Advertisement

ಸಾಮುದಾಯಿಕ ಹರಡುವಿಕೆ ತಡೆಯುವ ಸಂಕಲ್ಪ ನಮ್ಮದಾಗಲಿ

02:11 AM Mar 28, 2020 | Sriram |

ಮಂಗಳೂರು: ಈವರೆಗೆ ಪ್ರಾಥಮಿಕ, ದ್ವಿತೀಯ ಹಂತದಲ್ಲಿದ್ದ ಕೋವಿಡ್‌ 19 ಸೋಂಕಿನ ಭೀತಿ ಇದೀಗ ಸಾಮುದಾಯಿಕ ಹರಡುವಿಕೆಯ ಆತಂಕ ಆರಂವಾಗಿದೆ. ಸಾಮುದಾಯಿಕ ಹರಡುವಿಕೆಯ ನಿಯಂತ್ರಣಕ್ಕೆ ಸಾರ್ವಜನಿಕರೇ ಸಂಕಲ್ಪ ತೊಡಬೇಕಾಗಿದೆ. ನಾವೇ ಲಕ್ಷಣ ರೇಖೆ ಎಳೆದುಕೊಳ್ಳುವ ಮೂಲಕ ಮುಂದಿನ ಮೂರು ವಾರ ಕಾಲ ಮನೆಯಲ್ಲೇ ಇದ್ದು ಸಾಮುದಾಯಿಕ ಹರಡುವಿಕೆಯನ್ನು ತಡೆಯಬೇಕಾಗಿದೆ. ಈ ಸಂದರ್ಭದಲ್ಲಿ ಒಂದಷ್ಟು ಮಾಹಿತಿ ಇಲ್ಲಿದೆ.

Advertisement

ಏನಿದು ಸಾಮುದಾಯಿಕ ಹರಡುವಿಕೆ?
ಸಾಮುದಾಯಿಕ ಹರಡುವಿಕೆ ಅಂದರೆ ಒಬ್ಬ ಮನುಷ್ಯನಿಂದ ಇನ್ನೊಬ್ಬನಿಗೆ ಸ್ವಲ್ಪ ಸಂಪರ್ಕ ದಲ್ಲಿ ಅತಿ ಬೇಗನೆ ಹರಡುವುದು. ಇಲ್ಲಿ ಯಾರಿಂದ ಹರಡಿದೆ ಎಂಬುದೇ ತಿಳಿ ಯುವುದಿಲ್ಲ.

ಕೋವಿಡ್‌ 19 ಉಸಿರಾಟದ ಹನಿಗಳಿಂದ ಬರುತ್ತದೆ. ಒಂದು ಮೀಟರ್‌ ಒಳಗೆ ಸೋಂಕಿತ ನೊಂದಿಗೆ ಸಂಪರ್ಕ ಸಾಧಿಸಿದರೆ ಹರಡುತ್ತದೆ. ಅದಕ್ಕಿಂತ ದೂರದಲ್ಲಿದ್ದರೆ ಹನಿಗಳು ನೆಲಕ್ಕೆ ಬಿದ್ದು ಹೋಗುತ್ತದೆ.

ಕೋವಿಡ್‌ 19 ಪೀಡಿತ ವ್ಯಕ್ತಿಯೊಂದಿಗೆ ಒಂದು ಮೀಟರ್‌ ಅಂತರದೊಳಗೆ ಮಾತನಾಡಿದಲ್ಲಿ, ಸೀನು, ಕೆಮ್ಮು, ಕೈ ಕುಲುಕುವಿಕೆ ಆದಲ್ಲಿ 3-8 ದಿನಗಳೊಳಗೆ ಸೋಂಕು ತಗಲಿರುವುದು ಗೊತ್ತಾಗುತ್ತದೆ. 14 ದಿನದೊಳಗೆ ಸಂಪೂರ್ಣ ದೃಢವಾಗುತ್ತದೆ.

ಮುನ್ನೆಚ್ಚರಿಕೆ ಇರಲಿ
ಹೊರಗಡೆ ಹೋಗುವಾಗ ಕಣ್ಣು, ಮೂಗು, ಬಾಯಿ, ಮುಖ ಮುಟ್ಟಿಕೊಳ್ಳಬಾರದು. ಮುಟ್ಟಿದರೆ ತತ್‌ಕ್ಷಣ ತೊಳೆದುಕೊಳ್ಳಬೇಕು.

Advertisement

ಎ. 14ರ ವರೆಗೂ ಮನೆಯಲ್ಲೇ ಉಳಿಯವುದು ವಾಸಿ. ತುರ್ತು ಸಂದರ್ಭ ಇದ್ದಲ್ಲಿ ಮಾತ್ರ ಹೊರ ಹೋಗಿ.

ದಿನಸಿ ಸಾಮಾನುಗಳನ್ನು ಮನೆಗೆ ತಂದ ಮೇಲೆ ಪ್ಲಾಸ್ಟಿಕ್‌ನ್ನು ಸರಿಯಾಗಿ ತೊಳೆದು, ಕೈಯನ್ನೂ ತೊಳೆದುಕೊಳ್ಳಬೇಕು. ಮುಖ ಮುಟ್ಟಬಾರದು.

