ಗುರುಮಠಕಲ್: ಯಾವುದೇ ಪಕ್ಷದವರಿದ್ದರೂ ಸರಿ ಚುನಾವಣೆಯಲ್ಲಿ ಮಾತ್ರ ನಾವು ಪಕ್ಷ ರಾಜಕೀಯ ಮಾಡಬೇಕು. ಆನಂತರದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಈ ಭಾಗದ ಜನರಿಗೆ ಸರಿಯಾಗಿ ಸೇವೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲರೂ ಒಗ್ಗೂಡಿ ಅಭಿವೃದ್ಧಿ ಕೆಲಸಗಳನ್ನು ಮಾಡೋಣ ಎಂದು ಶಾಸಕ ನಾಗನಗೌಡ ಕಂದಕುರ ಹೇಳಿದರು.
ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಶುಕ್ರವಾರ 6 ಹೆಚ್ಚುವರಿ ಶಾಲಾ ಕೊಠಡಿ ಹಾಗೂ ಶೌಚಾಲಯ ಉದ್ಘಾಟನೆ, ಕ್ರೀಡಾಂಗಣದಲ್ಲಿನ ಬಾಸ್ಕೆಟ್ ಬಾಲ್ ಮೈದಾನ ಹಾಗೂ ಕಸ ವಿಂಗಡಣೆ ಪ್ಲಾಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಂಕಲ್ ಗ್ರಾಮದ ಜನರ ಬೇಡಿಕೆಗಳಂತೆ ಆದ್ಯತೆಯ ಮೇಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ 24.14 ಕೋಟಿ ರೂ. ಗಳ ಅನುದಾನವನ್ನು ಗ್ರಾಮಕ್ಕೆ ಹಂಚಿಕೆ ಮಾಡಿರುವುದಾಗಿ ಅವರು ತಿಳಿಸಿದರು.
ಕೊಂಕಲ ಗ್ರಾಮವೆಂದರೆ ಮೊದಲಿನಿಂದಲೂ ನಮ್ಮ ಕುಟುಂಬಕ್ಕೆ ತುಂಬಾ ಆಪ್ತವಾದ ಗ್ರಾಮವಾಗಿದೆ. ನನಗೆ ಇಲ್ಲಿ ತುಂಬಾ ಪ್ರೀತಿಯಿಂದ ಕಂಡು ಬೆಂಬಲಿಸಿದ್ದಾರೆ ಮತ್ತು ಆಶೀರ್ವದಿಸಿದ್ದಾರೆ ಎಂದರು.
ಇದನ್ನೂ ಓದಿ: ಹೆಣ್ಣು ದೇಶದ ಆಸ್ತಿಯಾಗಲಿ: ಬೀಳಗಿ
ತಹಶೀಲ್ದಾರ್ ಶರಣಬಸವ, ಗ್ರಾಪಂ ಅಧ್ಯಕ್ಷೆ ಮಹಾದೇವಮ್ಮ ಬೇಗಾರ, ಉಪಾಧ್ಯಕ್ಷೆ ಶಾರದಮ್ಮ ಕಾಕಲವಾರ, ತಾಪಂ ಇಒ ಬಸವರಾಜ ಶರಭೆ„, ಎಡಿ ರಾಮಚಂದ್ರ ಬಸೂದೆ, ಪಿಡಿಒ ರಾ ಕಾರೆಡ್ಡಿ, ಕಾರ್ಯದರ್ಶಿ ಖಾಸೀಂ ಅಲಿ, ಮುಖ್ಯಶಿಕ್ಷಕ ಅಶೋಕ ಕೆಂಬಾವಿ, ಕಿಷ್ಟರೆಡ್ಡಿ, ಜೆಇ, ರಾಮುಲು ಗೌಡ್, ಪರಶುರಾಮ, ಪಿಐ ಖಾಜಾಹುಸೇನ, ಡಿಇಒ ಪ್ರಕಾಶ, ಎಸಿxಎಂ ಸಮಾಲೋಚಕ ನಾರಾಯಣ ಸಿರ, ಜ್ಞಾನೇಶ್ವರಡ್ಡಿ ಇದ್ದರು