ಯಾದಗಿರಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪುರುಷರಷ್ಟೇ ಮಹಿಳೆಯರಿಗೆ ಕೂಲಿ ದೊರೆಯುತ್ತದೆ. ಹಾಗಾಗಿ ಮಹಿಳೆಯರೂ ಕೆಲಸ ಮಾಡಿ ಆರ್ಥಿಕವಾಗಿ ಸಬಲರಾಗಲು ಜಿಪಂ ಸಿಇಒ ಶಿಲ್ಪಾ ಶರ್ಮಾ ಹೇಳಿದರು. ಬಳಿಚಕ್ರ ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಕಾಯಕೋತ್ಸವಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ನರೇಗಾ ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಮಹಿಳಾ ಕಾಯಕೋತ್ಸವಕ್ಕೆ ಚಾಲನೆ ನೀಡಲಾಗುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ ಮಹಿಳೆ ಪಾಲ್ಗೊಳ್ಳುವಿಕೆ ಶೇ.49ರಷ್ಟಿದ್ದು ಪ್ರಮಾಣವನ್ನು ಕನಿಷ್ಟ 60ಕ್ಕೆ ಏರಿಸುವ ಗುರಿಯಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಮೂಲಕ ಕಾಯಕೋತ್ಸವ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಯೋಜನೆಯಡಿ ಕೂಲಿ ಹಣ ನೇರವಾಗಿ ಫಲಾನುಭವಿ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಹಳ್ಳಿಗಳಲ್ಲಿ ದಿನಕ್ಕೆ 275 ರೂ. ಕೂಲಿ ಸಿಗುವುದು ಕಷ್ಟ. ಮಹಿಳಾ ಸಬಲೀಕರಣಕ್ಕಾಗಿ ಅನುಷ್ಠಾನ ಗೊಳಿಸುತ್ತಿರುವ ಕಾರ್ಯಕ್ರಮದ ಉಪಯೋಗ ಜಿಲ್ಲೆಯ ಎಲ್ಲ ಗ್ರಾಮೀಣ ಮಹಿಳೆಯರು ಪಡೆಯಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಮತ್ತು ನರೇಗಾ ನೋಡಲ್ ಅ ಧಿಕಾರಿ ಮುಕ್ಕಣ್ಣ ಕರಿಗಾರ ಪ್ರಾಸ್ತಾವಿಕ ಮಾತನಾಡಿ, ಮಹಿಳಾ ಕಾಯಕೋತ್ಸವದ ಉದ್ದೇಶ ವಿವರಿಸಿದರು. ಜಿಲ್ಲೆಯ 122 ಗ್ರಾಪಂಗಳಲ್ಲಿ 60ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಕೆಲಸಕ್ಕೆ ಬರುತ್ತಿರುವ ಮಹಿಳೆಯರ
ಪ್ರಮಾಣ ಶೇ.50ಕ್ಕಿಂತ ಕಡಿಮೆ ಇದೆ. ಮಹಿಳಾ ಕೂಲಿಕಾರರಲ್ಲಿ ಜಾಗೃತಿ ಮೂಡಿಸಿ, ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುತ್ತದೆ
ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಕಾಯಕೋತ್ಸವದ ಲೋಗೋ ಮತ್ತು ಸಮೀಕ್ಷಾ ನಮೂನೆ ಬಿಡುಗಡೆ ಮಾಡಿ, ಉದ್ಯೋಗ ಚೀಟಿ ವಿತರಿಸಿದರು. ಈ ವೇಳೆ ಯಾದಗಿರಿ ತಾಪಂ ಇಒ ಬಸವರಾಜ, ಗುರುಮಠಕಲ್ ತಾಪಂ ಇಒ ಬಸವರಾಜ ಎಚ್. ಸೇರಿದಂತೆ ಹಲವು ಅಧಿ ಧಿಕಾರಿಗಳು, ಸಿಬ್ಬಂದಿ ಇದ್ದರು.