ದೇವನಹಳ್ಳಿ: ರಾಜ್ಯದಲ್ಲಿ 40 ಲಕ್ಷ ಯಾದವ ಸಮುದಾಯದ ಮತದಾರರು ಇದ್ದು, ಶಾಸಕರು ಮಾತ್ರ ಒಬ್ಬರು. ಹೀಗಾಗಿ ನಮ್ಮ ಹಕ್ಕುಗಳನ್ನು ಹೋರಾಟ ಮಾಡಿ ಪಡೆದುಕೊಳ್ಳಬೇಕಾಗಿದೆ ಎಂದು ದೊಡ್ಡಬಳ್ಳಾಪುರ ತಾಲೂಕು ಯಾದವ ಸಂಘದ ಅಧ್ಯಕ್ಷ ಪದ್ಮರಾಜ್ ತಿಳಿಸಿದರು.
ನಗರದ ಇತಿಹಾಸ ಪ್ರಸಿದ್ಧ ಕೋಟೆ ವೇಣುಗೋಪಾಲಸ್ವಾಮಿದೇವಾಲಯದಆವರಣದಲ್ಲಿದೇವನಹಳ್ಳಿ ತಾಲೂಕು ಯಾದವ ಸಂಘದ ವತಿಯಿಂದ ದೊಡ್ಡಬಳ್ಳಾಪುರದಘಾಟಿಸುಬ್ರಮಣ್ಯದೇವಾಲಯದ ಬಳಿ ಯಾದವ ಸಮುದಾಯದ ವತಿಯಿಂದ ನಿರ್ಮಿಸಿರುವ ಸಮುದಾಯ ಭವನಕ್ಕೆ ಒಂದು ಲಕ್ಷ ರೂ.ನ ಚೆಕ್ ಸ್ವೀಕರಿಸಿ ಮಾತನಾಡಿದರು.
ದೊಡ್ಡಬಳ್ಳಾಪುರ, ಘಾಟಿ ಸುಬ್ರಮಣ್ಯದಲ್ಲಿ ಯಾದವ ಸಮುದಾಯದ ವತಿಯಿಂದ 4.5ಕೋಟಿ ರೂ. ವೆಚ್ಚದಲ್ಲಿ ಸಮುದಾಯದ ಭವನ ನಿರ್ಮಾಣ ಮಾಡಲಾಗಿದೆ. ದೇವನಹಳ್ಳಿ ಯಾದವ ಸಂಘ 1 ಲಕ್ಷ ರೂ. ಚೆಕ್ ನೀಡುತ್ತಿದ್ದು ಡೈನಿಂಗ್ ಟೇಬಲ್ ವ್ಯವಸ್ಥೆ ನೀಡುವಂತೆ ಮನವಿ ಮಾಡಿದರು.
ದೇವನಹಳ್ಳಿ-ತೂಬಗೆರೆಯಲ್ಲಿ 22 ಸಾವಿರ ಯಾದವ ಸಮುದಾಯದ ಮತದಾರರು ಇದ್ದಾರೆ. ಯಾವುದೇ ಪ್ರಾತಿನಿತ್ಯ ನೀಡುತ್ತಿಲ್ಲ. ವಿಧಾನಸಭಾ ಕ್ಷೇತ್ರದಲ್ಲಿ ಯಾದವ ಸಮುದಾಯದವರೇ ಯಾವುದೇ ಪಕ್ಷದ ಗೆಲುವಿಗೆ ನಿರ್ಣಾಯಕರಾಗಲಿದ್ದಾರೆ ಎಂಬುವುದನ್ನು ವಿವಿಧ ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕೆಂದರು. ತಾಲೂಕು ಯಾದವ ಸಂಘದ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎನ್.ರಘು, ಸಮುದಾಯ ಭವನಕ್ಕೆ ಅಗತ್ಯವಿರುವ ಪರಿಕರ ಖರೀದಿಗೆ 2 ಲಕ್ಷ ರೂ. ನೀಡಲಾಗುವುದು. ಮುಂದಿನ ಸಭೆಯಲ್ಲಿ ನಿರ್ಧರಿಸಿ, ಇನ್ನು 1 ಲಕ್ಷ ನೀಡಲಾಗುವುದು. ಸದ್ಯಕ್ಕೆ 1 ಲಕ್ಷದ ಚೆಕ್ ಅನ್ನು ನೀಡುತ್ತಿದ್ದೇವೆ. ಡೈನಿಂಗ್ ಟೇಬಲ್ ನೆರವಿಗೆ ಮನವಿ ಮಾಡಿದ್ದು, ಈ ವಿಚಾರವಾಗಿ ಸಂಘದಲ್ಲಿ ಚರ್ಚಿಸಿ ತೀರ್ಮಾನಕೈಗೊಳ್ಳಲಾಗುವುದು ಎಂದರು.
ದೊಡ್ಡಬಳ್ಳಾಪುರ ತಾಲೂಕು ಯಾದವ ಸಂಘದ ನಿರ್ದೇಶಕ ಲಕ್ಷ್ಮೀ ನಾರಾಯಣ್, ಹಿಂದುಳಿದ ವರ್ಗದಲ್ಲಿರುವ ಯಾದವ ಸಮುದಾಯವನ್ನು ಮೇಲ್ವರ್ಗದ ಸಮುದಾಯದವರು ರಾಜಕೀಯವಾಗಿ ಬೆಳೆಯಲು ಬಿಡುವುದಿಲ್ಲ ಎಂದು ಬೇಸರ ವ್ಯಕಪಡಿಸಿದ ರು.
ಪುರಸಭಾ ಸದಸ್ಯ ಬಾಂಬೆ ನಾರಾಯಣಸ್ವಾಮಿ, ತಾಲೂಕು ಯಾದವ ಸಂಘದ ಉಪಾಧ್ಯಕ್ಷ ವಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಖಜಾಂಚಿ ಬಿ.ಎಲ್.ಶ್ರೀಧರ್‌ಮೂರ್ತಿ, ಜಂಟಿ ಕಾರ್ಯದರ್ಶಿ ಎಂ.ಆನಂದ್, ಸಂಘಟನಾ ಕಾರ್ಯದರ್ಶಿ ಎನ್.ವೆಂಕಟೇಶ್, ನಿರ್ದೇಶಕರಾದ ಕೃಷ್ಣಮೂರ್ತಿ, ಸಿ.ಎಂ.ವೆಂಕಟೇಶ್, ಗೋವಿಂದರಾಜು,ಅಶ್ವತ್ಥನಾರಾಯಣ್, ನಾರಾಯಣಸ್ವಾಮಿ, ಬಿ.ಮಂಜುನಾಥ್, ಆರ್.ನಾಗರಾಜ್, ತಾಲೂಕು ಯುವ ಯಾದವ ಸಂಘದ ಗೌರವಾಧ್ಯಕ್ಷ ಮರಿಯಪ್ಪ,ಅಧ್ಯಕ್ಷ ರವಿ ಇದ್ದರು.