Advertisement
ಇತ್ತೀಚೆಗೆ ಹೆಚ್ಚಿನವರು ರಾತ್ರಿ ಹೊತ್ತಿನಲ್ಲಿ ಆಹಾರ ಸೇವನೆಯನ್ನು ಮಾಡದೇ ಇರುವುದನ್ನು ಗಮನಿಸಬಹುದು. ಇದರಿಂದಾಗಿ ದೇಹ ತೂಕ ಇಳಿಯುತ್ತದೆ, ಕೊಬ್ಬು ಬೆಳೆಯುವುದಿಲ್ಲ ಎಂಬ ನಂಬಿಕೆ. ಅದರೆ ಈ ಹವ್ಯಾಸ ನಮ್ಮ ಆರೋಗ್ಯದ ಮೆಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಬೆಳಗ್ಗಿನ ಉಪಹಾರ ರಾಜನಂತೆಯೂ, ಮಧ್ಯಾಹ್ನದ ಭೋಜನ ರಾಜ ಕುಮಾರನಂತೆ ಮತ್ತು ರಾತ್ರಿಯ ಊಟ ಬಡವನಂತೆಯೂ ಇರಲಿ ಎಂಬ ನಾಣ್ನುಡಿಯೊಂದಿದೆ, ಇದು ನಮ್ಮ ಊಟೋಪಚಾರ ಹೇಗಿದ್ದರೆ ಆರೋಗ್ಯಪೂರ್ಣ ಜೀವನವನ್ನು ಸಾಗಿಸುವುದು ಸಾಧ್ಯ ಎಂಬುದನ್ನು ಸಾದರಪಡಿಸುತ್ತದೆ. ರಾತ್ರಿ ಹೊತ್ತು ಸೇವಿಸುವ ಆಹಾರದ ಪ್ರಮಾಣ ಕೊಂಚ ಕಡಿಮೆಯಾಗಿರಬೇಕು. ಏಕೆಂದರೆ ದೈಹಿಕ ಶ್ರಮದ ವಿಚಾರಕ್ಕೆ ಬಂದಾಗ ರಾತ್ರಿ ವೇಳೆ ನಾವು ದೇಹ ದಣಿಸುವ ಕೆಲಸ ಮಾಡುವುದಿಲ್ಲ. ಬದಲಾಗಿ ವಿಶ್ರಾಂತಿ, ನಿದ್ದೆಯಲ್ಲಿರುತ್ತೇವೆ. ತಿಂದ ಆಹಾರ ಜೀರ್ಣವಾಗುವ ಪ್ರಕ್ರಿಯೆಯ ವೇಗ ಕುಂಠಿತವಾಗುತ್ತದೆ. ಹಾಗಾಗಿ ಕಡಿಮೆ ಪ್ರಮಾಣದ ಆಹಾರ ಸ್ವೀಕರಿಸಿದಲ್ಲಿ ಆರೋಗ್ಯದ ದೃಷ್ಟಿಯಿಂದ ಉತ್ತಮ. ರಾತ್ರಿ ವೇಳೆ ಊಟ ಬಿಟ್ಟ ತತ್‌ಕ್ಷಣವೇ ಕೆಲವರಲ್ಲಿ ಈ ಸಮಸ್ಯೆಗಳು ಗೋಚರಿಸಿದರೆ, ಇನ್ನು ಕೆಲವರಿಗೆ ಕೆಲವು ದಿನಗಳ ಬಳಿಕ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳೂ ಇವೆ. ರಾತ್ರಿ ಊಟ ಹಿತ ಮಿತ ಆಹಾರದೊಂದಿಗೆ ಆರೋಗ್ಯಪೂರ್ಣ ಬದಕು ನಮ್ಮದಾಗಲಿ.
Related Articles
ಇನ್ನು ರಾತ್ರಿ ಊಟ ಬಿಡುವ ಅಭ್ಯಾಸವಿದ್ದವರಲ್ಲಿ ಸಮಸ್ಯೆಗಳೆಂದರೆ ನಿತ್ರಾಣ, ನಿದ್ರಾ ಹೀನತೆ, ತಲೆ ಸುತ್ತುವಿಕೆ ಇತ್ಯಾದಿಗಳು. ದೇಹಕ್ಕೆ ಅವಶ್ಯವಿರುವಷ್ಟು ಆಹಾರವನ್ನು ನಾವು ಪೂರೈಕೆ ಮಾಡದೇ ಹೋದಲ್ಲಿ ರಕ್ತ ಪರಿಚಲನೆಯಲ್ಲಿಯೂ ವ್ಯತ್ಯಯವಾಗುತ್ತದೆ. ಇದು ಇನ್ನಿತರ ಗಂಭೀರ ಪರಿಣಾಮದ ಸಮಸ್ಯೆಗಳನ್ನು ಸೃಷ್ಟಿಸುವ ಕೆಲಸವನ್ನೂ ಮಾಡುತ್ತದೆ.
Advertisement
•ಭುವನ ಬಾಬು, ಪುತ್ತೂರು