Advertisement

ನಾವೆಲ್ಲರೂ ಭಾರತೀಯರಾಗಿ ಬದುಕೋಣ: ಕಾರ್ಯಪ್ಪ

02:04 AM Jan 30, 2020 | Sriram |

ಮಡಿಕೇರಿ: ಜಾತಿ, ಧರ್ಮ, ಪಂಗಡಗಳಿಗಿಂತ ನಾವೆಲ್ಲರೂ ಭಾರತೀಯರಾಗಿ ಬದುಕಬೇಕು ಎಂದು ಏರ್‌ ಮಾರ್ಷಲ್‌(ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಕರೆ ನೀಡಿದ್ದಾರೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಜಿಲ್ಲಾಡಳಿತ ಹಾಗೂ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ, ಜನರಲ್‌ ತಿಮ್ಮಯ್ಯ ಫೋರಂ ಸಹಕಾರದಲ್ಲಿ ನಗರದ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ವೃತ್ತದಲ್ಲಿ ಮಂಗಳವಾರ ನಡೆದ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅವರ 121 ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಪ್ಪ ಅವರ ಆದರ್ಶ ಗುಣಗಳುನ್ನು ತಿಳಿದು ಕೊಳ್ಳುವಂತಾಗಬೇಕು. ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವಂತಾ ಗಬೇಕು ಎಂದು ಶಾಸಕರು ಹೇಳಿದರು. ಜಿಲ್ಲಾ$Éಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಮಾತನಾಡಿದರು. ಜಿಲ್ಲಾಧಿಕಾರಿಯಾಗಿ ಕಾರ್ಯಪ್ಪನವರ ಊರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಮತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದಕ್ಕೆ ಹೆಮ್ಮೆ ಇದೆ ಎಂದರು.

ಕೊಡವ ಸಾಹಿತ್ಯ ಅಕಾಡಮಿಯ ಅಧ್ಯಕ್ಷ‌ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಸ್ವಾಗತಿಸಿದರು. ರಿಜಿಸ್ಟ್ರಾರ್‌ ಎ.ಸಿ.ಗಿರೀಶ್‌ ವಂದಿಸಿದರು.

ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಪ್ರಬಂಧ ಸ್ಪರ್ಧೆಯಲ್ಲಿ ಕಳತ್‌ಮಾಡು ಲಯನ್ಸ್‌ ಪ್ರೌಢ ಶಾಲೆಯ ಕಾಂಚನ್‌ ಕಮಲಾಕ್ಷಿ ಸಿ.ಕೆ.(ಪ್ರಥಮ), ನಾಪೋಕ್ಲು ಶ್ರೀ ರಾಮಟ್ರಸ್ಟ್‌ ಆಂಗ್ಲ ಮಾದ್ಯಮ ಶಾಲೆಯ ದೀಪ್ನ ದೇವಯ್ಯ ಎ.(ದ್ವಿತೀಯ), ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆಯ ಕೃತಿಕ ಬಿಕ್‌.(ತೃತೀಯ) ಸ್ಥಾನ ಪಡೆದುಕೊಂಡರು.

Advertisement

ಸಮಾದಾನಕರ ಬಹುಮಾನವನ್ನು ವಿರಾಜಪೇಟೆ ಸಂತ ಅನ್ನಮ ಶಾಲೆಯ ರೋಶನ ಜಿ.ಸಿ, ಕಳತ್‌ಮಾಡು ಲಯನ್ಸ್‌ ಪ್ರೌಢ ಶಾಲೆಯ ಪೊನ್ನಮ್ಮ ಕೆ.ಎಂ, ಮೂರ್ನಾಡು ಜನನ ಜ್ಯೋತಿ ಶಿಕ್ಷಣ ಸಂಸ್ಥೆಯ ವರ್ಷಿನಿ ಚಂಗಪ್ಪ ಸಿ.ಸಿ. ಅವರು ಪಡೆದುಕೊಂಡರು ಚಿತ್ರಕಲೆಯಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆಯ ಶ್ರೇಯ ಮರಿಯಾ ಆಂಟೋನಿ(ಪ್ರಥಮ), ನಾಪೋಕ್ಲು ಶ್ರೀ ರಾಮಟ್ರಸ್ಟ್‌ ಆಂಗ್ಲ ಮಾದ್ಯಮ ಶಾಲೆಯ ಸಿ. ತಾನ್ಯ ಅಯ್ಯಪ್ಪ(ದ್ವಿತೀಯ), ಮಡಿಕೇರಿಯ ಜಿ.ಎಂ.ಪಿ ಪ್ರೌಢಶಾಲೆಯ ವಿನಯ್‌ ಎನ್‌(ತೃತೀಯ) ಸ್ಥಾನ ಪಡೆದುಕೊಂಡರು.

ಸಮಾದಾನಕರ ಬಹುಮಾನವನ್ನು ವಿರಾಜಪೇಟೆ ತ್ರಿವೇಣಿ ಶಾಲೆಯ ಸಿ.ಪಿ.ತುಶ್ಯಂತ್‌, ಚೇರಂಬಾಣೆ ಶ್ರೀ ರಾಜೇಶ್ವರಿ ಪ್ರೌಢಶಾಲೆಯ ಕುಶನ್‌ ಎ.ಎಲ್‌ ಅವರು ಪಡೆದುಕೊಂಡರು.

ಗಣ್ಯರ ಉಪಸ್ಥಿತಿ
ಮಾಜಿ ಸಚಿವ‌ ಎಂ.ಸಿ.ನಾಣಯ್ಯ, ವಿಧಾನ ಪರಿಷತ್‌ ಸದಸ್ಯರಾದ ಎಂ.ಪಿ.ಸುನೀಲ್‌ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಜಿ.ಪಂ.ಸಿಇಒ ಕೆ.ಲಕ್ಷಿ¾àಪ್ರಿಯ, ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ, ಜನರಲ್‌ ತಿಮ್ಮಯ್ಯ ಫೋರಂನ ಅಧ್ಯಕ್ಷರಾದ ನಿವೃತ್ತ ಕರ್ನಲ್‌ ಕೆ.ಸಿ.ಸುಬ್ಬಯ್ಯ, ಸಂಚಾಲಕರಾದ ಮೇಜರ್‌ ಬಿ.ಎ.ನಂಜಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್‌, ಪೌರಾಯುಕ್ತರಾದ ರಮೇಶ್‌, ತಹಶೀಲ್ದಾರ್‌ ಮಹೇಶ್‌, ಕೊಡವ ಮಕ್ಕಡ ಕೂಟದ ಅಧ್ಯಕ್ಷ‌ ಬೊಳ್ಳಜಿರ ಅಯ್ಯಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಜರಿದ್ದರು.
ಜನರಲ್‌ ತಿಮ್ಮಯ್ಯ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ, ನಾಡಗೀತೆ ಹಾಡಿದರು,

Advertisement

Udayavani is now on Telegram. Click here to join our channel and stay updated with the latest news.

Next