Advertisement

ದೇಶಕ್ಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸೋಣ

02:14 PM Oct 22, 2021 | Dinesh M |

ಮಂಡ್ಯ: ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಟ ಮಾಡಿ ದೇಶಕ್ಕಾಗಿ ಪ್ರಾಣತೆತ್ತ ವೀರರನ್ನು ನಾವು ಸ್ಮರಿಸೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಹೇಳಿದರು.

Advertisement

ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಡೆದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, 1959ರ ಅ.21ರಂದು ಚೀನಾ-ಭಾರತ ಗಡಿ ಭಾಗದ ಹಾಟ್‌ ಸ್ಟ್ರೀಗ್‌ ಪೋಸ್ಟ್‌ ಹತ್ತಿರ ಸಿಆರ್‌ ಪಿಎಫ್‌ ಡಿಎಸ್‌ಪಿ ಕರಣಸಿಂಗ್‌ ನೇತೃತ್ವದಲ್ಲಿ ಪೊಲೀಸ್‌ ದಳವು ಪಹರೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಚೀನಾ ಸೈನಿಕರಿಂದ ಏಕಾಏಕಿ ದಾಳಿ ನಡೆಸಿದ ಪರಿಣಾಮ ಪ್ರಾಣ ತೆತ್ತ 10 ಭಾರತೀಯ ಪೊಲೀಸ್‌ ಯೋಧರ ಬಲಿದಾನದ ಸ್ಮರಣೆ ಪ್ರತೀಕವಾಗಿ ಪ್ರತಿ ವರ್ಷ ಅ.21ರಂದು ಪೊಲೀಸ್‌ ಹುತಾತ್ಮರ ದಿನ ಆಚರಿಸಲಾಗುತ್ತದೆ. ಇದೊಂದು ದುಃಖದ ಸಂಗತಿ ಎಂದು ತಿಳಿಸಿದರು.

ಇದನ್ನೂ ಓದಿ:- ಗೋಡೆ ನಾರಾಯಣ ಹೆಗಡೆಯವರಿಗೆ ಒಲಿದ  ಅನಂತ ಶ್ರೀ ಪ್ರಶಸ್ತಿ

ನಮ್ಮಲ್ಲಿ ಪೊಲೀಸ್‌ ದಳಕ್ಕೆ ಹೆಚ್ಚಿನ ಭದ್ರತೆಯುಳ್ಳ ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡಬೇಕಾಗಿದೆ. ಆ ದುರ್ಘ‌ಟನೆ ನಡೆದ ದಿನ ಎದುರಾಳಿ ಸೈನಿಕರ ಬಳಿ ಇದ್ದಂತಹ ಪ್ರಬಲವಾದ ಶಸ್ತ್ರಾಸ್ತ್ರಗಳು ನಮ್ಮ ಪೊಲೀಸರ ಬಳಿ ಇರಲಿಲ್ಲ. ದೇಶ ಮುಖ್ಯ ದೇಶಪ್ರೇಮ ಮುಖ್ಯ ದೇಶ ಚೆನ್ನಾಗಿದ್ದರೆ ಮಾತ್ರ ನಾವು ಚೆನ್ನಾಗಿರಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. ಜಿಲ್ಲಾ ಆರಕ್ಷಕ ಅಧೀಕ್ಷಕಿ ಎಂ.ಅಶ್ವಿ‌ನಿ, ಜಿಲ್ಲಾ ಅಪರ ಆರಕ್ಷಕ ಅಧೀಕ್ಷಕ ವಿ.ಧನಂಜಯ ಸೇರಿದಂತೆ ಮತ್ತಿತರರಿದ್ದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next