‌ ಜೋಷಿ ಹೇಳಿದರು.

Advertisement

ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಶುಕ್ರವಾರ ಕುಮಾರಸ್ವಾಮಿ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭೂ ವೈಜ್ಞಾನಿಕ ಸರ್ವೇಕ್ಷಣೆಯ ನೂತನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಭೂ ಸರ್ವೇಕ್ಷಣೆ ಇಲಾಖೆಯಲ್ಲಿ ಯುವ ವಿಜ್ಞಾನಿಗಳ ಸಂಖ್ಯೆ ಅಧಿಕವಿದೆ. ಸುಮಾರು 800 ಉತ್ಸಾಹಿ ಮಹಿಳಾ ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಖನಿಜ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಹಳಷ್ಟು ಪ್ರಗತಿ ಬಯಸಿದ್ದಾರೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಖನಿಜ ವಲಯ ಬಹುದೊಡ್ಡ ಕೊಡುಗೆ ನೀಡಬೇಕು ಎಂಬುದು ಅವರ ಆಶಯವಾಗಿದೆ. ಸರಕು ಸೇವಾ ತೆರಿಗೆ ವಲಯಕ್ಕೆ ಶೇ.2ರಷ್ಟು ತೆರಿಗೆ ಖನಿಜ ಕ್ಷೇತ್ರ ವಲಯದಿಂದ ಸಂದಾಯವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಶೇ.5ಕ್ಕೆ ಏರಬೇಕು ಎಂಬುದು ಪ್ರಧಾನಿಯವರ ಕನಸಾಗಿದೆ. ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದರು.

ಖನಿಜ ಕ್ಷೇತ್ರದಲ್ಲಿ ಕರ್ನಾಟಕ ಕೂಡ ಉತ್ತಮ ಪ್ರಗತಿ ಸಾಧಿಸಿದೆ. ಕೇಂದ್ರ ಸರಕಾರ ನೀಡುವ ಖನಿಜ ಪುರಸ್ಕಾರದಲ್ಲಿ 3ನೇ ಪ್ರಶಸ್ತಿ ಪಡೆದಿದೆ. ಯುವ ಜನರಿಗೆ ಮತ್ತಷ್ಟು ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವೂ ಗಣಿ ಹರಾಜು ಪ್ರಕ್ರಿಯೆ ಆರಂಭಿಸಬೇಕಾಗಿದೆ. ಸರಕಾರದ ಬೊಕ್ಕಸಕ್ಕೂ ಆದಾಯ ಬರುವುದರ ಜತೆಗೆ ಕೂಲಿ ಕಾರ್ಮಿಕರಿಗೂ ಇದರಿಂದ ಕೆಲಸ ದೊರೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next