ಗದಗ: ಮಹಿಳೆಯರು ಇನ್ನಷ್ಟು ಆಧುನಿಕತೆಯನ್ನು ಮೈಗೂಡಿಸಿ ಕೊಳ್ಳುವುದರೊಂದಿಗೆ ಪ್ರಗತಿಯ ಹಾದಿಯಲ್ಲಿ ಸಾಗಬೇಕು ಎಂದು ಗದಗ-ಬೆಟಗೇರಿ ಇನ್ನರ್ ವ್ಹೀಲ್ ಮಿಡ್‌ಟೌನ್ ಕ್ಲಬ್ ಅಧ್ಯಕ್ಷೆ ಅನುಪಮಾ ಜೋಳದ ಕರೆ ನೀಡಿದರು. ನಗರದ ಗದುಗಿನ ಮಹೇಶ್ವರಿ ವಿವಿಧೋದ್ದೇಶಗಳ ಮಹಿಳಾ ಮಂಡಳ ಹಾಗೂ ಕೌಶಲ್ಯ ಕರ್ನಾಟಕ ಬೆಂಗಳೂರು ಆಶ್ರಯದಲ್ಲಿ ಮಹಿಳೆಯರಿಗೆ ಏರ್ಪಡಿಸಿರುವ ಸ್ವಯಂ ಉದ್ಯೋಗ ಯೋಜನೆಯಡಿ ನಡೆದ ಬ್ಯೂಟಿಪಾರ್ಲರ್ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಾಧನೆಯ ಹಾದಿಯಲ್ಲಿ ಎದುರಾಗುವ ನೂರಾರು ಎಡರು ತೊಡರುಗಳನ್ನು ಮೆಟ್ಟಿನಿಲ್ಲಬೇಕು. ಆ ಮೂಲಕ ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವ ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಕವಿತಾ ದಂಡಿನ ಮಾತನಾಡಿ, ಮಹಿಳೆಯರಿಗೆ ಹಿಂದಿನ ಕಾಲದಂತೆ ಇಂದು ಕಟ್ಟು ನಿಟ್ಟುಗಳಿಲ್ಲ. ಹೀಗಾಗಿ ಆಧುನಿಕ ಬದುಕಿನ ಶೈಲಿಗೆ ಜನರಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚುತ್ತಿದೆ. ಬ್ಯೂಟಿ ಪಾರ್ಲರ್ ವೃತ್ತಿ ಸ್ವಾವಲಂಬನೆಗೆ ದಾರಿಯಾಗಿದೆ ಎಂದರು.
ಇದನ್ನೂ ಓದಿ:ಕಲಬುರಗಿಯಲ್ಲಿ ಸರ್ಕಾರಿ ಗೋಶಾಲೆಯೇ ಇಲ್ಲ
ನಿತ್ಯಂ ಯೋಗ ಕೇಂದ್ರದ ಅಧ್ಯಕ್ಷೆ ಸುಮಂಗಲಾ ಹದ್ಲಿ ಮಾತನಾಡಿ, ಮಹಿಳೆಯರು ಆರ್ಥಿಕ ಸಬಲರಾಗಲು ಸ್ವಾವಲಂಭನೆ ಅವಶ್ಯವಾಗಿದ್ದು, ಸರಕಾರದ ತರಬೇತಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಹೇಶ್ವರಿ ವಿವಿಧೋದ್ದೇಶಗಳ ಮಹಿಳಾ ಮಂಡಳದ ಅಧ್ಯಕ್ಷೆ ಜಯಶ್ರೀ ಹಿರೇಮಠ ಮಾತನಾಡಿದರು.
ಲಲಿತಾ ಸಂಗನಾಳ, ಮಂಜುಳಾ ಮಲ್ಲಾಪೂರ, ರುಕ್ಸಾನಾ ಬೇಗಂ, ಉಷಾ ನಾಲ್ವಾಡ, ಅರುಣಾ ವಸ್ತ್ರದ, ಪುಷ್ಪಾ ಚೆಂಡೂರ, ಅಕ್ಕಮಹಾದೇವಿ ಹಿರೇಮಠ, ಮಂಜುಳಾ ಮಲ್ಲಾಪೂರ, ಜ್ಯೋತಿ ಪೂಜಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. ವೀಣಾ ಬೈಲಿ ಸ್ವಾಗತಿಸಿ, ಗಿರೀಜಾ ಹಿರೇಮಠ ನಿರೂಪಿಸಿ, ರಶ್ಮಿಕಾ ಹಿರೇಮಠ ವಂದಿಸಿದರು.