ಕಲಬುರಗಿ: ಕವಿ, ಸಾಹಿತಿ, ಕಲಾವಿದ, ಲೇಖಕರು ಸಮಾಜದ ಆಗುಹೋಗುಗಳಿಗೆ ಸದಾ ಸ್ಪಂದಿಸಬೇಕು ಎಂದು ಮಾಜಿ ಮಾಜಿ ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಆಳಂದ ಸಾಸಿರನಾಡು ಸಾಹಿತ್ಯ-ಸಾಂಸ್ಕೃತಿಕ ವೇದಿಕೆ, ಬಸವೇಶ್ವರ ಸಮಾಜ ಸೇವಾ ಬಳಗದ ಆಶ್ರಯದಲ್ಲಿ ನಗರದ ಚೇಂಬರ್ ಆಪ್ ಕಾಮರ್ಸ್ ಸಭಾಂಗಣದಲ್ಲಿ ರವಿವಾರ ವಿಶ್ವನಾಥ ಭಕರೆ ರಚಿಸಿದ “ಶಿವರುದ್ರಯ್ಯನ ಶಿವತಾಂಡವ’ ಕಥಾ ಸಂಕಲನ ಜನಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನ ಅನುಭವಗಳೇ ಕಥಾವಸ್ತುವಾಗಬೇಕು. ಅಂದಾಗ ಆ ಕಥೆಗಳಿಗೆ ಗಟ್ಟಿತನ ಬರುತ್ತದೆ. ಪ್ರತಿಯೊಂದು ಗ್ರಾಮಕ್ಕೂ ಅದರದ್ದೇ ಆದ ಇತಿಹಾಸವಿರುತ್ತದೆ. ಅಂತಹ ಗ್ರಾಮೀಣ ಪ್ರದೇಶದ ಇತಿಹಾಸ ಹೊರತರಬೇಕು ಎಂದು ಹೇಳಿದರು. ಕೃತಿ ಜನಾರ್ಪಣೆ ಮಾಡಿ ಮಾತನಾಡಿದ ಡಾ| ಕಾಶಿನಾಥ ಅಂಬಲಗಿ, ಪುಸ್ತಕಗಳು ಜ್ಞಾನದ ಭಂಡಾರ. ಬರಹಗಾರರಾದವರು ಹೆಚ್ಚು ಓದಬೇಕು. ಸುಸಂಸ್ಕೃತ ಮತ್ತು ಶ್ರೇಷ್ಠ ಸಂಸ್ಕೃತಿ ಕಟ್ಟುವ ಜವಾಬ್ದಾರಿ ಲೇಖಕರ ಮೇಲಿದೆ ಎಂದು ಹೇಳಿದರು. ಕೃತಿ ಕುರಿತು ಮಾತನಾಡಿದ ಪತ್ರಕರ್ತ ಲೇಖಕ ಡಾ| ಶಿವರಂಜನ್ ಸತ್ಯಂಪೇಟೆ, ಶಿವರುದ್ರಯ್ಯನ ಶಿವತಾಂಡವ ಸಂಕಲನದ ಕಥೆಗಳು ನೈಜ ಘಟನೆ ಆಧರಿಸಿವೆ ಎಂದರು. ಪ್ರೊ| ಆರ್.ಕೆ. ಹುಡಗಿ ಅಧ್ಯಕ್ಷತೆ ವಹಿಸಿದ್ದರು.
ಬಂಡಾಯ ಸಾಹಿತಿ ಡಾ| ಪ್ರಭು ಖಾನಾಪುರೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಪ್ರಕಾಶಕ ಬಸವರಾಜ ಕೊನೇಕ್ ಮಾತನಾಡಿದರು. ವೇದಿಕೆ ಹಾಗೂ ಬಳಗದ ಪದಾಧಿ ಕಾರಿಗಳಾದ ನರಸಪ್ಪ ಬಿರಾದಾರ, ರಾಜಶೇಖರ ಮರಡಿ, ಗಣೇಶ ಪಾಟೀಲ., ಡಾ| ಸೂರ್ಯಕಾಂತ ಪಾಟೀಲ, ಎಚ್ .ಬಿ. ಪಾಟೀಲ ವೇದಿಕೆಯಲ್ಲಿದ್ದರು. ಸಂಜಯ ಪಾಟೀಲ ನಿರೂಪಿಸಿದರು. ಲಕ್ಷ್ಮಿಕಾಂತ ಬೀದಿ ವಂದಿಸಿದರು.