Advertisement

ಮದರೆಂಗಿದ ರಂಗ್‌ “ತುಳುನಾಡ ಸಂಸ್ಕೃತಿಯ ಬಾಂಧವ್ಯ ವಿಸ್ತರಿಸೋಣ’

09:14 PM Jul 13, 2019 | sudhir |

ಉಡುಪಿ: ತುಳುನಾಡಿನಲ್ಲಿರುವಂತಹ ಸಂಸ್ಕೃತಿ ದೇಶದಲ್ಲಿ ಯಾವ ಕಡೆಯೂ ಸಿಗಲು ಸಾಧ್ಯವಿಲ್ಲ. ಇದು ಅವನತಿಯತ್ತ ಸಾಗುತ್ತಿರುವುದು ಖೇದನೀಯ. ಹಿಂದಿನ ಸಂಸ್ಕೃತಿ ಮತ್ತು ಈಗಿನ ಸಂಸ್ಕೃತಿಗೆ ಬಹಳಷ್ಟು ವ್ಯತ್ಯಾಸಗಳಿವೆ. ನಮ್ಮ ಸಂಸ್ಕೃತಿಯನ್ನು ಉಳಿಸಿ ಆ ಮೂಲಕ ತುಳುನಾಡಿನ ಬಾಂಧವ್ಯವನ್ನು ವಿಸ್ತರಿಸಬೇಕು ಎಂದು ಕಟಪಾಡಿಯ ನಿವೃತ್ತ ಸೈನಿಕ ಶಿಕ್ಷಕಿ ತುಳಸಿ ದೇವಾಡಿಗ ಹೇಳಿದರು.

Advertisement

ತುಳುಕೂಟ ಉಡುಪಿಯ ಆಶ್ರಯದಲ್ಲಿ ಅಮ್ಮಣ್ಣಿ ರಾಮಣ್ಣಿ ಶೆಟ್ಟಿ ಸಭಾಭವನದಲ್ಲಿ ಶನಿವಾರ ನಡೆದ “ಮದರೆಂಗಿದ ರಂಗ್‌’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನುಭವಗಳನ್ನು ಹಂಚಿಕೊಳ್ಳಿ
ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಾನೆಟ್‌ ಬಬೋìಜಾ ಮಾತನಾಡಿ, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತುಳುಕೂಟ ಯಶಸ್ಸು ಕಂಡಿದೆ. ಪ್ರಕೃತಿಯ ಪ್ರತಿಯೊಂದು ಅನುಭವಗಳನ್ನು ಪಡೆದುಕೊಂಡು ಅದನ್ನು ಮಕ್ಕಳೊಂದಿಗೆ ಹಂಚಿಕೊಳ್ಳಬೇಕು ಎಂದರು.
ಪತ್ರಕರ್ತೆ ಕುಲ್‌ಸೂಮ್‌ ಅಬೂಬಕ್ಕರ್‌, ಪತ್ರಕರ್ತ ಶ್ರೀಕಾಂತ ಶೆಟ್ಟಿ ಮಾತನಾಡಿದರು.

ಸಮ್ಮಾನ
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹರೀಶ್‌ ಭಟ್‌, ತನುಲಾ, ರಮ್ಯಾ ಕೆ.ಐತಾಳ್‌ ಅವರನ್ನು ಸಮ್ಮಾನಿಸಲಾಯಿತು.
ತುಳುಕೂಟ ಉಡುಪಿಯ ಅಧ್ಯಕ್ಷ ವಿ.ಜಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ದ.ಕ., ಉಡುಪಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಪತ್ರಕರ್ತ ಎಸ್‌.ಆರ್‌.ಬಂಡಿಮಾರ್‌, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌, ತುಳುಕೂಟದ ಗೌರವ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.

ಸಂಚಾಲಕರಾದ ಜ್ಯೋತಿ ಎಸ್‌.ದೇವಾಡಿಗ ಸ್ವಾಗತಿಸಿ, ಯಶೋದಾ ಕೇಶವ್‌ ಕಾರ್ಯಕ್ರಮ ನಿರೂಪಿಸಿದರು.

Advertisement

ಮದರೆಂಗಿ ರಂಗು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ| ವೈ.ಎನ್‌.ಶೆಟ್ಟಿ ಮಾತನಾಡಿ, ಮದರೆಂಗಿಗೆ ಔಷಧೀಯ ಗುಣವಿದೆ. ಇದು ಭಯ, ಆತಂಕ, ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ. ಇದನ್ನು ಔಷಧವಾಗಿಯೂ ಸೇವನೆ ಮಾಡುತ್ತಾರೆ. ಮುಂದಿನ ಜನಾಂಗಕ್ಕೆ ಈ ಬಗ್ಗೆ ಮನವರಿಕೆ ಮಾಡಬೇಕು. ಮದರಂಗಿಯ ಉದ್ದೇಶವೂ ಮದರಂಗಿಯಂತೆಯೇ ರಂಗು ನೀಡುವುದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next