ಹೊರಗಡೆ ಹೋದಾಗ ಪರಿಚಿತರು ಸಿಕ್ಕಿದ್ದಲ್ಲಿ ಒಂದು ಮೀಟರ್‌ ದೂರ ನಿಂತು ಮಾತನಾಡಬೇಕು.

ಸಾಮಾನು ಖರೀದಿ ವೇಳೆ ಅಂಗಡಿಗೆ ಮುತ್ತಿಗೆ ಹಾಕದೇ ಅಂತರ ಕಾಯ್ದುಕೊಳ್ಳಬೇಕು.

ಪೋಸ್ಟ್‌, ಗ್ಯಾಸ್‌ ಸಿಲಿಂಡರ್‌ ಮನೆಗೆ ಬಂದ ತತ್‌ಕ್ಷಣ ಮುಟ್ಟಿದ್ದಲ್ಲಿ ಕೈ ತೊಳೆದುಕೊಳ್ಳಬೇಕು. ಯಾರು ಅದನ್ನು ಮುಟ್ಟಿರುತ್ತಾರೆ ಎಂಬುದು ಗೊತ್ತಾಗುವುದಿಲ್ಲ.

ಪ್ಲಾಸ್ಟಿಕ್‌, ಮೆಟಲ್‌, ಮರದ ಪೀಠೊಪಕರಣಗಳ ಮೇಲೆ ಕೋವಿಡ್‌ 19 ವೈರಸ್‌ 4-5 ದಿನಗಳ ಕಾಲ ಉಳಿಯುತ್ತದೆ. ಇವುಗಳನ್ನು ಮುಟ್ಟಿದ ತತ್‌ಕ್ಷಣ ಸೋಪಿನಿಂದ ಕೈ ತೊಳೆದುಕೊಳ್ಳಬೇಕು. ಈ ವೈರಾಣು ಸೋಪಿನಿಂದ ಸಾಯುತ್ತದೆ.

ನಾವು ಬೇರೆಯವರ ಮನೆಗೆ ಹೋಗಬಾರದು, ಬೇರೆಯವರು ನಮ್ಮ ಮನೆಗೆ ಬರಬಾರದು.

ಗಾಳಿಯಿಂದ ಕೋವಿಡ್‌-19 ಹರಡುವುದಿಲ್ಲ. 1 ಮೀ. ದೂರದಾಚೆಗೆ ಈ ವೈರಾಣು ಹೋಗದಿರುವುದರಿಂದ ಅಲ್ಲೇ ಬಿದ್ದು ಹೋಗುತ್ತದೆ. ಆದರೆ, ವೈದ್ಯರು ಮತ್ತು ನರ್ಸ್‌ಗಳು ಹತ್ತಿರದಿಂದ ಚಿಕಿತ್ಸೆ ನೀಡುವುದರಿಂದ ಬರುವ ಸಾಧ್ಯತೆ ಇದೆ.

ಕೋವಿಡ್‌-19 ಗಾಳಿಯಲ್ಲಿ ಹರಡುವುದಿಲ್ಲ. ಒಂದು ಮೀಟರ್‌ ಅಂತರದೊಳಗೆ ಉಸಿರಾಟದ ಹನಿಗಳಿಂದ ಹರಡುವುದರಿಂದ ಜನರು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಸೋಪ್‌ನಿಂದ ಈ ವೈರಾಣು ಸಾಯುತ್ತದೆ. ಹಾಗಾಗಿ ಆಗಾಗ ಕೈ ತೊಳೆಯುವುದನ್ನು ರೂಢಿಸಿಕೊಳ್ಳಬೇಕು.
– ಡಾ| ಸುಚಿತ್ರಾ ಶೆಣೈ ಎಂ.
ಸಹಾಯಕ ಪ್ರಾಧ್ಯಾಪಕಿ ಮೈಕ್ರೋಬಯಾಲಜಿ, ಕೆಎಂಸಿ ಮಂಗಳೂರು

ಮಾಸ್ಕ್ ಒಮ್ಮೆ ಮಾತ್ರ ಬಳಸಿ
ಮಾಸ್ಕನ್ನು ಒಂದು ಬಾರಿ ಬಳಕೆ ಮಾಡಿದ ನಂತರ ಎಸೆಯಿರಿ. ಮರು ಬಳಕೆಗೆ ನಿಷ್ಪ್ರಯೋಜಕ

ಮಾಸ್ಕ್ಗೆ ಮೂರು ಪದರ ಇರುತ್ತದೆ. ಫಿಲ್ಟರ್‌ ಪದರ ಬ್ಲಾಕ್‌ ಆದರೆ, ಉಸಿರಾಡುವುದು ಕಷ್ಟವಾಗುವುದರೊಂದಿಗೆ ಪ್ರಯೋಜನವೂ ಆಗುವುದಿಲ್ಲ.

ಸದ್ಯ ಸಾಮುದಾಯಿಕ ಹರಡುವಿಕೆ ಅಷ್ಟಾಗಿ ಇಲ್ಲದ ಕಾರಣ ಮಾಸ್ಕ್ ಬಳಕೆ ಅಪ್ರಸ್ತುತ. ಹೊರಗೆ ಹೋಗುವಾಗ ಹಾಕಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next