ಆತನೊಬ್ಬನಿದ್ದ… ಜಗಳಗಂಟ, ಸ್ವಾರ್ಥಿ, ಯಾರನ್ನೂ ಹತ್ತಿರವೂ ಸೇರಿಸಿಕೊಳ್ಳಲ್ಲ ಎನ್ನುವ ಮನಃಸ್ಥಿತಿಯವನು ಎಂದು ಆತನ ಓರಗೆಯವರೇ ಆತನ ಬಗ್ಗೆ ದೂಷಣೆ ಮಾಡುತ್ತಿದ್ದರು. ಹೌದು ಆತ ಇದ್ದಿದ್ದೂ ಹಾಗೇನೇ. ಯಾರನ್ನೂ ನಂಬ್ತಾ ಇರಲಿಲ್ಲ. ಎಲ್ಲವೂ ತನ್ನ ಪರವಾಗಿರಬೇಕೆಂದು ಬಯಸ್ತಾ ಇದ್ದ. ಹಾಗಂತ ಅದೇ ಆತನ ಬಲಹೀನತೆ ಎಂದು ತಿಳಿದುಕೊಂಡರೆ ತಪ್ಪಾಗುತ್ತದೆ. ಎಲ್ಲ ಬಲಹೀನತೆಯನ್ನೂ ಮೀರಬಲ್ಲಷ್ಟು ಆತ ಇತರರಿಗಿಂತ ಸಾಮರ್ಥ್ಯವಂತನಾಗಿದ್ದ, ಎದುರಾಳಿ ಯಾರೇ ಇರಲಿ ಯಾವುದೇ ತಂಡವಾಗಿರಲಿ ಪಂದ್ಯಗಳನ್ನು ಲೀಲಾಜಾಲವಾಗಿ ಗೆದ್ದು ಬೀಗುತ್ತಿದ್ದ. ಆದರೂ ಹಠ, ಕೋಪ, ಒರಟುತನ ಕಮ್ಮಿಯಾಗಲಿಲ್ಲ.
ತಾನೇ ಬ್ಯಾಟಿಂಗ್, ಬೌಲಿಂಗೂ ನಾನೇ…
ಆತನನ್ನು ತಂಡಕ್ಕೆ ಸೇರಿಸಲು ಆತನ ಸಹವರ್ತಿಗಳಾರೂ ಬಯಸುತ್ತಿರಲಿಲ್ಲ. ಕ್ರಿಕೆಟ್ ಆಡುವುದಾದರೆ ಆತನೇ ಮೊದಲು ಬ್ಯಾಟಿಂಗ್. ಔಟ್ ಆದರೆ ಮಾತ್ರ ಇತರರಿಗೆ. ಹಾಗೆಯೇ ಬೌಲಿಂಗ್ ಕೂಡ. ಅವನಿಗೆ ಸುಸ್ತಾಗಿ ಇನ್ನು ಕೂಡಲ್ಲ ಅನಿಸಿದಾಗ ಮತ್ತೂಬ್ಬರಿಗೆ ಬೌಲಿಂಗ್. ಆತನಲ್ಲಿ ಸಾಮರ್ಥ್ಯವಿತ್ತು. ಎದುರಾಳಿ ಇಡೀ ತಂಡ ಹೊಡೆದ ರನ್ನನ್ನು ಎಷ್ಟೋ ಸಲ ಒಬ್ಬನೇ ಹೊಡೆದು ಬಿಡುತ್ತಿದ್ದ. ಆದರೆ ಗೆದ್ದರೂ ಈತನ ತಂಡದ ಸದಸ್ಯರಿಗೆ ಖುಷಿ ಆಗ್ತನೇ ಇರಲಿಲ್ಲ. ಯಾಕೆಂದರೆ ಗೆಲುವು ತಮ್ಮದಲ್ಲ…ಆತನದು ಎಂಬ ಅರಿವು ಅವರಿಗೂ ಇತ್ತು. ಈ ರೀತಿಯಾಗಿ 10ರಲ್ಲಿ 6 ಪಂದ್ಯವಾದರೂ ಜಯಿಸಿ ಬಿಡುತ್ತಿದ್ದ. ಇವನೂ ಜಾಸ್ತಿ ಖುಷಿ ಪಡುವಂತಿಲ್ಲ. 10ರಲ್ಲಿ ನಾಲ್ಕು ಸೋಲೂ ಈತನಿಗೆ ತುಂಬಾ ಹಿಂಸೆ ನೀಡುತ್ತಿತ್ತು.
