Advertisement

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

09:29 AM Apr 06, 2020 | Sriram |

“ಕತ್ತಲೆಯ ನಡುವೆ ನರಕಾಸುರ ಸಂಹಾರ ನಡೆದು ಬೆಳಕು ಹರಿಯಿತು. ಕೊರೊನಾಸುರ  ನಿರ್ಮೂಲನೆಯೂ ಹಾಗೆಯೇ ಆಗಬಾರದೇಕೆ?’

Advertisement

ನಾವು ಪ್ರತಿದಿನ ಒಮ್ಮೆಯಾದರೂ ದೀಪ ಹಚ್ಚುತ್ತೇವೆ. ಕತ್ತಲೆಯಿಂದ ಬೆಳಕಿನಡೆಗೆ ನೋಡು ವುದು, ಮಿಡಿಯುವುದು ನಮ್ಮ ಸಂಸ್ಕೃತಿಯ ಹುಟ್ಟುಗುಣ. ತಮಸೋಮಾ ಜ್ಯೋತಿ ರ್ಗಮಯ, ಮೃತ್ಯೋರ್ಮಾ ಅಮೃತಮ್‌ ಗಮಯ ಎಂದು ಪಠಿಸಿದ್ದು ಇದಕ್ಕೇ ಅಲ್ಲವೇ?

ಮನದ ದುಗುಡವನ್ನು ದೂರ ಮಾಡುವುದು ದೀಪದ ಬಹುದೊಡ್ಡ ಸಂಜೀವಿನಿ ಗುಣ. ಎಲ್ಲರೂ ಏಕಕಾಲಕ್ಕೆ ಎಣ್ಣೆ ಯಾ ತುಪ್ಪದ ದೀಪ ಹಚ್ಚುವುದರಿಂದ ಈಗ ಕವಿದಿ ರುವ ಅಂಧ
ಕಾರದಂಥ ಸಂಕಟ ಕರಗಿ ಮನೋ ಸಾಮರ್ಥ್ಯ ಹೆಚ್ಚುತ್ತದೆ. ಋಣಾತ್ಮಕ ಆಲೋಚನೆ ಗಳು ದೂರವಾಗುತ್ತವೆ.

ಜ್ಯೋತಿಷ ಶಾಸ್ತ್ರದ ಪ್ರಕಾರ, ನಾಳೆ ಪ್ರದೋಷ ಸಮಯ. ಪ್ರದೋಷವು ಈಶ್ವರನ ಆರಾಧನೆಗೆ ಬಹಳ ಪ್ರಶಸ್ತ. ಈಶ್ವರ ಸಮಗ್ರ ಜಗತ್ತಿಗೆ ವೈದ್ಯನಿದ್ದಂತೆ. ಮೃತ್ಯುಂಜಯ ಅವನು. ಎಲ್ಲ ರೀತಿಯ ಋಣಾತ್ಮಕ ಶಕ್ತಿಗಳನ್ನು ನಾಶ ಮಾಡುವುದಕ್ಕೆ ಈಶ್ವರನು ಸಮರ್ಥ ಎಂದೂ ವಿಶ್ಲೇಷಿಸಬಹುದು. ದೀಪ ಹಚ್ಚಿ ಎಲ್ಲರೂ ಏಕಾಗ್ರ ಚಿತ್ತದಿಂದ, ಏಕಕಂಠದಿಂದ ಪ್ರಾರ್ಥಿಸಿದರೆ, ಅಲ್ಲೊಂದು ಸಂಘಶಕ್ತಿ ಪ್ರಕಟಗೊಳ್ಳುತ್ತದೆ.

ದೀಪವಿಲ್ಲದೆ ನಮ್ಮ ಯಾವುದೇ ಧಾರ್ಮಿಕ ಕಾರ್ಯಕ್ರಮಗಳೂ ಆರಂಭಗೊಳ್ಳುವುದಿಲ್ಲ. ಮದುವೆ- ಮುಂಜಿ, ಯಜ್ಞ- ಯಾಗ, ನಾಮಕರಣ- ಶ್ರಾದ್ಧಗಳು ದೀಪಗಳಿಲ್ಲದೆ ನಡೆ ಯುವುದಿಲ್ಲ. ಪ್ರಥಮ ಪೂಜಿತ ಗಣಪತಿಯನ್ನು ಅರ್ಚಿಸುವ ಮೊದಲು ಕೂಡ ನಾವು ದೀಪ ಹಚ್ಚುತ್ತೇವೆ.
ದೀಪಾವಳಿ ಪ್ರಾಮುಖ್ಯ ಪಡೆ ಯುವುದು ಹಣತೆಗಳಿಂದ. ನರಕಾಸುರನ ವಧೆ ನಡೆದದ್ದು ಕತ್ತಲೆಯ ಸಮಯದಲ್ಲಿ. ಆ ವಿಜಯದ ಸಂಕೇತವಾಗಿ ನಾವು ಭೂದೇವಿಯನ್ನು ಬೆಳಗುವುದು ದೀಪಗಳಿಂದ.

Advertisement

ಈಗಲೂ ದೀಪಾವಳಿಯಲ್ಲಿ ದೀಪ ಹಚ್ಚಿ, ದುಷ್ಟ ಶಕ್ತಿಗಳು ಬಳಿ ಬಾರದೆ ಇರಲಿ ಎಂದು ಪ್ರಾರ್ಥಿಸುತ್ತೇವೆ. ಈಗ ಕೊರೊನಾಸುರನನ್ನೂ ಕತ್ತಲೆ ವೇಳೆಯೇ ನಿವಾರಿಸಬೇಕಿದೆ.
ಹಿಂದೆ ರಾಜರು ಕೋಟೆಗಳ ಸುತ್ತಮುತ್ತಲೂ ಸಾಮೂಹಿಕ ದೀಪ ಹಚ್ಚುವ ವ್ಯವಸ್ಥೆ ಮಾಡಿಕೊಂಡಿದ್ದರು. ಏಕಕಾಲಕ್ಕೆ 108, 1008, 10008, ಲಕ್ಷ ದೀಪಗಳನ್ನು ಹಚ್ಚುವ ಕ್ರಮವಿತ್ತು. ಈಗಿರುವ ಲಕ್ಷ ದೀಪೋತ್ಸವದ ಕಲ್ಪನೆ ನಾವು ಪೂರ್ವಜರಿಂದಲೇ ಎರವಲು ಪಡೆದದ್ದು.
ಸಾಮೂಹಿಕ ದೀಪ ಹಚ್ಚುವುದರಿಂದ ನಾನು ಒಂಟಿಯಲ್ಲ ಅಂತ ಅನ್ನಿಸುತ್ತದೆ. ಮನಸ್ಸು ಸವಾಲನ್ನು ಎದುರಿಸುವ ಸಾಮರ್ಥ್ಯ ಪಡೆಯು ತ್ತದೆ. ಇದಕ್ಕಾಗಿ ನಾವು ದೀಪಗಳನ್ನು ಬೆಳಗಬೇಕು.

-ದೈವಜ್ಞ ಸೋಮಯಾಜಿ

ಜ್ಯೋತಿಷ ತಜ್ಞರು

Advertisement

Udayavani is now on Telegram. Click here to join our channel and stay updated with the latest news.

Next