Advertisement

2019ರ ಚುನಾವಣೆಗೆ ಮತ ಪತ್ರವೇ ಇರಲಿ 

06:00 AM Aug 03, 2018 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ವರ್ಷಕ್ಕೂ ಕಡಿಮೆ ಅವಧಿ ಬಾಕಿ ಇರುವಾಗಲೇ, ಇವಿಎಂ ವಿರುದ್ಧ ವಿಪಕ್ಷಗಳು ಮತ್ತೆ ಸಮರ ಸಾರಲು ನಿರ್ಧರಿಸಿವೆ. ಮುಂದಿನ ವಾರ 17 ಬಿಜೆಪಿಯೇತರ ರಾಜಕೀಯ ಪಕ್ಷಗಳು ದಿಲ್ಲಿಯಲ್ಲಿ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಿವೆ ಎಂದು ಟಿಎಂಸಿ ಸಂಸದ ಡೆರೆಕ್‌ ಒಬ್ರಿಯಾನ್‌ ಹೇಳಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣ ವಾಗಿ ಬ್ಯಾಲೆಟ್‌ ಪೇಪರ್‌(ಮತಪತ್ರ)ಗಳನ್ನೇ ಬಳಕೆ  ಮಾಡಬೇಕು. ಯಾವುದೇ ಕಾರಣಕ್ಕೂ ಇವಿಎಂಗಳನ್ನು ಬಳಸಬಾರದು ಎಂದು ಈ ಪಕ್ಷಗಳು ಆಗ್ರಹಿಸಲು ನಿರ್ಧರಿಸಿವೆ. ಹೋರಾ ಟ ಯಾವ ರೀತಿ ಇರಬೇಕು ಎಂಬ ಬಗ್ಗೆ ಮುಂದಿನ ವಾರದ ಸಭೆಯಲ್ಲಿ ತೀರ್ಮಾನಿಸ ಲಾಗುವುದು. ಆ ನಂತರ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಇವಿಎಂ ಬಳಕೆ ಮಾಡದಂತೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next