ತಂಡ ಕಟ್ಟಿದ, ಗೆದ್ದ…
ಉತ್ತಮ ತಂಡ, ಉನ್ನತ ನಡವಳಿಕೆಗಳಿಂದ ಎಲ್ಲ ಪಂದ್ಯಗಳನ್ನೂ,ಜನರನ್ನೂ ಗೆಲ್ಲಬಹುದೆಂಬ ಅರಿವು ಆತನಲ್ಲಿ ನಿಚ್ಚಳವಾಯಿತು. ಅಂದಿನಿಂದಲೇ ತಂಡ ಕಟ್ಟಲು ಶುರು ಮಾಡಿದ. ಉನ್ನತ ಕೆಲಸಗಾರರಿಂದ ವಿಗ್ ತಯಾರಿಸಿದ. ಉತ್ತಮ ಮಾರ್ಕೆಟಿಂಗ್ ತಂತ್ರ ಅರಿತವನಿಗೆ ಮಾರಾಟ ಜವಾಬ್ದಾರಿ ಕೊಟ್ಟ. ತಾನು ಬೆರೆತು ಎಲ್ಲರನ್ನೂ ಹುರಿದುಂಬಿಸಿದ. ಈಗ ಎಲ್ಲರಿಗೂ ತಮ್ಮ ಬಾಸ್, ಕಂಪೆನಿ ಬಗ್ಗೆ ಗೌರವ ನೂರ್ಮಡಿಯಾಯಿತು. ಇಷ್ಟ ಪಟ್ಟು ಕೆಲಸ ಮಾಡಿದರು. ಕಂಪೆನಿ ದಿನೇ ದಿನೇ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋಗಿ ವಿಗ್ ಮಾರಾಟದಲ್ಲಿ ಖ್ಯಾತಿಯನ್ನು ಗಳಿಸಿತು.
ವರ್ಕೌಟ್ ಆಗಲಿಲ್ಲ
ವಿದ್ಯಾಭ್ಯಾಸ ಮುಗಿದ ಬಳಿಕ ಜೀವನಕ್ಕಾಗಿ ವಿಗ್ ತಯಾರಿಸುವ ಕಂಪೆನಿ ಆರಂಭಿಸಿದ. ಒಬ್ಬನೇ ದುಡಿದ, ಸಾಲಸೋಲ ಮಾಡಿ ಕೈಯಿಂದ ತಯಾರಿಸುತ್ತಿದ್ದ ವಿಗ್‌ಗಳನ್ನು ಯಂತ್ರದ ಮೂಲಕ ತಯಾರಿಸಲು ಆರಂಭಿಸಿದ. ಎಲ್ಲ ವಿಭಾಗಗಳಲ್ಲೂ ತಾನಿಲ್ಲದಿದ್ದರೆ ಕಾರ್ಯ ಸಾಗುವುದಿಲ್ಲ ಎಂಬ ಆಹಂಗೆ ಕಂಪೆನಿಗೆ ಹಾಕಿದ ಹಣವೆಲ್ಲ ನೀರು ಪಾಲಾಯಿತು. ಒಬ್ಬ ನಿಂದಲೇ ಮಾರುಕಟ್ಟೆ ಆಳಲು ಸಾಧ್ಯವಿಲ್ಲ. ಅದಕ್ಕೊಂದು ಸರ್ವಸಜ್ಜಿತ ತಂಡ ಬೇಕೆಂಬ ಅರಿವು ಅವನಿಗಾಗಿತ್ತು.
– ಹಿರಣ್ಮಯಿ