Advertisement
ಜ. 5ರಂದು ಬರೋಡಾದ ಗುಜರಾತ್ ರಿಫೈನರಿ ಕಮ್ಯುನಿಟಿ ಸಭಾಗೃಹದಲ್ಲಿ ನಡೆದ ತುಳು ಸಂಘ ಬರೋಡಾ ಇದರ 31ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರೋಡಾ ತುಳು ಸಂಘವು ಕಳೆದ ಮೂರು ದಶಕಗಳಿಂದ ನಾಡು-ನುಡಿ, ಭಾಷೆಯ ಬೆಳವಣಿಗೆಗೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಸಂಘದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ತುಳುವರು ಒಗ್ಗಟ್ಟಿನಿಂದ ಭಾಗವಹಿಸಿದಾಗ ಸಂಘಟನೆ ಮತ್ತಷ್ಟು ಬಲಗೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಘದ ಕಾರ್ಯಚಟುವಟಿಕೆಗಳನ್ನು ತುಳುವರ ಮನೆ-ಮನಗಳಿಗೆ ಮುಟ್ಟಿಸುವ ಕಾರ್ಯದಲ್ಲಿ ನಾವೆಲ್ಲರು ತೊಡಗೋಣ ಎಂದರು, ಸಂಘದ ಮತ್ತು ಶಶಿ ಶೆಟ್ಟಿ ಅಭಿಮಾನಿ ಬಳಗದ ಪರವಾಗಿ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಗೆ 1 ಲ. ರೂ. ಗಳ ದೇಣಿಗೆ ನೀಡಿದರು.
Related Articles
Advertisement
ಅತಿಥಿಗಳು ಸಾಂದರ್ಭಿಕವಾಗಿ ಮಾತನಾಡಿ ತುಳು ಸಂಘದ ಕಾರ್ಯವೈಖರಿಯನ್ನು ಪ್ರಶಂಸಿಸಿ ತುಳುರತ್ನ ಪುರಸ್ಕೃತ ಜಯರಾಮ ಶೆಟ್ಟಿ ಅವರ ಅನುಪಮ ಸೇವೆ ಸ್ಮರಿಸಿ ಅಭಿನಂದಿಸಿ ಶತಾಯುಷ್ಯ ಹಾರೈಸಿದರು. ತುಳು ಸಂಘ ಬರೋಡಾ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಪುರಸ್ಕೃತರನ್ನು ಪರಿಚಯಿಸಿದ್ದು, ಜಿನರಾಜ್ ಪೂಜಾರಿ ಸಮ್ಮಾನ ಪತ್ರ ವಾಚಿಸಿದರು.
ಸಂಘದ ಪುಟಾಣಿಗಳು ಪ್ರಾರ್ಥನೆಗೈದರು. ಕೋಶಾಧಿಕಾರಿ ವಾಸು ಪೂಜಾರಿ, ಮಹಿಳಾಧ್ಯಕ್ಷೆ ಡಾ| ಶರ್ಮಿಳಾ ಎಂ. ಜೈನ್, ಮಹಿಳಾ ಕಾರ್ಯದರ್ಶಿ ಮಂಜುಳಾ ಬಿ. ಗೌಡ ಸೇರಿದಂತೆ ಇತರ ಪದಾಧಿಕಾರಿಗಳು ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎ. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾಧ್ಯಕ್ಷೆಡಾ| ಶರ್ಮಿಳಾ ಎಂ. ಜೈನ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ತುಳು ಸಂಘದ ಸದಸ್ಯೆಯರು, ಮಕ್ಕಳು ವೈವಿಧ್ಯಮಯ ನೃತ್ಯಾವಳಿ, ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಕಲಾವಿದರಿಂದ “ಬೇಡರ ಕಣ್ಣಪ್ಪ’ ಯಕ್ಷಗಾನ ಪ್ರದರ್ಶನಗೊಂಡಿತು. ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಮುದ್ದು ಅಂಚನ್ ಮತ್ತು ಗಂಗಾಧರ ಸುವರ್ಣ ಭಾಗವತಿಕೆಯಲ್ಲಿ ಸಹಕರಿಸಿದರು. ಜಯರಾಮ ಶೆಟ್ಟಿ ಸುರತ್ಕಲ್ ಮತ್ತು ಕುಸುಮ ಜಯರಾಮ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.
–ಚಿತ್ರ-ವರದಿ: ರೊನಿಡಾ ಮುಂಬಯಿ